ಗುಲಾಬಿ ಮುಡಿದ ನ್ಯಾಷ್‌ನಲ್ ಕ್ರಶ್‌ ರಶ್ಮಿಕಾ ಮಂದಣ್ಣ: 'ನನ್ನ ಕಿರೀಟ ಹೇಗಿದೆ' ಎಂದು ಪ್ರಶ್ನೆ ಮಾಡಿದ್ಯಾಕೆ?

Published : Feb 18, 2025, 11:30 PM ISTUpdated : Feb 19, 2025, 06:59 AM IST

ಸದ್ಯ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದಾರೆ. ಆದರೆ ಅದು 'ಛಾವಾ' ಸಿನಿಮಾ ವಿಚಾರದಲ್ಲಿ ಅಲ್ಲ, ಹೌದು! ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

PREV
17
ಗುಲಾಬಿ ಮುಡಿದ ನ್ಯಾಷ್‌ನಲ್ ಕ್ರಶ್‌ ರಶ್ಮಿಕಾ ಮಂದಣ್ಣ: 'ನನ್ನ ಕಿರೀಟ ಹೇಗಿದೆ' ಎಂದು ಪ್ರಶ್ನೆ ಮಾಡಿದ್ಯಾಕೆ?

ನ್ಯಾಷ್‌ನಲ್ ಕ್ರಶ್‌ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಭಾರತದ ಟಾಪ್‌ ನಾಯಕಿಯರಲ್ಲಿ ಒಬ್ಬರು. ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ ಎಂದೂ ಹೇಳಬಹುದು. ಮೂರು ವರ್ಷಗಳಲ್ಲಿ ಮೂರು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ. 

27

ಮತ್ತೊಂದು ಸಾವಿರ ಕೋಟಿ ಸಿನಿಮಾಗೆ ಸಜ್ಜಾಗಿದ್ದಾರೆ. ಇತ್ತೀಚೆಗೆ 'ಪುಷ್ಪ 2' ಸಿನಿಮಾ ಸುಮಾರು ಎರಡು ಸಾವಿರ ಕೋಟಿ ಗಳಿಸಲು ಕಾರಣರಾಗಿದ್ದಾರೆ. ಇದಕ್ಕೂ ಮೊದಲು 'ಅನಿಮಲ್‌' ಸಿನಿಮಾದಲ್ಲೂ ಧೂಳೆಬ್ಬಿಸಿದ್ದರು.

37

ಈಗ 'ಛಾವಾ' ಸಿನಿಮಾದ ಮೂಲಕ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ ಅನ್ನು ಅಲುಗಾಡಿಸಿದ್ದಾರೆ. ವಿಕ್ಕಿ ಕೌಶಲ್‌ ಜೊತೆ ನಟಿಸಿರುವ 'ಛಾವಾ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

47

ಇದೀಗ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದಾರೆ. ಆದರೆ ಅದು 'ಛಾವಾ' ಸಿನಿಮಾ ವಿಚಾರದಲ್ಲಿ ಅಲ್ಲ, ಹೌದು! ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

57

ಮುದ್ದಾಗಿ ಸೆಲ್ಫಿಗೆ ಪೋಸ್ ಕೊಟ್ಟಿರುವ ರಶ್ಮಿಕಾ, ಕೂದಲನ್ನು ಫ್ರೀ ಬಿಟ್ಟಿದ್ದು, ಗುಲಾಬಿ ಹೂ ಅನ್ನು ಮುಡಿದಿದ್ದಾರೆ. 'ಜೊತೆಗೆ ಹಲೋ ಎಲ್ಲರಿಗೂ.. ನನ್ನ ಕಿರೀಟ ಹೇಗಿದೆ' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗೆ ತರೇಹವಾರಿ ಕಮೆಂಟ್‌ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.
 

67

ಇನ್ನು ಛಾವಾ ಸಿನಿಮಾ ಕೇವಲ ಹಿಂದಿ ಆವೃತ್ತಿಯಲ್ಲೇ ಬಿಡುಗಡೆಯಾದ ಈ ಚಿತ್ರ ಈಗಾಗಲೇ 150 ಕೋಟಿ ರೂ. ಗಳಿಸಿದೆ. ಇದರಿಂದ ಬಾಲಿವುಡ್‌ಗೆ ಮತ್ತೆ ಚೈತನ್ಯ ತುಂಬಿದೆ. ಇತ್ತೀಚೆಗೆ ಬಾಲಿವುಡ್‌ ಚಿತ್ರಗಳು ಹೆಚ್ಚು ಪ್ರತಿಕ್ರಿಯೆ ಪಡೆಯುತ್ತಿರಲಿಲ್ಲ. 

77

ಅಪರೂಪಕ್ಕೆ ಒಂದೆರಡು ಹೊರತುಪಡಿಸಿ ಸತತ ಹಿಟ್‌ಗಳು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ 'ಛಾವಾ' ಚೆನ್ನಾಗಿ ಓಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವುದು ಗೊತ್ತೇ ಇದೆ. ತಮ್ಮ ನಟನೆಯಿಂದಲೂ ಮೋಡಿ ಮಾಡಿದ್ದಾರೆ ಈ ನ್ಯಾಷ್‌ನಲ್ ಕ್ರಶ್‌.

Read more Photos on
click me!

Recommended Stories