ಸುಶಾಂತ್‌ಗೆ ಸೂಕ್ತ ವಿದಾಯ ಹೇಳಲೇ ಇಲ್ಲ: ಧೋನಿ ಸಹ ನಟಿ ದಿಶಾ ಪಟಾನಿ

First Published Oct 2, 2023, 5:33 PM IST

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh rajput) ಅವರ ಚಲನಚಿತ್ರ 'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' (MS Dhoni ; The Untold Story) ಹಿಂದಿ ಚಿತ್ರರಂಗದಲ್ಲಿ ಏಳು ವರ್ಷಗಳ ಕಾಲ ಪೂರೈಸಿದೆ. ಈ ಸಮಯದಲ್ಲಿ ಚಿತ್ರದ  ನಟಿ ದಿಶಾ ಪಟಾನಿ (Disha Patani) ಅವರು ಸುಶಾಂತ್‌ಸಿಂಗ್‌ ಅವರನ್ನು ನೆನಪಿಸಿಕೊಂಡು ಸಿನಿಮಾದ ವೀಡಿಯೋ ಕ್ಲಿಪ್‌ ಜೊತೆ ಎಮೋಷನಲ್‌ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

2016ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ'  ನೀರಜ್ ಪಾಂಡೆ ನಿರ್ದೇಶನದ ಜೀವನಚರಿತ್ರೆಯ ಕ್ರೀಡಾ ನಾಟಕ ಚಲನಚಿತ್ರ.

ಇದು ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಕಥೆ ಆಧರಿಸಿದ್ದು ಈ ಚಿತ್ರದಲ್ಲಿ ದಿಶಾ ಪಟಾನಿ, ಕಿಯಾರಾ ಅಡ್ವಾಣಿ ಮತ್ತು ಅನುಪಮ್ ಖೇರ್ ಜೊತೆಗೆ ದಿವಂಗತ ಸುಶಾಂತ್ ಎಂಎಸ್ ಧೋನಿ ಪಾತ್ರದಲ್ಲಿ ನಟಿಸಿದ್ದಾರೆ.

ಶನಿವಾರ ಸಂಜೆ ದಿಶಾ ಪಟಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ದಿವಂಗತ ಸುಶಾಂತ್‌ ಅವರನ್ನು ನೆನಪಿಸಿಕೊಂಡು ಪೋಸ್ಟ್‌ ಬರೆದಿದ್ದಾರೆ. 

Disha Patani

'ಈ ಸುಂದರವಾದ ಪ್ರಯಾಣ ಮತ್ತು ಹಿಂದಿ ಚಿತ್ರರಂಗದಲ್ಲಿ ನನ್ನ ಮೊದಲ ಚಿತ್ರಕ್ಕಾಗಿ ಕೃತಜ್ಞತೆಗಳು. ನಿಮ್ಮನ್ನು ಸಂತೋಷಪಡಿಸುವವರನ್ನು ಸುರಕ್ಷಿತ ಭಾವ ನೀಡುವವರನ್ನು ಮತ್ತು ಕೇಳುವವರನ್ನು ಪೂರ್ಣ ಹೃದಯದಿಂದ ಪ್ರೀತಿಸಿ ಮತ್ತು ವಿಷಾದಿಸಲು ಜೀವನ ತುಂಬಾ ಚಿಕ್ಕದು! ನಾವು ವಿದಾಯ ಹೇಳಲೂ ಸಾಧ್ಯವಾಗಲಿಲ್ಲ ಆದರೆ ನೀವು ಸಂತೋಷದಿಂದ ಮತ್ತು ಶಾಂತಿಯಿಂದ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದು ದಿಶಾ ಸುಶಾಂತ್‌ ಅವರನ್ನು ನೆನಪಿಸಿಕೊಂಡಿದ್ದಾರೆ.

ಇದು ಸುಶಾಂತ್ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಯಿತು ಹಾಗೂ ದಿಶಾ ಮತ್ತು ಸುಶಾಂತ್‌ರ ಕೆಮಿಸ್ಟ್ರಿ ಸಖತ್‌ ಮೆಚ್ಚುಗೆ ಗಳಿಸಿತು

ಚಲನಚಿತ್ರದಲ್ಲಿನ ಸುಶಾಂತ್‌ ಅವರ ಅಭಿನಯಕ್ಕಾಗಿ ಹಲವಾರು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ  ಹಲವಾರು ಬಾರಿ ನಾಮನಿರ್ದೇಶನಗೊಂಡಡಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌  ಜೂನ್ 14, 20 20 ರಂದು ಅವರು ಕೊನೆಯುಸಿರೆಳೆದರು, ಅವರು ಮುಂಬೈನ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣವೇ ಸಿಗಲಿಲ್ಲ..

ಎಂಎಸ್ ಧೋನಿ ದಿಶಾ ಪಟಾನಿ ಅವರ ಹಿಂದಿ ಚಿತ್ರರಂಗದಲ್ಲಿ  ಚೊಚ್ಚಲ ಚಿತ್ರವಾಗಿದ್ದು ನಂತರ ಅವರು 'ಕುಂಗ್ ಫೂ ಯೋಗ', 'ಮಲಾಂಗ್', 'ಬಾಘಿ 2 ಮತ್ತು 3', 'ರಾಧೆ' ಮತ್ತು 'ಏಕ್ ವಿಲನ್ ರಿಟರ್ನ್ಸ್' ನಂತಹ ಚಲನಚಿತ್ರಗಳಲ್ಲಿ ನಟಿಸಿದರು.

ದಿಶಾ ಪಟಾನಿ ಅವರು ಮುಂದಿನ ದಿನಗಳಲ್ಲಿ  'ಯೋಧ', 'ಕಂಗುವ' ಮತ್ತು 'ಕಲ್ಕಿ 2898 AD' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!