ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಜ್ಯೋತಿಕಾ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಫಿಟ್ನೆಸ್ ಸೀಕ್ರೆಟ್ ತಿಳುದುಕೊಳ್ಳುವ ಕ್ಯೂರಿಯಾಸಿಟಿ ಹೆಚ್ಚಾಗಿದೆ.
26
ಆರೋಗ್ಯವೇ ಭಾಗ್ಯ ಅನ್ನೋ ವಿಚಾರವನ್ನು ಜ್ಯೋತಿಕಾ ಗಂಭೀರವಾಗಿ ಪರಿಗಣಿಸಿದ್ದಾರೆ. 46 ವರ್ಷದ ಜ್ಯೋತಿಕಾ ಪ್ರತಿ ದಿನವೂ ತಪ್ಪದೆ ವರ್ಕೌಟ್ ಅಥವಾ ಯೋಗ ಮಾಡುತ್ತಾರಂತೆ.
36
ಒಂದು ವಾರ ವರ್ಕೌಟ್ ಮಾಡುವುದಾಗಲಿ ಅಥವಾ ಒಂದು ವಾರ ಡಯಟ್ ಮಾಡುವುದಾಗಲಿ ಮಾಡಿದರೆ ಉಪಯೋಗವಿಲ್ಲ ಅಂತಾರೆ ಜ್ಯೋತಿಕಾ. ಹೀಗಾಗಿ ಕನಿಷ್ಠ 6 ತಿಂಗಳು ವರ್ಕೌಟ್ ಮಾಡಿದರೆ ಮಾತ್ರ ಫಲ ಸಿಗುವುದಂತೆ.
46
ಫಿಟ್ ಆಗಬೇಕು ಅಂದ್ರೆ ಮೊದಲು ಹೈದರೇಷನ್ ಕಡೆ ಗಮನ ಕೊಡಬೇಕು. ಪ್ರತಿ ದಿನ ತಪ್ಪದೆ ಇಂತಿಷ್ಟು ಅಂತ ನೀರು ಕುಡಿಯಬೇಕು. ಜ್ಯೋತಿಕಾ ತಪ್ಪದೆ ಎಳನೀರು ಕುಡಿಯುತ್ತಾರೆ ಹಾಗೂ ಬೆಳಗ್ಗೆ ರನ್ನಿಂಗ್ ಆದ್ಮೇಲೆ ಗ್ರೀ-ಟೀ ಕುಡಿಯುತ್ತಾರಂತೆ.
56
ಎಷ್ಟು ಬ್ಯುಸಿಯಾಗಿದ್ದರೂ ಸಹ ಜ್ಯೋತಿಕಾ ಮನೆಯಲ್ಲಿ ಅಡುಗೆ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಶೂಟಿಂಗ್‌ನಲ್ಲಿದ್ದಾಗ ಮನೆಯಿಂದ ಅಡುಗೆ ಪಾರ್ಸಲ್ ಬರುತ್ತದಂತೆ.
66
ಡಯಟ್ ಆರಂಭಿಸುವ ಮುನ್ನ ವೈದ್ಯರನ್ನು ಸಂಪರ್ಕ ಮಾಡಬೇಕು. ನಮ್ಮ ದೇಹಕ್ಕೆ ಏನು ಬೇಕು? ಯಾವ ರೀತಿಯಲ್ಲಿ ಸೇವಿಸಬೇಕು ಹಾಗೂ ದಿನಕ್ಕೆ ಎಷ್ಟು ಸೇವಿಸಬೇಕು ಎಂದು ತಿಳಿದುಕೊಳ್ಳುವುದು ಮುಖ್ಯವಂತೆ.