ಎಂಗೇಜ್‌ಮೆಂಟ್ ರೂಮರ್ಸ್ ನಡುವೆ ಪ್ಲಾಸ್ಟಿಕ್ ಕವರ್ ಮೈಗೆ ಸುತ್ತಿಕೊಂಡ ರಶ್ಮಿಕಾ: ಟೋಪಿ ಹಾಕಿದ್ಯಾರು ಎಂದ ಫ್ಯಾನ್ಸ್!

Published : Jan 14, 2024, 03:00 AM IST

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ರೂಮರ್ಸ್ ಹರಿದಾಡುತ್ತಿರುವ ನಡುವೆ ರಶ್ಮಿಕಾ ವೆಕೇಷನ್ ಎಂಜಾಯ್ ಮಾಡ್ತಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

PREV
17
ಎಂಗೇಜ್‌ಮೆಂಟ್ ರೂಮರ್ಸ್ ನಡುವೆ ಪ್ಲಾಸ್ಟಿಕ್ ಕವರ್ ಮೈಗೆ ಸುತ್ತಿಕೊಂಡ ರಶ್ಮಿಕಾ: ಟೋಪಿ ಹಾಕಿದ್ಯಾರು ಎಂದ ಫ್ಯಾನ್ಸ್!

ಅನಿಮಲ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ, ಸದ್ಯ ಜಾಲಿ ಟ್ರಿಪ್ ಮಾಡ್ತಿರುವಂತೆ ಕಾಣ್ತಿದೆ. ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

27

ಫೋಟೋಗಳಲ್ಲಿ ಪ್ಲಾಸ್ಟಿಕ್ ಕವರ್ ಅನ್ನು ಮೈಗೆ ಸುತ್ತಿಕೊಂಡಿರುವ ರಶ್ಮಿಕಾ ಮಂದಣ್ಣ ಯಾವುದೋ ಗಲ್ಲಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಚಿತ್ರ ವಿಚಿತ್ರ ಟೋಪಿಗಳನ್ನು ಧರಿಸಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಟೋಪಿಗಳು ರಶ್ಮಿಕಾಗೆ ಬಹಳ ಇಷ್ಟವಾದುವಂತೆ.

37

ರಶ್ಮಿಕಾ ಮಂದಣ್ಣ ಪ್ರಸ್ತುತ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಏಷ್ಯಾದ ಕೆಲವು ದೇಶಗಳನ್ನು ಸುತ್ತುತ್ತಿರುವ ರಶ್ಮಿಕಾ ಮಂದಣ್ಣ ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದಾರೆ.

47

ರಶ್ಮಿಕಾ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಾಣುತ್ತಿರುವ ಟೋಪಿಗಳು ಅವರಿಗೆ ಬಹಳ ಹಿಡಿಸಿದ ಕಾರಣ ಅವನ್ನು ಖರೀದಿಸಿ ತಂದಿದ್ದಾರಂತೆ. ವಿಶೇಷವಾಗಿ ರಶ್ಮಿಕಾ ಮಂದಣ್ಣಗೆ ಟೋಪಿ ಹಾಕಿದ್ದು ಯಾರಪ್ಪ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

57

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

67

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಟಾಲಿವುಡ್​​ನಲ್ಲಿ ಕೆಲ ಬ್ಲಾಕ್ ಬಸ್ಟರ್  ಸಿನಿಮಾಗಳನ್ನು ನೀಡಿದ್ದಾರೆ. ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ಅನಿಮಲ್ ಸಿನಿಮಾ ಮೂಲಕ ಬಿಗ್ ಸಕ್ಸಸ್ ಕಂಡಿದ್ದಾರೆ.

77

ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅನಿಮಲ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ಸದ್ಯ ರಶ್ಮಿಕಾ ಪುಷ್ಪ 2, ಗರ್ಲ್​ಫ್ರೆಂಡ್, ಬಾಲಿವುಡ್​ನ ಎರಡು ಸಿನಿಮಾ, ತಮಿಳಿನ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Read more Photos on
click me!

Recommended Stories