ಪತಿ ಜೈಲಲ್ಲಿದ್ರೂ ಮಹಾಲಕ್ಷ್ಮಿಗೆ ಸೀರೆಯದೇ ಚಿಂತೆ: ಗಂಡನ ಕರೆಸೋ ಪ್ಲ್ಯಾನ್ ಇಲ್ವಾ ಎಂದ ನೆಟ್ಟಿಗರು!

Published : Oct 03, 2023, 01:30 AM IST

ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ಕಾಲಿವುಡ್‌ನ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ. ಇದೀಗ ಗಂಡ ಜೈಲಿನಲ್ಲಿದ್ದರೂ ಆರಾಮವಾಗಿ ಹೊಸ ಸೀರೆಯುಟ್ಟು ಮಹಾಲಕ್ಷ್ಮಿ ಪೋಸ್ ಕೊಟ್ಟಿದ್ದಾರೆ.   

PREV
16
ಪತಿ ಜೈಲಲ್ಲಿದ್ರೂ ಮಹಾಲಕ್ಷ್ಮಿಗೆ ಸೀರೆಯದೇ ಚಿಂತೆ: ಗಂಡನ ಕರೆಸೋ ಪ್ಲ್ಯಾನ್ ಇಲ್ವಾ ಎಂದ ನೆಟ್ಟಿಗರು!

ಇತ್ತಿಚೆಗಷ್ಟೇ  ರವೀಂದರ್-ಮಹಾಲಕ್ಷ್ಮಿ ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಸಡಗರದಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್​ ಎದುರಾಗಿತ್ತು. ನಿರ್ಮಾಪಕ ರವೀಂದರ್​ ಅವರನ್ನು ಇದಾಗಲೇ ಪೊಲೀಸರು ಅರೆಸ್ಟ್​ ಮಾಡಿದ್ದು ಅವರು ಬಂಧನದಲ್ಲಿದ್ದಾರೆ.  

26

ಪತಿ ಜೈಲಲ್ಲಿದ್ರೂ ಮಹಾಲಕ್ಷ್ಮಿ ಆರಾಮವಾಗಿ ಹೊಸ ಸೀರೆಯುಟ್ಟು ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗಿವೆ.

36

ನಿರೂಪಕಿ ಮಹಾಲಕ್ಷ್ಮಿ ಕಪ್ಪು ಬಣ್ಣದ ಸೀರೆಯುಟ್ಟು ಆಕ್ಸೈಡ್ ಜ್ಯುವೆಲ್ಲರಿಗಳನ್ನು ಧರಿಸಿ ಸಖತ್ತಾಗಿ ಕಾಣಸಿಕೊಂಡಿದ್ದಾರೆ. ಅತ್ತ ಗಂಡ ಜೈಲಿನಲ್ಲಿದ್ದರೆ ಇತ್ತ ಮಹಾಲಕ್ಷ್ಮಿ ಅವರು ಸೀರೆಯುಟ್ಟು ಫೋಟೋಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ.

46

ಗಂಡನ ಜೈಲಿನಿಂದ ಹೊರಗೆ ತರೋದು ಬಿಟ್ಟು ನೀವೇನು ಹೀಗೆ ಮಾಡ್ತಿದ್ದೀರಲ್ಲ ಎಂದು ಮಹಾಲಕ್ಷ್ಮಿ ಪೋಟೋಗಳನ್ನು ನೋಡಿದ ನೆಟ್ಟಿಗರು ಸಹ ಅವರ ಸ್ಟೈಲ್‌ನಲ್ಲೇ ತರೇಹವಾರಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

56

ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15.83 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅವರನ್ನು ಬಂಧಿಸಿದ್ದಾರೆ.

66

ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾಗಿ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ. ಜೊತೆಗೆ ನಾನು ನನ್ನ ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಈತನ ಜೊತೆ ಮದುವೆಯಾಗಿ ಮೋಸ ಹೋದೆ ಎಂದು ಗೋಳೋ ಎಂದು ಅತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories