ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಕಳೆದ 20 ವರ್ಷಗಳಿಂದ ಮಿಂಚುತ್ತಿರುವ ನಟಿ ಕಾಜಲ್ ಅಗರ್ವಾಲ್ (Kajal Agarwal)ಮಗ ನೀಲ್ ಗೆ ಮೂರು ವರ್ಷ ತುಂಬಿದ್ದು, ಈ ಹಿನ್ನೆಲಯಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಶನ್ ಮಾಡಿದ್ದಾರೆ.
210
ಕಾಜಲ್ ಅಗರ್ವಾಲ್ ಪುತ್ರ ನೀಲ್ ಗೆ ವೆಹಿಕಲ್ ಕನ್’ಸ್ಟ್ರಕ್ಷನ್ ಮಾಡೋದು ತುಂಬಾನೆ ಇಷ್ಟವಾದ ಕೆಲಸವಾಗಿದ್ದು, ಈ ಹಿನ್ನೆಲೆಯಲ್ಲಿ ಮಗನ ಆಸೆಯಂತೆ, ಪೂರ್ತಿಯಾಗಿ ಕನ್’ಸ್ಟ್ರಕ್ಷನ್ ಥೀಮ್ ನಲ್ಲಿ ಡೆಕೊರೇಶನ್ ಮಾಡುವ ಮೂಲಕ ಪುಟ್ಟ ಮಗನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
310
ಕಾಜಲ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೊಟೋಗಳನ್ನು ನಟಿ ಮಗನ ಹುಟ್ಟುಹಬ್ಬವನ್ನು ಹೇಗೆಲ್ಲಾ ಆರೇಂಜ್ ಮಾಡಿದ್ದಾರೆ, ಯಾರೆಲ್ಲಾ ಭಾಗಿಯಾಗಿದ್ದರು ಅನ್ನೋದನ್ನು ಕಾಣಬಹುದು.
410
ಮಗನ ಬರ್ತ್ ಡೇ ಫೋಟೊ ಶೇರ್ ಮಾಡಿರುವ ಕಾಜಲ್ ಅದರ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. ಸ್ನಾಕ್ ಮಾತುಕತೆಗಳ ಸಿಇಒ, ಮಲಗುವ ಸಮಯ ಲೇಟ್ ಮಾಡುವ ಮಾಸ್ಟರ್, ಮತ್ತು ಬ್ರೊಕೊಲಿಯನ್ನು ಚೀ ಎನ್ನುವ ಆದರೆ ಮಣ್ಣು ಮಾತ್ರ ವಾವ್ ಎನ್ನುವ ಏಕೈಕ ವ್ಯಕ್ತಿಗೆ 3 ನೇ ಹುಟ್ಟುಹಬ್ಬದ ಶುಭಾಶಯಗಳು(Happy birthday)!
510
ನೀನು ನಮ್ಮ ಕಣ್ಣಿನ ಬೆಳಕು, ನಮ್ಮ ಸಣ್ಣ ಸುಂಟರಗಾಳಿ, ನಮ್ಮ ನಗು, ನಮ್ಮ ಕಾಫಿಯಲ್ಲಿರುವ ಶಕ್ತಿ! ನೀವು ನಮ್ಮ ಜಗತ್ತನ್ನು ಅತ್ಯಂತ ಉಲ್ಲಾಸದ, ಹೃದಯ ಕರಗಿಸುವ ರೀತಿಯಲ್ಲಿ ಬೆಳಗಿಸುತ್ತಿರುವೆ. ಬ್ಲೂಯಿ, ನಿರ್ಮಾಣ ವಾಹನಗಳು, ವೇಫಲ್ಸ್, ಪೆಪ್ಪಾ ಮತ್ತು ಸತತವಾಗಿ 17 ರೌಂಡ್ 'ಏಕೆ?' ಎನ್ನುವುದಕ್ಕಿಂತ ಹೆಚ್ಚು ನಿನ್ನನ್ನು ನಾನು ಹೆಚ್ಚು ಪ್ರೀತಿಸುತ್ತೇನೆ! ಲವ್ ಯು ಟು ದ ಮೂನ ಆಂಡ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ.
610
ಅಷ್ಟೇ ಅಲ್ಲ ಕನ್’ಸ್ಟ್ರಕ್ಷನ್ ಟ್ರಕ್‌ಗಳು, ಕೇಕ್, ಐಸ್ ಕ್ರೀಮ್, ಕ್ಯಾಂಡಿ, ಕೇಕ್ ಪಾಪ್‌ಗಳು, ಕಪ್‌ಕೇಕ್‌ಗಳು, ಆಟಗಳು, ಪಪೆಟ್ ಶೋ, ಕುಟುಂಬ ಮತ್ತು ಅವನ ಎಲ್ಲಾ ಸ್ನೇಹಿತರು ಸೇರಿ ನೀಲ್ ಹುಟ್ಟುಹಬ್ಬವನ್ನು ಆತನ ಕನಸಿನ ದಿನವನ್ನು ನನಸಾಗಿಸಿದ್ದಾರೆ.
710
ಥೀಮ್ ಪರ್ಫೆಕ್ಟ್ ಆಗಿತ್ತು, ನಗು, ಎಲ್ಲವೂ ಸೇರಿ ಹುಟ್ಟುಹಬ್ಬವನ್ನು ಸುಂದರವಾಗಿಸಿದ್ದೀರಿ. ಎಲ್ಲಾ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು - ಇದು ಇದುವರೆಗಿನ ಅತ್ಯುತ್ತಮ ಹುಟ್ಟುಹಬ್ಬವಾಗಿತ್ತು! "ಅಮ್ಮಾ, ನನಗೆ ನನ್ನ ಹುಟ್ಟುಹಬ್ಬ ತುಂಬಾ ಇಷ್ಟ! ಎಂದು ನೀಲ್ ಹೇಳುತ್ತಲೇ ಇದ್ದನ್ನು ಎಂದು ಮಗನ ಹುಟ್ಟುಹಬ್ಬದ ಕುರಿತು ತಾಯಿ ಕಾಜಲ್ ಹೇಳಿದ್ದಾರೆ.
810
ಕಾಜರ್ ಅಗರ್ವಾಲ್ 2020ರಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿರುವ ಗೌತಮ್ ಕಿಚ್ಲು (Goutam Kitchlu)ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ 2023ರಲ್ಲಿ ನೀಲ್ ಹುಟ್ಟಿದ್ದು. ಇದೀಗ ನೀಲ್ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
910
ಕಾಜಲ್ ಅಗರ್ವಾಲ್ ಕುರಿತು ಹೇಳೋದಾದ್ರೆ, 2004 ರಲ್ಲಿ ಕ್ಯೋ ಹೋ ಗಯಾನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲಿಂದ ಇಲ್ಲಿವರೆಗೆ ನಿರಂತರವಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಮಗಧೀರ ಬ್ಯೂಟಿ.
1010
ಈಗಾಗಲೇ ಕಾಜಲ್ ಅಗರ್ವಾಲ್ ನಟಿಸಿರುವ ಸಿಕಂದರ್ ಸಿನಿಮಾ ರಿಲೀಸ್ ಆಗಿದ್ದು, ಇನ್ನೂ 5 ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಪ್ಪ, ದ ಇಂಡಿಯಾ ಸ್ಟೋರಿ, ಇಂಡಿಯನ್ 3, ಉಮಾ, ಪ್ಯಾರೀಸ್ ಪಾರೀಸ್ ಸಿನಿಮಾಗಳಲ್ಲಿ ನಟಿ ನಟಿಸಲಿದ್ದಾರೆ. ಹಾಗಾಗಿ ಸದ್ಯದ ಬ್ಯುಸಿ ನಟಿ ಕಾಜಲ್.