ಕೊಡವ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ: ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ನಂಜೀ ಎಂದು ಹಾಡಿದ ಪಡ್ಡೆಹೈಕ್ಳು!

First Published | Jun 24, 2024, 9:24 PM IST

ರಶ್ಮಿಕಾ ಮಂದಣ್ಣ ತೆಲುಗು ಮಾತ್ರವಲ್ಲದೆ, ಬಾಲಿವುಡ್‌ನಲ್ಲಿಯೂ ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.‌ ಈ ನಡುವೆ ತನ್ನ ಹುಟ್ಟೂರು ಕೊಡಗಿಗೆ ನಟಿ ಭೇಟಿ ನೀಡಿದ್ದಾರೆ. 

ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತನ್ನ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 

ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸ್ನೇಹಿತೆಯ ಮದುವೆಯಲ್ಲಿ ರಾಯಲ್‌ ಬ್ಲೂ ಸೀರೆಯಲ್ಲಿ ನಟಿ ಮಿರ ಮಿರ ಅಂತ ಮಿಂಚಿದ್ದಾರೆ.

Tap to resize

ಕೈ ತುಂಬಾ ಸಿನಿಮಾಗಳಿವೆ. ಮುಂಬೈ, ಹೈದರಾಬಾದ್, ಫಾರಿನ್ ಅಂತ ಶೂಟಿಂಗ್‌ಗಾಗಿ ತಿರುಗಾಡುತ್ತಲೇ ಇರುತ್ತಾರೆ. ಇದರ ನಡುವೆ ಕೆಲಸಕ್ಕೆ ಬ್ರೇಕ್ ಕೊಟ್ಟು ಗೆಳತಿಯ ಮದುವೆಗೆ ರಶ್ಮಿಕಾ ಹಾಜರಿ ಹಾಕಿದ್ದಾರೆ. ಸ್ನೇಹಿತೆಗೆ ವಿಶೇಷವಾಗಿ ಶುಭಕೋರಿದ್ದಾರೆ. ತನ್ನ ಊರನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಟಿ ತಿಳಿಸಿದ್ದಾರೆ.

ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಜೊತೆಗೆ ನಾನು ಮನೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವಿಶೇಷವಾಗಿ ತನ್ನ ಊರಿನ ಶೈಲಿ ಕೊಡಗಿನ ಲುಕ್‌ನಲ್ಲಿ ನೀಲಿ ಸೀರೆಯುಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ. ಇದನ್ನು ಕಂಡ ಫ್ಯಾನ್ಸ್‌ ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ನಂಜೀ ಎಂದು ಕಾಮೆಂಟ್ ಹಾಕಿದ್ದಾರೆ.
 

ಇನ್ನು ನಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯ ಸಿನಿಮಾ ಅನಿಮಲ್​ 2023ರ ಡಿಸೆಂಬರ್​​ನಲ್ಲಿ ತೆರೆಕಂಡು ಸೂಪರ್​ ಡೂಪರ್ ಹಿಟ್​ ಆಗಿದೆ. ಮುಂದಿನ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಇದೇ ಸಾಲಿನಲ್ಲಿ ತೆರೆಕಾಣಲಿದೆ. 

ಪುಷ್ಪ ರಾಜ್ ಪಾತ್ರದಲ್ಲಿ ನಟಿಸಲಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಇದಲ್ಲದೇ ದಿ ಗರ್ಲ್​ಫ್ರೆಂಡ್​​​, ಛಾವಾ, ರೈನ್​ಬೋ ಪ್ರಾಜೆಕ್ಟ್​ಗಳು ನಟಿ ಬಳಿ ಇದ್ದು, ಕೆಲ ದಿನಗಳ ಹಿಂದಷ್ಟೇ ಸಲ್ಮಾನ್​ ಖಾನ್​ ಜೊತೆಗೆ ಸಿಖಂದರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

Latest Videos

click me!