ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ವೃತ್ತಿಜೀವನದಲ್ಲಿಯೇ ಅತಿ ದೊಡ್ಡ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ನಟಿಸಲಿದ್ದಾರೆ ಎಂಬುದು ತಿಳಿದ ವಿಚಾರ. ಭಾರತದಲ್ಲಿಯೇ ಅತಿ ದೊಡ್ಡ ಸಿನಿಮಾವಾಗಿ ಈ ಚಿತ್ರ ತೆರೆಗೆ ಬರಲಿದೆ. ಈಗಾಗಲೇ 1000 ಕೋಟಿಗೂ ಹೆಚ್ಚು ಬಜೆಟ್ ಎಂದು ಪ್ರಚಾರ ನಡೆಯುತ್ತಿದೆ. ಮಹೇಶ್ ಬಾಬು ತಮ್ಮ ಅದ್ಭುತ ಅಭಿನಯದಿಂದ ಪ್ರತಿ ಚಿತ್ರದಲ್ಲೂ ಮನಸೆಳೆಯುತ್ತಾರೆ. ಯಾವುದೇ ಚಿತ್ರವಾದರೂ ಮಹೇಶ್ ಪ್ರಯತ್ನದಲ್ಲಿ ಲೋಪ ಎಲ್ಲಿಯೂ ಕಾಣುವುದಿಲ್ಲ.
ಮಹೇಶ್ ತಮ್ಮ ನೆಚ್ಚಿನ ನಿರ್ದೇಶಕರು ಶಂಕರ್, ಮಣಿರತ್ನಂ ಮತ್ತು ರಾಜಮೌಳಿ ಎಂದು ಹೇಳಿದ್ದಾರೆ. ಈ ಮೂವರು ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆ ಇದೆ ಎಂದೂ ಹೇಳಿದ್ದಾರೆ. ತಮ್ಮ ನೆಚ್ಚಿನ ನಟರ ಬಗ್ಗೆ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ತಮಿಳಿನಲ್ಲಿ ನೆಚ್ಚಿನ ನಟ ಯಾರು ಎಂದು ನಿರೂಪಕರು ಕೇಳಿದಾಗ, ಮಹೇಶ್ ತಕ್ಷಣ ರಜನಿಕಾಂತ್ ಎಂದು ಉತ್ತರಿಸಿದರು.
ತೆಲುಗಿನಲ್ಲಿ ಯಾರು ಎಂದು ಕೇಳಿದಾಗ ಮಹೇಶ್ ನೀಡಿದ ಉತ್ತರ ಅಚ್ಚರಿ ಮೂಡಿಸಿತು. ನನ್ನ ತಂದೆಯೇ ನನ್ನ ನೆಚ್ಚಿನ ನಟ, ಅದರಲ್ಲಿ ಯಾವುದೇ ಸಂದೇಹವಿಲ್ಲ. ತಂದೆ ಹೊರತುಪಡಿಸಿ ತೆಲುಗಿನಲ್ಲಿ ನೆಚ್ಚಿನ ನಟ ಚಿರಂಜೀವಿ ಎಂದು ಮಹೇಶ್ ಉತ್ತರಿಸಿದರು.
ಚಿರಂಜೀವಿಗೂ ಮಹೇಶ್ ಬಾಬು ಅಂದ್ರೆ ತುಂಬಾ ಇಷ್ಟ. ಅತಡು ಸಿನಿಮಾ ಸಮಯದಲ್ಲೇ ಚಿರಂಜೀವಿ ಮಹೇಶ್ ಅಭಿನಯಕ್ಕೆ ಮನಸೋತರು. ಆಗ ಚಿರು ಬಹಿರಂಗವಾಗಿ ಅತಡು ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸರಿಲೇರು ನೀಕೆವ್ವರು ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ತಿಳಿದ ವಿಚಾರ.