ಸುಶಾಂತ್ ಸಾವಿಗೆ ವರ್ಷ, ರಿಯಾ ಹಂಚಿಕೊಂಡ ಸಂದೇಶ

First Published | May 28, 2021, 10:31 PM IST

ಮುಂಬೈ(ಮೇ  28)  ನಟಿ ರಿಯಾ ಚಕ್ರವರ್ತಿ ಸೋಶಿಯಲ್ ಮೀಡಿಯಾ ಮೂಲಕ ಸ್ಪೂರ್ತಿಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.  ಗೆಳೆಯ, ಒಡನಾಡಿ  ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರದ ಒಂದು ವರ್ಷದಲ್ಲಿ ಅನೇಕ ಬದಲಾವಣೆ ಆಕೆಯ ಜೀವನದಲ್ಲಿ ಆಗಿಹೋಗಿದೆ.

2020ರ ಜೂನ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ತಮ್ಮದೆ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ನಟನ ಕುಟುಂಬ ಈ ಸಾವಿಗೆ ರಿಯಾ ಕಾರಣ ಎಂದು ಆರೋಪ ಮಾಡಿತ್ತು.
Tap to resize

ಸಿಬಿಐ ರಿಯಾರನ್ನು ಅನೇಕ ಸುತ್ತಿನ ವಿಚಾರಣೆಗೆ ಒಳಪಡಿಸಿತ್ತು.
ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ರಿಯಾ ಒಂದು ತಿಂಗಳು ಜೈಲುವಾಸವನ್ನು ಅನುಭವಿಸಿದ್ದರು.
ಇದೀಗ ರಿಯಾ ಸೋಶಿಯಲ್ ಮೀಡಿಯಾ ಮುಖೇನ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
'ನೀವು ನಾನು ಹೇಳುವ ಈ ಮಾತನ್ನು ನಂಬಲೇಬೇಕು, ಹೆಚ್ಚಿನ ಕಷ್ಟಗಳು ಹೆಚ್ಚಿನ ಶಕ್ತಿ ತಂದುಕೊಡುತ್ತವೆ' ಎಂದು ಬರೆದುಕೊಂಡಿದ್ದಾರೆ.
ಕೊರೋನಾ ಕಾಲದಲ್ಲಿಯೂ ನಟಿ ನೆರವಿಗೆ ನಿಲ್ಲುವ ಕೆಲಸ ಮಾಡಿದ್ದರು.
ಯಾರಾದರೂ ಸಮಸ್ಯೆಗೆ ಸಿಲುಕಿದರೆ ಸೋಶಿಯಲ್ ಮೀಡಿಯಾ ಮೂಲಕ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದ್ದರು. 2018ರ ನಂತರ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಟಿ ಬಾಲಿವುಡ್ ಗೆ ಕಂ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ಇದ್ದಾರೆ.

Latest Videos

click me!