ಅವರು ಬೇರೆ ಯಾರೂ ಅಲ್ಲ, ಮಧುಬಾಲ. ಬಾಲಿವುಡ್‌ಗೆ ಅವರು ಒಂದು ಐಕಾನ್. ಕಾಲ ಬದಲಾದರೂ ನೆನಪಿನಲ್ಲಿ ಉಳಿಯುವ ತಾರೆ. ಮಧುಬಾಲ ಅಂದ್ರೆ ಇಂದಿಗೂ ಕಣ್ಣುಗಳು ತುಂಬಿ ಬರುವವರಿದ್ದಾರೆ. ಅವರನ್ನು ನೆನೆದು ಮನಸ್ಸು ಭಾರವಾಗುವ ಅಭಿಮಾನಿಗಳಿದ್ದಾರೆ. ಅವರ ಜೀವನ ಏರಿಳಿತಗಳಿಗೆ, ಏಳುಬೀಳುಗಳಿಗೆ, ಕಷ್ಟಸುಖಗಳಿಗೆ ಒಂದು ಉದಾಹರಣೆ. ಮಧುಬಾಲ 1950ರ ದಶಕದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದರು. ಸುಮಾರು 20 ವರ್ಷಗಳ ಕಾಲ ಬಾಲಿವುಡ್ ಅನ್ನು ಆಳಿದರು. 70 ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು. ಎಲ್ಲಾ ರೀತಿಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದರು.