Katrina Kaif Pregnancy: ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಪಾಲಕರಾಗುತ್ತಿದ್ದಾರೆ ಎಂದು 2 ವರ್ಷಗಳಿಂದ ಒಂದಲ್ಲ ಒಂದು ಗಾಸಿಪ್ ಹರಡುತ್ತಲೇ ಇತ್ತು. ಈ ಬಗ್ಗೆ ಈ ಜೋಡಿ ಮೌನ ಮುರಿದಿರಲಿಲ್ಲ. ಈಗ ತಾಯಿ ಆಗುತ್ತಿರೋದು ಸತ್ಯ ಎಂದು ಹೇಳಿಕೊಂಡಿದ್ದಾರೆ.
42 ವರ್ಷದ ಈ ನಟಿ ಕಳೆದ ಮಾರ್ಚ್‌ನಲ್ಲಿಯೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಸರ್ಪ ಸಂಸ್ಕಾರ ಮಾಡಿಸಿಕೊಂಡಿದ್ದರು. ಈಗ ದೇವರು ಕಣ್ಣು ಬಿಟ್ಟಿದ್ದಾನೆ.
26
ಅಧಿಕೃತವಾಗಿ ಹೇಳಿಕೊಂಡ ನಟಿ
“ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ” ಎಂದು ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
36
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮಾಡಲಾಗುವುದು. ಕುಟುಂಬದಲ್ಲಿ ಸರ್ಪದೋಷ ಇದ್ದರೆ ಮಕ್ಕಳಾಗೋದಿಲ್ಲ, ಚರ್ಮ ಸಮಸ್ಯೆ ಕೂಡ ಬರುವುದು. ಹೀಗಾಗಿ ಆಶ್ಲೇಷ ಬಲಿ ಎಂದು ಸರ್ಪ ಸಂಸ್ಕಾರ ಮಾಡಲಾಗುವುದು. ಆಗ ಸರ್ಪ ದೋಷ ನಿವಾರಣೆ ಆಗಿ ಮಕ್ಕಳಾಗುತ್ತವೆ. ಕರ್ನಾಟಕದಲ್ಲಿರುವ ಈ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ.
42 ನೇ ವಯಸ್ಸಿನಲ್ಲಿ ತಾಯಿಯಾಗೋದು ಸುಲಭವಿಲ್ಲ. ಫಿಟ್ ಆಗಿದ್ದರೂ ಕೂಡ ಮಗು ಮಾಡಿಕೊಳ್ಳೋದು ಕಷ್ಟ. ಪ್ರಿಯಾಂಕಾ ಚೋಪ್ರಾ ಅವರಿಂದ ಹಿಡಿದು, ಶಿಲ್ಪಾ ಶೆಟ್ಟಿಯವರೆಗೆ ಸಾಕಷ್ಟು ನಟಿಯರು ಮಗು ಆಗಿಲ್ಲ ಎಂಬ ಕಾರಣಕ್ಕೆ ಸರೋಗಸಿ ಮೊರೆ ಹೋಗಿದ್ದರು. ಶಾರುಖ್ ಖಾನ್-ಗೌರಿ ಖಾನ್ ಕೂಡ ತಮ್ಮ ಮೂರನೇ ಮಗುವನ್ನು ಸರೋಗಸಿ ಮೂಲಕ ಪಡೆದರು.
56
ಸಂತಾನಕ್ಕೋಸ್ಕರ ಪೂಜೆ
ಈಗ ಕತ್ರಿನಾ ಕೈಫ್ ಅವರು ಇಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿದ್ದಾರೆ. ಈ ಮೂಲಕ ಅವರು ಸಂತಾನಕ್ಕೋಸ್ಕರ ಪ್ರಾರ್ಥನೆ ಮಾಡಿದ್ದರು. ಈ ಬಗ್ಗೆ ಅವರು ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.
66
ಆರು ತಿಂಗಳಿನಲ್ಲಿ ಒಲಿದ ದೇವರು
ಮಾರ್ಚ್ ತಿಂಗಳಿನಲ್ಲಿ ಕತ್ರಿನಾ ಕೈಫ್ ಅವರು ಕುಕ್ಕೆಗೆ ಭೇಟಿ ನೀಡಿದ್ದರು. ಇದಾಗಿ ಆರು ತಿಂಗಳುಗಳು ಕಳೆದಿವೆ. ಈಗ ಅವರು ಗರ್ಭಿಣಿಯಾಗಿರೋ ನ್ಯೂಸ್ ಕೊಟ್ಟಿದ್ದಾರೆ. ಈ ಮೂಲಕ ಅವರ ಭಕ್ತಿಗೆ ದೇವರು ಒಲಿದಿದ್ದಾನೆ ಎಂದಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.