ಬಹುಭಾಷಾ ನಟಿ ಹಾಗೂ ಭರತನಾಟ್ಯಂ ಕಲಾವಿದೆ ಡ್ಯಾನ್ಸರ್ ಶೋಭನಾ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟಿಗೆ ಒಮಿಕ್ರೋನ್ ವೇರಿಯೆಂಟ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟಿ ತಮಗೆ ಗಂಟು ನೋವು ಇರುವುದಾಗಿ ಹೇಳಿದ್ದಾರೆ.
51 ವರ್ಷದ ನಟಿ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ನಟಿ ಇತ್ತೀಚೆಗೆ ತನ್ನ ಆರೋಗ್ಯದ ಬಗ್ಗೆ ತನ್ನ ಫಾಲೋವರ್ಸ್‌ಗೆ ಅಪ್ಡೇಟ್ ಕೊಟ್ಟಿದ್ದಾರೆ.
ಜಾಗರೂಕತೆಯಿಂದ ಮತ್ತು ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ಹೊರತಾಗಿಯೂ ನಟಿ COVID-19 ಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಶೋಭನಾ ಹೇಳಿದ್ದಾರೆ.
ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ Omicron ಪಾಸಿಟಿವ್ ಬಂದಿದೆ. ಕೀಲು ನೋವು, ಶೀತ ಮತ್ತು ಗಂಟಲು ಗೀರು ಮತ್ತು ಅದರ ನಂತರ ಸ್ವಲ್ಪ ಗಂಟಲು ನೋವು- ಇದು ಮೊದಲ ದಿನ ಮಾತ್ರ ಕಂಡು ಬಂದ ಲಕ್ಷಣಗಳು. ಪ್ರತಿದಿನ ನನ್ನ ರೋಗಲಕ್ಷಣಗಳು ಕಡಿಮೆಯಾಗುತ್ತಿವೆ ಎಂದು ಚೆನ್ನೈ ಮೂಲದ ನಟಿ ಸೆಲ್ಫಿ ಜೊತೆಗೆ ಬರೆದಿದ್ದಾರೆ.
ನಟಿ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಕ್ಕೆ ಸಂತೋಷಗೊಂಡಿದ್ದಾರೆ ಎಂದು ಜೇಳಿದ್ದಾರೆ. ಹಾಗೆಯೇ ಎಲ್ಲರೂ ಅದೇ ರೀತಿ ಲಸಿಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ಈ ರೂಪಾಂತರವು ಸಾಂಕ್ರಾಮಿಕ ರೋಗದ ಅಂತ್ಯವನ್ನು ಸೂಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮಣಿಚಿತ್ರತಾಳು ನಟಿ ಬರೆದಿದ್ದಾರೆ.
ಬಹುಭಾಷಾ ನಟಿ Kushboo Sundarಗೆ ಕೊರೋನಾ ಪಾಸಿಟಿವ್!
ಕೇಂದ್ರ ಆರೋಗ್ಯ ಸಚಿವಾಲಯವು ನವೀಕರಿಸಿದ ಮಾಹಿತಿಯ ಪ್ರಕಾರ, ಭಾರತದಲ್ಲಿ 1,79,723 ಕೊರೊನಾವೈರಸ್ ಸೋಂಕುಗಳು ಒಂದೇ ದಿನದಲ್ಲಿ ಏರಿಕೆಯಾಗಿದೆ. ಒಟ್ಟು ಕೇಸ್ 3,57,07,727 ಕ್ಕೆ ತಲುಪಿದೆ. ಇದರಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾದ ಕೇಸ್‌ಗಳಲ್ಲಿ 4,033 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಸೇರಿವೆ.