ಸಮಂತಾ.. ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ `ಅಲ್ಲುಡು ಶೀನು` ಸಿನಿಮಾ ಮಾಡಿದ್ದರು. ಬೆಲ್ಲಂಕೊಂಡಗೆ ಅದು ಮೊದಲ ಸಿನಿಮಾ. ನಾಯಕನಾಗಿ ಪರಿಚಯವಾಗುತ್ತಿದ್ದ ಸಿನಿಮಾ. ಆಗಲೇ ಸಮಂತಾ ಸ್ಟಾರ್ ನಟಿ. ಮಹೇಶ್ ಬಾಬು, ಪವನ್ ಕಲ್ಯಾಣ್, ಎನ್ ಟಿ ಆರ್ ರಂತಹ ಸೂಪರ್ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಾ ಬ್ಯುಸಿಯಾಗಿದ್ದ ಸಮಯ. ಆ ಸಮಯದಲ್ಲಿ ಹೊಸ ಹುಡುಗನ ಜೊತೆ ಸಿನಿಮಾ ಮಾಡುವುದು ಸಾಮಾನ್ಯ ವಿಷಯವಲ್ಲ, ಅದು ವೃತ್ತಿಜೀವನಕ್ಕೂ ತೊಂದರೆಯಾಗಬಹುದು, ಆದರೆ ನಿರ್ಮಾಪಕರಿಗಾಗಿ ಸಾಹಸ ಮಾಡಿದರು ಸಮಂತಾ.