ಬ್ರೇಕಪ್ ಆಗಿ ಖಿನ್ನತೆಗೆ ಜಾರಿದ್ದ ಈ ಮುದ್ದು ಮುಖದ ನಟಿ, ಯಶ್ ಮುಂದಿನ ಸಿನಿಮಾದ ನಾಯಕಿ

First Published | Sep 19, 2023, 1:34 PM IST

ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾದಲ್ಲಿ ಅಭಿನಯಿಸೋಕೆ ಆಸೆ ಪಡ್ತಿದ್ದಾರೆ. ಇದೀಗ ಯಶ್19ನೇ ಸಿನಿಮಾ ಬರ್ತಿದೆ. ಜೊತೆಗೂ ಚಿತ್ರದ ನಾಯಕಿ ಅನ್ನೋ ಕುತೂಹಲವೂ ಹೆಚ್ಚಗಿದೆ. ಇದ್ರ ನಾಯಕಿ ಬ್ರೇಕಪ್ ಆಗಿ ಖಿನ್ನತೆಗೆ ಜಾರಿದ್ದ ಈ ಸೌತ್ ಸ್ಟಾರ್ ಅಂತೆ.

ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾದ ಬಗ್ಗೆ ಫ್ಯಾನ್ಸ್‌ ವಲಯದಲ್ಲಿ  ಚರ್ಚೆ ಜೋರಾಗಿದೆ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾದಲ್ಲಿ ಅಭಿನಯಿಸೋಕೆ ಆಸೆ ಪಡ್ತಿದ್ದಾರೆ. ಇದೀಗ ರಾಕಿ 19ನೇ ಸಿನಿಮಾ ಬರ್ತಿದೆ. ಇದಕ್ಕೆ ನಟಿ ಮಲಯಾಳಂ ನಟಿ ಸಂಯುಕ್ತಾ ಮೆನನ್ ಎಂದು ತಿಳಿದುಬಂದಿದೆ.

ಸಂಯುಕ್ತಾ ಮೆನನ್ ಸದ್ಯ ದಕ್ಷಿಣಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ಚೆಲುವೆ.2016ರಿಂದ ಮಲೆಯಾಳಂ ಸಿನಿ ರಂಗದಲ್ಲಿ ಬೆಳಗುತ್ತಿರೋ ಸಂಯುಕ್ತಾ ತೆಲುಗು, ತಮಿಳು ಚಿತ್ರರಂಗಕ್ಕೆ ಚಿರಪರಿಚಿತ ಹೆಸರು.  ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿರೋ ಸಂಯುಕ್ತಾ ಮೆನನ್‌ ರಾಕಿಯ ನೆಕ್ಸ್ಟ್‌ ಮೂವಿಗೆ ಹೀರೋಯಿನ್ ಆಗ್ತಾರೆ ಅನ್ನೋದು ಲೇಟೆಸ್ಟ್ ಮಾಹಿತಿ. 

Tap to resize

ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್​ನಲ್ಲಿ ಕೂಡಾ ತುಂಬಾ ಸಿಂಪಲ್ ಆಗಿರುವ ಸಂಯುಕ್ತಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾಗಿರುವ ಸಂಯುಕ್ತಾ ಮೆನನ್‌, ಮಲಯಾಳಂನ ಪಾಪ್‌ಕಾರ್ನ್‌ ಚಿತ್ರದ ಮೂಲಕ ನಟನೆ ಆರಂಭಿಸಿದರು. ನಂತರ ತೀವಂಡಿ, ಒರು ಯಮಂದನ್ ಪ್ರೇಮಕಥಾ, ಕಲ್ಕಿ, ವೆಲ್ಲಂ, ಕಡುವ ಸೇರಿದಂತೆ ಹಲವಾರು ಯಶಸ್ವೀ ಚಿತ್ರದಲ್ಲಿ ನಟಿಸಿದ್ದಾರೆ.

ವಾತಿ ಸಿನಿಮಾದಲ್ಲಿ ಧನುಷ್​ಗೆ ಜೋಡಿಯಾಗಿ ಹಳ್ಳಿಯ ಟೀಚರ್ ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಭೀಮ್ಲಾ ನಾಯಕ್ (2022) ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶದ ನಂತರ , ಬಿಂಬಿಸಾರದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರು.(2022).  ಸೌತ್​ನಲ್ಲಿ ನಟಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.  

ವೈವಾಹಿಕ ಜೀವನದ ಕುರಿತಾಗಿ ಈ ಹಿಂದೆ ಮಾತನಾಡಿದ್ದ ನಟಿ ಪ್ರೀತಿಸಿದವರನ್ನೇ ಮದುವೆಯಾಗಬೇಕು. ಪ್ರೀತಿ, ಮದುವೆ ಎರಡೂ ಬೇರೆ ಬೇರೆಯಲ್ಲ ಎಂದಿದ್ದರು. ಮಾತ್ರವಲ್ಲ ನನಗೆ ಕೆಟ್ಟದಾಗಿ ಬ್ರೇಕಪ್ ಅನುಭವವಾಗಿದೆ ಎಂಬುದಾಗಿ ತಿಳಿಸಿದ್ದರು.

ಈ ವರ್ಷದ ಆರಂಭದಲ್ಲಿ, ಸಂಯುಕ್ತಾ ತಮ್ಮ ಹೆಸರಿನಿಂದ ಮೆನನ್ ಎಂಬ ಉಪನಾಮವನ್ನು ಕೈಬಿಟ್ಟರು. 'ನಾನು ಸಮಾನತೆ, ಮಾನವೀಯತೆ ಮತ್ತು ಪ್ರೀತಿಯನ್ನು ಸುತ್ತಲೂ ನೋಡಲು ಬಯಸುತ್ತೇನೆ. ಹೀಗಾಗಿ ಉಪನಾಮವನ್ನು ಇಟ್ಟುಕೊಳ್ಳುವುದು ನಾನು ಬಯಸಿದ್ದಕ್ಕೆ ಬಹಳ ವಿರೋಧಾತ್ಮಕವಾಗಿದೆ' ಎಂದು ಹೇಳಿದ್ದರು.

ನಟಿ ತಮ್ಮ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮಲಯಾಳಂನಲ್ಲಿ ಬರೆದಿರುವಂತೆ ಹಚ್ಚೆಯ ಅರ್ಥವನ್ನು ವಿವರಿಸಿದ್ದಾರೆ. ತನ್ನ ಟ್ಯಾಟೂದ ಅರ್ಥ ಅಲೆಮಾರಿ ಎಂದು ಸಂಯುಕ್ತಾ ಹೇಳಿದರು, ಅವಳು ಎರಡು ವರ್ಷಗಳ ಹಿಂದೆ ಒಂಟಿಯಾಗಿ ಪ್ರಯಾಣಿಸುವಾಗ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾಗಿ ತಿಳಿಸಿದರು.

ಗೀತು ಮೋಹನ್‌ ದಾಸ್‌ ಅವರ ಯಶ್‌ 19 ಸಿನಿಮಾದಲ್ಲಿ ಟೊವಿನೋ ಥಾಮಸ್‌, ಆಸಿಫ್ ಅಲಿ, ರಾಣಾ ದಗ್ಗುಬಾಟಿ ಮತ್ತು ಜಾನ್ ಅಬ್ರಹಾಂ ಸಹ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.  ಆದರೆ ಈ ಎಲ್ಲದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಅಪ್ಡೇಡ್‌ ಸಿಗುವ ಸಾಧ್ಯತೆಯಿದೆ.

Latest Videos

click me!