ಸಮಂತಾ ಹಾಕಿರೋ ಸೀರೆ ಎಷ್ಟು ಕಡಿಮೆ ಬೆಲೆಗೆ ಸಿಗ್ತಿದೆ ನೋಡಿ; ಫೋಟೋ ವೈರಲ್

First Published | Oct 30, 2023, 3:00 PM IST

ತಮ್ಮ ಬ್ರ್ಯಾಂಡ್‌ ಬಟ್ಟೆನೇ ಧರಿಸಿಕೊಂಡು ಪ್ರಚಾರ ಮಾಡುತ್ತಿರುವ ಸಮಂತಾ. ಕಡಿಮೆ ಬೆಲೆ ಎಂದು ತಿಳಿದು ನೆಟ್ಟಿಗರು ಶಾಕ್....

ಟಾಲಿವುಡ್ ಮತ್ತು ಕಾಲಿವುಡ್ ಸುಂದರಿ ಸಮಂತಾ ರುತ್ ಪ್ರಭು ಯಾವ ಬಟ್ಟೆ ಧರಿಸಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಆಗುತ್ತದೆ.

 ಇತ್ತೀಚಿಗೆ ಸಮಂತಾ ಪ್ರಭು ರೆಡ್ ಹಾಟ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ನೋಡೋ ಸಖತ್ ಗ್ರ್ಯಾಂಡ್ ಆಗಿದೆ ಆದರೆ ಬೆಲೆ ಸಖತ್ ಕಡಿಮೆ.

Tap to resize

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಧರಿಸಿರುವ ಸೀರೆ ಬೆಲೆ 3,499 ರೂಪಾಯಿ ಎಂದು ಹಾಕಿದ್ದಾರೆ. ಇದು ಸಖಿ ವರ್ಡ್‌ ಎನ್ನುವ ಬ್ರ್ಯಾಂಡ್.

ಸ್ವತಃ ಸಮಂತಾ ಓಪನ್ ಮಾಡಿರುವ ಬಟ್ಟೆ ಬ್ರ್ಯಾಂಡ್ ಸಖಿ ವರ್ಡ್‌. ಇದರಲ್ಲಿ ತುಂಬಾ ಕಡಿಮೆ ಬೆಲೆ ಅದ್ಭುತವಾಗಿರುವ ಬಟ್ಟೆ ಸಿಗುತ್ತದೆ ಎನ್ನುತ್ತಾರೆ ಫ್ಯಾನ್ಸ್‌.

ಸಾಮಾನ್ಯವಾಗಿ ಸಮಂತಾ ಯಾವುದೇ ಕಾರ್ಯಕ್ರಮಕ್ಕೆ ಅಥವಾ ಸಣ್ಣ ಪುಟ್ಟ ಫಂಕ್ಷನ್‌ಗಳಲ್ಲಿ ಕಾಣಿಸಿಕೊಂಡರೂ ತಮ್ಮ ಬ್ರ್ಯಾಂಡ್‌ ಬಟ್ಟೆನೇ ಧರಿಸುವುದು.  
 

ಈ ಸೀರೆ ಬೆಲೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಮಂತಾ ಧರಿಸಿರುವ ಸೀರೆ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಸಮಂತಾನೇ ಆಶ್ಚರ್ಯ ಆಗ್ಬೋದು. 

Latest Videos

click me!