ಮುಂಬೈ(ಆ. 26)ಸದಾ ಬೋಲ್ಡ್ ಹೇಳಿಕೆಗಳಿಗೆ ಹೆಸರುವಾಸಿ ಕ್ವೀನ್ ಕಂಗನಾ ರಣಾವತ್. ನರೇಂದ್ರ ಮೋದಿ ಅವರ ಕೆಲಸಗಳನ್ನು ಕಂಗನಾ ಮೆಚ್ಚಿಕೊಂಡೇ ಬಂದಿದ್ದಾರೆ. ಸುಶಾಂತ್ ಸಾವಿನ ನಂತರ ಬಾಲಿವುಡ್ ಮಾಫಿಯಾ ವಿರುದ್ಧ ಯುದ್ಧ ಸಾರಿದ ಸೇನಾನಾಯಕಿ ಈ ಬಾರಿ ಏನು ಹೇಳಿದ್ದಾರೆ? ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕಂಗನಾ ಬಾಲಿವುಡ್ ನ ಅನೇಕರ ಮುಖವಾಡವನ್ನು ಕಳಚಿದ್ದಾರೆ. ಆಲಿಯಾ ಭಟ್, ಮಹೇಶ್ ಭಟ್, ವರುಣ್ ಧವನ್, ಕರಣ್ ಜೋಹರ್ ವಿರುದ್ಧ ಕೆಂಡ ಕಾರುತ್ತಲೇ ಸಿನಿಮಾ ಜಗತ್ತಿನ ಅನೇಕ ವಿಚಾರ ಬಿಚ್ಚಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮುಂದೆ ಬಂದ ನಟಿ ಪ್ರಧಾನಿ ಮೋದಿ ಅವರೊಂದಿಗೆ ಇರುವ ಚಿತ್ರ ಹಂಚಿಕೊಂಡಿದ್ದಾರೆ. ಸರಳವಾಗಿನ ಬದುಕುವ ಜಗತ್ತಿನ ಅತಿ ಶಕ್ತಿಶಾಲಿ ಮನುಷ್ಯ ಎಂದು ಮೋದಿಯನ್ನು ಕಂಗನಾ ಕರೆದಿದ್ದಾರೆ. ನರೇಂದ್ರ ಮೋದಿ ಅವರ ಯೋಜನೆ ಕೆಲಸಗಳನ್ನು ಕಂಗನಾ ಮೊದಲಿನಿಂದಲೂ ಕೊಂಡಾಡುತ್ತಲೇ ಬಂದಿದ್ದಾರೆ. Bollywood Actress Kangana Ranaut has always been an open admirer of Prime Minister Narendra Modi. ಜಗತ್ತಿನ ಶಕ್ತಿಶಾಲಿ ವ್ಯಕ್ತಿ ನರೇಂದ್ರ ಮೋದಿ ಎಂದ ಕಂಗನಾ ರಣಾವತ್