ರಜಿನಿಗೆ ಹತ್ತಿರ ಇರೋರಿಗೆ ಗೊತ್ತು ಅವರಿಗೆ ಒಣಮೀನು ಸಾಂಬಾರ್ ಅಂದ್ರೆ ಎಷ್ಟು ಇಷ್ಟ ಅಂತ, ರಜಿನಿನೇ ಅವರ ಹಳೆ ಇಂಟರ್ವ್ಯೂಗಳಲ್ಲಿ ಇದರ ಬಗ್ಗೆ ಹೇಳಿದ್ದಾರೆ. ಈ ತರ ರಜಿನಿಗೆ ತುಂಬಾ ನಾನ್ ವೆಜ್ ಊಟದ ಫ್ರೆಂಡ್ಸ್ ಇದ್ರಂತೆ. ಇಷ್ಟೊಂದು ಹುಚ್ಚು ನಾನ್ ವೆಜ್ ಪ್ರಿಯರಾಗಿದ್ದ ರಜಿನಿ, ಒಂದು ಟೈಮಲ್ಲಿ ಅವರ ಆರೋಗ್ಯ ಸರಿ ಇಲ್ಲ ಅಂತ ನಾನ್ ವೆಜ್ ತಿನ್ನೋದನ್ನೇ ಬಿಟ್ಟುಬಿಟ್ಟರಂತೆ. ಈಗ ಅವರಿಗೆ ಇಷ್ಟವಾದ ಊಟ ಅಂದ್ರೆ ತರಕಾರಿ ಊಟಗಳು. ಅದ್ರಲ್ಲೂ ಸಲಾಡ್ ಜಾಸ್ತಿ ತಿಂತಾರಂತೆ.