ಆಸ್ಕರ್ ವಿನ್ನರ್ ಎಂಎಂ ಕೀರವಾಣಿ ಈ ಹಾಡಿಗೆ ಸಂಗೀತ ನೀಡಿದ್ದಾರೆ, ಚಂದ್ರಬೋಸ್ ಈ ಹಾಡನ್ನು ಬರೆದಿದ್ದಾರೆ. ಮಂಗ್ಲಿ, ರಾಹುಲ್ ಸಿಪ್ಲಿಗುಂಜ್, ರಮ್ಯಾ ಬೆಹರಾ, ಯಾಮಿನಿ ಘಂಟಸಾಲ, ಐರಾ ಉಡುಪಿ, ಮೋಹನ ಭೋಗರಾಜು, ವೈಷ್ಣವಿ ಕಣ್ಣನ್, ಸುದೀಪ್ ಕುಮಾರ್, ಅರುಣ ಮೇರಿ ಹಾಡಿಗೆ ಇನ್ನಷ್ಟು ಮಾಧುರ್ಯ ತಂದಿದ್ದಾರೆ. ಕೀರವಾಣಿ ಅದ್ಭುತವಾದ ಸಂಗೀತಕ್ಕೆ ತೆಲುಗಿನಲ್ಲಿ ಚಂದ್ರಬೋಸ್, ತಮಿಳಿನಲ್ಲಿ ಪಾ. ವಿಜಯ್, ಮಲಯಾಳಂನಲ್ಲಿ ಮಂಕುಂಬು ಗೋಪಾಲಕೃಷ್ಣನ್, ಕನ್ನಡದಲ್ಲಿ ವರದರಾಜ್, ಹಿಂದಿಯಲ್ಲಿ ಅಬ್ಬಾಸ್ ಟೈರೆವಾಲಾ ಸಾಹಿತ್ಯ ನೀಡಿದ್ದಾರೆ.