ಒಂದೇ ವರ್ಷದಲ್ಲಿ 3ನೇ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ನಟಿ ಮೀರಾ, ಮತ್ತೆ ಸಿಂಗಲ್ ಸಿಗ್ನಲ್ ಸೂಚನೆ ಕೊಟ್ಟಿದ್ದಾರೆ. ಸ್ವತಃ ಮೀರಾ ವಾಸುದೇವನ್ ತಮ್ಮ ಡಿವೋರ್ಸ್ ಘೋಷಿಸಿದ್ದಾರೆ. ತಾನೀಗ ಸಿಂಗಲ್ ಎಂದು ಸೂಚನೆ ಕೊಟ್ಟಿದ್ದಾರೆ.
ಬಾಲಿವುಡ್ ಸೇರಿ ದಕ್ಷಿಣ ಭಾರತ ಸಿನಿಮಾಗಳಲ್ಲಿ ಮಿಂಚಿದ ನಟಿ ಮೀರಾ ವಾಸುದೇವನ್ ಇದೀಗ ಮತ್ತೆ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಮೀರಾ ವಾಸುದೇವನ್ ತಮ್ಮ ಮೂರನೇ ಮದುವೆಗೂ ಗುಡ್ ಬೈ ಹೇಳಿದ್ದಾರೆ. ಮೂರನೇ ಮದುವೆಯಾಗಿ ಒಂದು ವರ್ಷದ ಒಳಗೆ ಪತಿಯಿಂದ ದೂರವಾಗಿದ್ದಾರೆ.
26
ಇನ್‌ಸ್ಟಾಗ್ರಾಂನಲ್ಲಿ ಡಿವೋರ್ಸ್ ಘೋಷಿಸಿದ ಮೀರಾ
ಮೀರಾ ವಾಸುದೇವನ್ ಮೂರನೇ ಪತಿಯಿಂದ ದೂರವಾಗಿರುವುದಾಗಿ ಸ್ವತಃ ಮೀರಾ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಮೂಲಕ ಮೀರಾ ವಾಸುದೇವನ್ ತಮ್ಮ ವಿಚ್ಚೇದನ ಘೋಷಿಸಿದ್ದಾರೆ. ಆಗಸ್ಟ್ 2025ರಿಂದ ನಾನು ಸಿಂಗಲ್, ಈಗ ನನ್ನ ಬದುಕಿನ ಅತ್ಯಂತ ಸುಂದರ ಸಮಯದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
36
ಮೂರನೇ ಪತಿ ವಿಪಿನ್ ಪಿಯಿಂದ ಮೀರಾ ದೂರ ದೂರ
ಮೂರನೇ ಪತಿ , ಸಿನಿಮಾಟೋಗ್ರಾಫರ್ ವಿಪಿನ್ ಪಿಯಿಂದ ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೋ ಇಲ್ಲವೋ ಅನ್ನೋ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಮೇ 24, 2024ರಲ್ಲಿ ವಿಪಿನ್ ಪಿ ಜೊತೆ ಮದುವೆಯಾಗಿದ್ದರು. ಇದು ಮೀರಾ ವಾಸುದೇವನ್ ಅವರ ಮೂರನೇ ಮದುವೆಯಾಗಿತ್ತು.
ಮೀರಾ ವಾಸುದೇವನ್ 2005ರಲ್ಲಿ ಮೊದಲ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಖ್ಯಾತ ಸಿನಿಮಾಟೋಗ್ರಾಫರ್ ಅಶೋಕ್ ಕುಮಾರ್ ಪುತ್ರ ವಿಶಾಲ್ ಅಗರ್ವಾಲ್ ಜೊತೆ ಮದುವೆಯಾಗಿದ್ದರು. ಈ ದಾಂಪತ್ಯ ಜೀವನ ಐದು ವರ್ಷಗಳ ಕಾಲ ಮುಂದುವರಿದಿತ್ತು. ಆದರೆ 2010ರಲ್ಲಿ ಮೀರಾ ವಾಸುದೇವನ್ ಹಾಗೂ ವಿಶಾಲ್ ಅಗರ್ವಾಲ್ ವಿಚ್ಚೇದನ ಪಡೆದುಕೊಂಡು ದಾಂಪತ್ಯ ಜೀವನದಿಂದ ಹೊರಬಂದಿದ್ದರು
56
2012ರಲ್ಲಿ ಎರಡನೇ ಮದುವೆ
2010ರಲ್ಲಿ ಮೊದಲ ಡಿವೋರ್ಸ್ ಪಡೆದ ಬಳಿಕ ಎರಡು ವರ್ಷಗಳ ಕಾಲ ವೈವಾಹಿಕ ಜೀವನ ಕುರಿತು ಯೋಚಿಸಿರಲಿಲ್ಲ. 2012ರಲ್ಲಿ ಮೀರಾ ವಾಸುದೇವನ್ ಮಲೆಯಾಳಂ ನಟ ಜಾನ್ ಕೊಕ್ಕೆನ್ ಜೊತೆ ವಿವಾಹವಾಗಿದ್ದರು.ಈ ವೈವಾಹಿಕ ಜೀವನ ನಾಲ್ಕು ವರ್ಷ ಮುಂದುವರಿದಿತ್ತು. 2016ರಲ್ಲಿ ಎರಡನೇ ಮದುವೆಯೂ ಮುರಿದು ಬಿತ್ತು.
2012ರಲ್ಲಿ ಎರಡನೇ ಮದುವೆ
66
ತೆಲುಗು ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ
ಮೀರಾ ವಾಸುದೇವನ್ ತೆಲುಗಿನ ಗೋಲ್‌ಮಾಲ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಬಳಿಕ ಹಿಂದಿ, ತಮಿಳು, ಮಲೆಯಾಳಂ ಸಿನಿಮಾಗಲ್ಲಿ ಜನಪ್ರಿಯರಾಗಿದ್ದರು. 2005ರಲ್ಲಿ ನಟ ಮೋಹನ್‌ಲಾಲ್ ಜೊತೆ ತನ್ಮಮಾತ್ರ ಸಿನಿಮಾ ಮೂಲಕ ಮಲೆಯಳಾಂ ಸಿನಿಮಾಗೆ ಎಂಟ್ರಿಕೊಟ್ಟಿದ್ದರು. ಸಿನಿಮಾ, ಧಾರವಾಹಿ, ಟಿವಿ ಕಾರ್ಯಕ್ರಮಗಳಲ್ಲೂ ಮೀರಾ ವಾಸುದೇವನ್ ಸಕ್ರಿಯರಾಗಿದ್ದಾರೆ.