ಗೌತಮ್ ಮೆನನ್ ನಿರ್ದೇಶಿಸಿದ ವಿಣ್ಣೈತಾಂಡಿ ವರುವಾಯಾ ಚಿತ್ರದ ಮೂಲಕ ಸಮಂತಾ ಪರಿಚಿತರಾದರು. ಈ ಚಿತ್ರದ ಯಶಸ್ಸಿನ ನಂತರ, ಸಮಂತಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬ್ಯುಸಿಯಾದ ನಟಿಯಾದರು. ಟಾಪ್ ನಟಿಯಾಗಿ ಮೆರೆಯುತ್ತಿದ್ದಾಗಲೇ ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದ ಸಮಂತಾ, ಮದುವೆಯ ನಂತರವೂ ನಟನೆಯನ್ನು ಮುಂದುವರೆಸಿದರು. ಇದರ ಮಧ್ಯೆ, 2021 ರಲ್ಲಿ, ಸಮಂತಾ ಪತಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಪಡೆದರು.