ನಟ ಅಜಿತ್ ಕುಮಾರ್ ಅವರ ಪತ್ನಿ ಶಾಲಿನಿ 2001ರಲ್ಲಿ ಸಿನಿಮಾ ರಂಗ ಬಿಟ್ಟರು. ಸಿನಿಮಾಗೆ ಬಂದ ಕೆಲವೇ ದಿನಗಳಲ್ಲಿ ಒಳ್ಳೆಯ ಹೆಸರು ಗಳಿಸಿದರು. ಅವರು ತಮಿಳಿನಲ್ಲಿ ವಿಜಯ್ ಜೊತೆ `ಕಾದಲುಕ್ಕು ಮರಿಯಾದೈ`, ಅಜಿತ್ ಜೊತೆ `ಅಮರಕಾಲಂ`, ವಿಜಯ್ ಜೊತೆ `ಕಣ್ಣುಕ್ಕುಲ್ ನಿಲವು`, ಮಾಧವನ್ ಜೊತೆ `ಸಖಿ` ಚಿತ್ರಗಳನ್ನು ಮಾಡಿದ್ದಾರೆ. ಕೊನೆಯದಾಗಿ ಅವರು ಪ್ರಶಾಂತ್ ಜೊತೆ `ಪಿರಿಯಧ ವರಂ ವೇಂಡುಂ` ಚಿತ್ರದಲ್ಲಿ ಕಾಣಿಸಿಕೊಂಡರು. ಆ ನಂತರ ನಟನೆಗೆ ನಿವೃತ್ತಿ ಘೋಷಿಸಿದರು. ಆ ನಂತರ ಹೀರೋ ಅಜಿತ್ ಅವರನ್ನು ಮದುವೆಯಾಗಿ ಸೆಟಲ್ ಆದರು.