Mrunal Thakur: 'ನಿಮಗೆ ಮದುವೆ ಆಗಿದೆಯಾ' ಎಂದು ಕೇಳಿದ ವಿದೇಶಿ ಫ್ಯಾನ್‌ಗೆ ಸೀತಾ ರಾಮಂ ನಟಿ ಹೀಗಾ ಅನ್ನೋದು!

Published : Dec 09, 2023, 03:00 AM IST

ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ 'ಹಾಯ್​ ನಾನ್ನ' ಎಂಬ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡು ತೆರೆ ಮೇಲೆ ಸದ್ದು ಮಾಡುತ್ತಿದ್ದಾರೆ. 

PREV
17
Mrunal Thakur: 'ನಿಮಗೆ ಮದುವೆ ಆಗಿದೆಯಾ' ಎಂದು ಕೇಳಿದ ವಿದೇಶಿ ಫ್ಯಾನ್‌ಗೆ ಸೀತಾ ರಾಮಂ ನಟಿ ಹೀಗಾ ಅನ್ನೋದು!

ಎಂದಿನಂತೆ ತಮ್ಮ ಅಮೋಘ ಅಭಿನಯದಿಂದ ಮೃಣಾಲ್ ಠಾಕೂರ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಡಿಸೆಂಬರ್​ 7ರಂದು ತೆರೆಕಂಡ ಈ ಸಿನಿಮಾ ಭಾವನಾತ್ಮಕವಾಗಿ ಜನರನ್ನು ಸೆಳೆದಿದೆ. ಯಶ್ನಾ ಪಾತ್ರಕ್ಕೆ ಜೀವ ತುಂಬಿರುವ ಮೃಣಾಲ್​ ಠಾಕೂರ್​ ಸಹಜವಾಗಿ ನಟಿಸಿ, ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 

27

'ಫ್ಯಾಮಿಲಿ ಸ್ಟಾರ್'​ ಸಿನಿಮಾ ಚಿತ್ರೀಕರಣಕ್ಕಾಗಿ ಈ ಬ್ಯೂಟಿ ನ್ಯೂಜೆರ್ಸಿಗೆ ತೆರಳಿದ್ದಾರೆ. 'ಹಾಯ್​ ನಾನ್ನ' ಸಿನಿಮಾ ಪ್ರಚಾರವಾಗಿ ಅಲ್ಲಿನ ಥಿಯೇಟರ್​ವೊಂದರಲ್ಲಿ ಸಿನಿ ಪ್ರೇಮಿಗಳ​ ಜೊತೆ ಸಂವಾದ ನಡೆಸಿದ್ದಾರೆ. 

37

ಈ ವೇಳೆ ಮಾತನಾಡಿದ ಮೃಣಾಲ್​, 'ಹಾಯ್​ ನಾನ್ನ' ನನ್ನ ಪಾಲಿಗೆ ವಿಶೇಷ ಸಿನಿಮಾ. ನಾನಿ ಅವರು ಸದ್ಯ ಭಾರತದಲ್ಲಿದ್ದು, ಶೀಘ್ರದಲ್ಲೇ ಇಲ್ಲಿಗೆ ಆಗಮಿಸಲಿದ್ದಾರೆ. 'ಫ್ಯಾಮಿಲಿ ಸ್ಟಾರ್'​ ಶೂಟಿಂಗ್​ಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. 

47

ನಾನಿ ಬಂದ ನಂತರ ಮತ್ತೊಮ್ಮೆ ನಿಮ್ಮನ್ನು ಭೇಟಿಯಾಗಲಿದ್ದೇನೆ. ಸೀತಾರಾಮಂ ಸಿನಿಮಾದ ಸಮಯದಲ್ಲೂ ನಾನು ಇಲ್ಲಿಗೆ ಬಂದಿದ್ದೆ. ಇದೀಗ 'ಹಾಯ್​ ನಾನ್ನ' ಮೂಲಕ ಇಲ್ಲಿಯ ಪ್ರೇಕ್ಷಕರನ್ನು ಭೇಟಿಯಾಗುತ್ತಿರುವುದು ನನ್ನ ಅದೃಷ್ಟ ಎಂದು ನ್ಯೂಜೆರ್ಸಿ ಸಿನಿ ಪ್ರೇಮಿಗಳನ್ನು ಉದ್ದೇಶಿಸಿ ಹೇಳಿದರು. 

57

ಈ ವೇಳೆ ಅಲ್ಲೇ ಇದ್ದ ಸಿನಿ ಪ್ರೇಮಿಯೊಬ್ಬರು, 'ನಿಮಗೆ ಮದುವೆ ಆಗಿದೆಯಾ?' ಎಂದು ಕೇಳಿದರು. ಇದಕ್ಕೆ ನಗುತ್ತಾ, 'ಆದಷ್ಟು ಬೇಗ ಮದುವೆಯಾಗುತ್ತೇನೆ' ಎಂದು ಮೃಣಾಲ್​ ಠಾಕೂರ್​ ಉತ್ತರಿಸಿದರು.

67

ಮೃಣಾಲ್ ಠಾಕೂರ್ ಹೈದರಾಬಾದ್​ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ. ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿರುವ ಹಿನ್ನೆಲೆ ನಟಿ ಹೈದಾರಾಬಾದ್​ಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ.

77

ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ 'ವಿಟ್ಟಿ ದಂಡು' ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories