ಸಾಯಿ ಪಲ್ಲವಿ ನಾಯಕಿಯರಲ್ಲಿ ತುಂಬಾ ಡಿಫರೆಂಟ್. ಸಿನಿಮಾ ಮಾಡಬೇಕು ಅಂದ್ರೆ ಕಥೆ ಇಷ್ಟ ಆಗಬೇಕು, ಪಾತ್ರ ಇಷ್ಟ ಆಗಬೇಕು, ನಟನೆಗೆ ಅವಕಾಶ ಇರಬೇಕು. ಹೀರೋ ಪ್ರಾಬಲ್ಯ ಇರಬಾರದು. ಹೀಗೆ ಅವರು ಹಾಕಿಕೊಂಡಿರುವ ತತ್ವಗಳು ತುಂಬಾನೇ ಇವೆ. ಎಕ್ಸ್‌ಪೋಸಿಂಗ್ ಮಾಡಲ್ಲ, ಚಿಕ್ಕ ಬಟ್ಟೆ ಹಾಕಲ್ಲ, ಓವರ್ ರೊಮ್ಯಾನ್ಸ್ ಇರಲ್ಲ. ಪಕ್ಕದ ಮನೆ ಹುಡುಗಿ ತರ ಇರ್ತಾರೆ ಸಾಯಿ ಪಲ್ಲವಿ. ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಕೂಡ ಹಾಗೇ ಇರುತ್ತವೆ. ಇಷ್ಟೆಲ್ಲಾ ನಿಯಮಗಳ ನಡುವೆ ನಾಯಕಿಯಾಗಿ ಯಶಸ್ವಿಯಾಗಿ ಮುಂದುವರಿಯುವುದು ಕಷ್ಟ ಅಲ್ವಾ? ಬೇರೆ ಯಾರಾದರೂ ಆದರೆ ಇಂಡಸ್ಟ್ರಿಯಿಂದ ಔಟ್ ಆಗಿ ಬಿಡ್ತಿದ್ರು.