ರಿತು ವರ್ಮಾ 'ಒಕೆ ಒಕ ಜೀವಿತಂ', 'ವರುಡು ಕಾವಲೇನು', 'ಸ್ವಾಗ್', 'ಮಾರ್ಕ್ ಆಂಟೋನಿ' ರೀತಿಯ ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಸಂದೀಪ್ ಕಿಶನ್ ಜೊತೆಯಾಗಿ ನಟಿಸುತ್ತಿರುವ 'ಮಜಾಕಾ' ಸಿನಿಮಾ ಶಿವರಾತ್ರಿಗೆ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ರಿತು ವರ್ಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.