ಮುಂಬೈಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಟ್ರೋಲ್, ಕಾರಣವೇನು?

Published : Feb 17, 2025, 10:18 PM ISTUpdated : Feb 17, 2025, 10:20 PM IST

ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಚ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಬಳಿಕ ಮುಂಬೈನಿಂದ ದೂರ ಉಳಿದಿದ್ದ ನತಾಶ ಇದೀಗ ದಿಢೀರ್ ಪತ್ತೆಯಾಗಿದ್ದಾರೆ. ಆದರೆ ನತಾಶ ಟ್ರೋಲ್ ಆಗಿದ್ದಾರೆ. 

PREV
18
ಮುಂಬೈಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಟ್ರೋಲ್, ಕಾರಣವೇನು?

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರ ಮಾಜಿ ಪತ್ನಿ ನಟಾಶಾ ಸ್ಟಾಂಕೋವಿಕ್ ಇಂದು(ಫೆ.17) ಬೆಳಿಗ್ಗೆ ಮುಂಬೈನಲ್ಲಿ ಕಾಣಿಸಿಕೊಂಡರು. ನತಾಶ ಸ್ಟಾಂಕೋವಿಚ್ ಫೋಟೋಗಳು ವೈರಲ್ ಆಗುತ್ತಿದೆ.  ಪಾಂಡ್ಯ ಜೊತೆಗಿನ ವೈವಾಹಿಕ ಜೀವನ ಕೊನೆಗೊಳಿಸಿ ವಿಚ್ಚೇದನ ಪಡೆದ ನತಾಶ ಸ್ಟಾಂಕೋವಿಚ್ ಬಳಿಕ ಮುಂಬೈನಿಂದ ದೂರ ಉಳಿದಿದ್ದರು. 

28

32 ವರ್ಷದ ನಟಾಶಾ ಸ್ಟಾಂಕೋವಿಕ್ ಮುಂಬೈನ ಖಾರ್ ಪ್ರದೇಶದ ದಂತ ವೈದ್ಯರ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ನತಾಶ ಸ್ಟಾಂಕೋವಿಚ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯದಿಂದ ದೂರವಾದ ಬಳಿಕ ಮುಂಬೈ ತೊರೆದಿದ್ದ ನತಾಶ ತಮ್ಮ ದೇಶ ಸರ್ಬಿಯಾದಲ್ಲಿ ನೆಲೆಸಿದ್ದರು. ಇದೀಗ ದಿಢೀರ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. 

38

ನಟಿ ಈ ಸಂದರ್ಭದಲ್ಲಿ ಮೇಕಪ್ ಮಾಡಿರಲಿಲ್ಲ. ಆದರೂ, ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ನತಾಶ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡಿರುವುದು ಇದೀಗ ಹಲವು ಚರ್ಚಗೆ ಗ್ರಾಸವಾಗಿದೆ. ನತಾಶ ಮುಂಬೈಗೆ ಮರಳಿರುವುದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ನತಾಶ ಟ್ರೋಲ್ ಮಾಡಿದ್ದಾರೆ. 

48

ನಟಾಶಾ ಬಿಳಿ ಪೈಜಾಮ ಮತ್ತು ಮ್ಯಾಚಿಂಗ್ ಸ್ಲೀವ್‌ಲೆಸ್ ಟಾಪ್ ಧರಿಸಿದ್ದರು. ಅವರ ಒಂದು ಕೈಯಲ್ಲಿ ಮೊಬೈಲ್ ಮತ್ತು ಇನ್ನೊಂದು ಕೈಯಲ್ಲಿ ಕಾಫಿ ಕಪ್ ಹಿಡಿದು ಹೆಜ್ಜೆ ಹಾಕಿದ್ದಾರೆ. ಸುದೀರ್ಘ ದಿನಗಳ ಬಳಿಕ ನತಾಶ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ನತಾಶ ಆಗಮಿಸಿದ ಕಾರಣ ಬಹಿರಂಗವಾಗಿಲ್ಲ. 

58

ನಟಾಶಾ ಸ್ಟಾಂಕೋವಿಕ್ ಅವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಕೋಪಗೊಂಡಿದ್ದಾರೆ. ವೈರಲ್ ವಿಡಿಯೋಗಳ ಮೇಲೆ ಕಾಮೆಂಟ್ ಮಾಡಿ ಅವರಿಗೆ ಬೈಯುತ್ತಿದ್ದಾರೆ.

68

ಒಬ್ಬ ಇಂಟರ್ನೆಟ್ ಬಳಕೆದಾರರು "ವಂಚಕಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇವಳು ಹೆಣ್ಣಿನ ಹೆಸರಿಗೆ ಕಳಂಕ" ಎಂದಿದ್ದಾರೆ. ಇನ್ನೊಬ್ಬರು "ಇವಳಿಗೆ ಗೌರವ ಕೊಡಬಾರದು" ಎಂದಿದ್ದಾರೆ. "ನನಗೆ ತುಂಬಾ ಜೋರಾಗಿ ಬೈಯ್ಯಬೇಕು ಅನಿಸುತ್ತಿದೆ" ಎಂದು ಒಬ್ಬರು ಬರೆದಿದ್ದಾರೆ.ನಟಾಶಾ ಸ್ಟಾಂಕೋವಿಕ್ 1 ಜನವರಿ 2020 ರಂದು ಹಾರ್ದಿಕ್ ಪಾಂಡ್ಯರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ 31 ಮೇ 2020 ರಂದು ವಿವಾಹವಾದರು.

78

ಮದುವೆಯಾದ 2 ತಿಂಗಳ ನಂತರ 30 ಜುಲೈ 2020 ರಂದು ನಟಾಶಾ ಮತ್ತು ಹಾರ್ದಿಕ್ ದಂಪತಿಗೆ ಮಗ ಅಗಸ್ತ್ಯ ಜನಿಸಿದ. ಮೂರು ವರ್ಷಗಳ ನಂತರ 14 ಫೆಬ್ರವರಿ 2023 ರಂದು ಅವರು ಮತ್ತೊಮ್ಮೆ ಉದಯಪುರದಲ್ಲಿ ವಿವಾಹವಾದರು.

88

ಮದುವೆಯ ಸುಮಾರು ಒಂದೂವರೆ ವರ್ಷಗಳ ನಂತರ ಜುಲೈ 2024 ರಲ್ಲಿ ನಟಾಶಾ ಮತ್ತು ಹಾರ್ದಿಕ್ ಪರಸ್ಪರ ಒಪ್ಪಂದದ ಮೇರೆಗೆ ಬೇರ್ಪಡಲು ನಿರ್ಧರಿಸಿದರು. ಆದಾಗ್ಯೂ, ಅವರು ಮಗ ಅಗಸ್ತ್ಯನಿಗಾಗಿ ಜಂಟಿ ಪೋಷಕರಾಗಿ ಉಳಿಯುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories