'ವನಂಗಾನ್' ಚಿತ್ರದಲ್ಲಿ, ಮಿಷ್ಕಿನ್, ಸಮುದ್ರಖಣಿ, ನಟಿ ರಿತಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿವಿ ಪ್ರಕಾಶ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಆರ್.ಪಿ.ಗುರುದೇವ್ ಛಾಯಾಗ್ರಹಣ ಮಾಡಿದ್ದರೆ, ಸತೀಶ್ ಸೂರ್ಯ ಸಂಕಲನ ಮಾಡಿದ್ದಾರೆ. ಸಿನಿಮಾದಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ ಸುಮಾರು 25 ವರ್ಷಗಳನ್ನು ಪೂರೈಸಿದ್ದರೂ, ನಿರ್ದೇಶಕ ಬಾಲ ಕೇವಲ 10 ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ಚಿತ್ರಗಳು ಅಭಿಮಾನಿಗಳ ಮನಗೆಲ್ಲುವಲ್ಲಿ ವಿಫಲವಾಗಿವೆ. 'ವನಂಗಾನ್' ಮೂಲಕ ಬಾಲ ಮತ್ತೆ ಯಶಸ್ಸು ಕಾಣುತ್ತಾರೆ ಎಂದು ನಿರೀಕ್ಷಿಸಲಾಗಿದೆ.