ದಶಕಗಳಿಂದ ಇಂಡಸ್ಟ್ರೀಲಿ ಮಕುಟವಿಲ್ಲದ ಮಹಾರಾಜನಾಗಿ ಮಿಂಚುತ್ತಿದ್ದಾರೆ ಚಿರಂಜೀವಿ. ಸಾಮಾನ್ಯ ನಟನಾಗಿ ಆರಂಭವಾಗಿ.. ಸೂಪರ್ ಸ್ಟಾರ್ ಆಗಿ.. ಆಮೇಲೆ ಮೆಗಾಸ್ಟಾರ್ ಆಗಿ ಚಿರಂಜೀವಿ ಪಯಣ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ತೆಲುಗು ಸಿನಿಮಾ ರಂಗಕ್ಕೆ ದೊಡ್ಡ ದಿಕ್ಕಾಗಿ ಹಿರಿಯಣ್ಣನಾಗಿ ಬೆಳೆದಿದ್ದಾರೆ ಚಿರಂಜೀವಿ. ತೆಲುಗು ಸಿನಿಮಾಗೆ ಏನೇ ಕಷ್ಟ ಬಂದ್ರೂ.. ನಾನಿದ್ದೀನಿ ಅಂತ ಮುಂದೆ ಇರ್ತಾರೆ ಚಿರಂಜೀವಿ. ಹೀರೋ ಆಗಿ ಸಿನಿಮಾಗಳಲ್ಲಿ ನಟಿಸುತ್ತಲೇ.. ಇಂಡಸ್ಟ್ರೀ ಹಿತ ಕಾಯುತ್ತಿದ್ದಾರೆ. ಮೆಗಾ ವಾರಸುದಾರರಾಗಿ ರಾಮ್ ಚರಣ್ ತಂದೆಯನ್ನ ಮೀರಿಸಿದ ಮಗನಾಗಿ ಹೆಸರು ತಂದುಕೊಟ್ಟಿದ್ದಾರೆ. ಚಿರಂಜೀವಿ ಇಮೇಜ್ ಟಾಲಿವುಡ್ ವರೆಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ರಾಮ್ ಚರಣ್ ಇಮೇಜ್ ಪ್ಯಾನ್ ಇಂಡಿಯಾ ದಾಟಿ ಪ್ರಪಂಚದಾದ್ಯಂತ ಹರಡಿದೆ. ಆಸ್ಕರ್ ಮಟ್ಟಕ್ಕೆ ಹೋಗಿದೆ. ಯಾವ ಬ್ಯಾಗ್ರೌಂಡ್ ಇಲ್ಲದೆ ಇಂಡಸ್ಟ್ರೀಗೆ ಕಾಲಿಟ್ಟ ಚಿರಂಜೀವಿ.. ಆಮೇಲೆ ಟಾಲಿವುಡ್ ನಲ್ಲಿ ಮೆಗಾ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.