ಕದ್ದು ಮುಚ್ಚಿ ಖ್ಯಾತ ನಟಿಯ ಗೋಲ್‌ಮಾಲ್, ಪ್ರಕರಣ ದಾಖಲಾದ ಬೆನ್ನಲ್ಲೇ ನಾಪತ್ತೆ

Published : Jan 30, 2026, 09:06 PM IST

ಕದ್ದು ಮುಚ್ಚಿ ಖ್ಯಾತ ನಟಿಯ ಗೋಲ್‌ಮಾಲ್, ಸಿನಿಮಾ ಇಂಡಸ್ಟ್ರಿಯಲ್ಲಿ ಗುಸು ಗುಸು ಮಾತುಗಳು ಕೇಳಿಬರುತ್ತಿತ್ತು. ಆದರೆ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇತ್ತ ನಟಿ ನಾಪತ್ತೆಯಾಗಿದ್ದಾರೆ. 

PREV
16
ಖ್ಯಾತ ನಟಿ ವಿರುದ್ದ ದೂರು

ಸಿನಿಮಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಉತ್ತಮ ಅಭಿಮಾನಿ ಬಳಗ ಸಂಪಾದಿಸಿರುವ ನಟಿ ಅಕಾಂಕ್ಷ ವಿರುದ್ದ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಹೌದು, ಭೋಜಪುರಿ ನಟಿ ಅಕಾಂಕ್ಷ ಅವಸ್ಥಿ ವಿರುದ್ದ ದೂರು ದಾಖಲಾಗಿದೆ. ಕದ್ದು ಮುಚ್ಚಿ ಗೋಲ್‌ಮಾಲ್ ಮಾಡಿದ ಗಂಭೀರ ಆರೋಪ ಅಕಾಂಕ್ಷ ಮೇಲೆ ಕೇಳಿಬಂದಿದೆ. ಇತ್ತ ನಟಿ ಅಕಾಂಕ್ಷ ವಿರುದ್ಧವೂ ದೂರು ದಾಖಲಾಗಿದೆ.

26
ಭೋಜಪುರಿ ನಟಿ ಅಕಾಂಕ್ಷ

ಭೋಜಪುರಿ ನಟಿ ಅಕಾಂಕ್ಷ ಅವಸ್ಥಿ ಹಾಗೂ ಪತಿ ವಿವೇಕ್ ಕುಮಾರ್ ಅಲಿಯಾಸ್ ಅಭಿಷೇಕ್ ಕುಮಾರ್ ಸಿಂಗ್ ಇಬ್ಬರು ಮೇಲೂ ದೂರು ದಾಖಲಾಗಿದೆ. ದೂರು ನೀಡಿದ್ದ ಮುಂಬೈ ಕಸ್ಟಮ್ಸ್ ಕ್ಲಿಯರೆನ್ಸ್‌ನ ಹಿತೇಶ್ ಕಾಂತಿಲಾಲ್ ಅಜ್ಮೇರ. ಮುಂಬೈನ ಪಂತ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿ ಅಕಾಂಕ್ಷ ಹಾಗೂ ಪತಿ ಅಭಿಷೇಕ್ ಕುಮಾರ್ ಸಿಂಗ್ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

36
ಏನಿದು ಪ್ರಕರಣ

ನಟಿ ಅಕಾಂಕ್ಷ ಹಾಗೂ ಪತಿ ಇಬ್ಬರು ಸೇರಿ ಮುಂಬೈನ ಕಸ್ಟಮ್ಸ್ ಕ್ಲಿಯರೆನ್ಸ್ ವಿಭಾಗದ ಅಧಿಕಾರಿ ಹಿತೇಶ್ ಕಾಂತಿಲಾಲ್‌ಗೆ ಬರೋಬ್ಬರಿ 11.50 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿರುವ ಕಾರಣ ಇಬ್ಬರು ಕಾಂತಿಲಾಲ್‌ಗೆ ಬಣ್ಣಬಣ್ಣದ ಕತೆ ಹೇಳಿ ಬರೋಬ್ಬರಿ 11.50 ಕೋಟಿ ರೂಪಾಯಿ ಪಡೆದುಕೊಂಡು ವಂಚಿಸಿದ್ದಾರೆ ಎಂದು ಸ್ವತಃ ಕಾಂತಿಲಾಲ್ ದೂರು ನೀಡಿದ್ದಾರೆ.

46
ಸ್ಟುಡಿಯೋಗೆ ಹೆಸರು ಹೇಳಿ ಹಣ ಪಡೆದಿದ್ದ ಆರೋಪ

ಮುಂಬೈನಲ್ಲಿ ಸಿನಿಮಾ ಸ್ಟುಡಿಯೋ ಇದೆ. ಕೆಲ ಸಿನಿಮಾಗಳ ನಿರ್ಮಾಣಗಳು ನಡೆಯುತ್ತಿದೆ. 300 ಕೋಟಿ ರೂಪಾಯಿ ಹಣ ಕಾನೂನು ತೊಡಕು ಎದುರಾದ ಕಾರಣ ಸಿಲುಕಿ ಕೊಂಡಿದೆ. ನೀವು ಸ್ಟುಡಿಯೋಗೆ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಸ್ ಸಿಗಲಿದೆ ಎಂದು ನಂಬಿಸಿದ್ದಾರೆ. 200 ಕೋಟಿ ರೂಪಾಯಿ ಮೊತ್ತದಷ್ಟು ರಿಟರ್ನ್ ಸಿಗಲಿದೆ. ಇದರಲ್ಲಿ ಕೆಲ ಮೊತ್ತ ನಗದು ಆಗಿರುತ್ತದೆ. ಕಾರಣ ಹೆಚ್ಚುವರಿ ತೆರಿಗೆ ತಪ್ಪಿಸಲು ಎಂದೆಲ್ಲಾ ಹೇಳಿ ಕತೆ ಹೇಳಿದ್ದಾರೆ.

56
ಸಿನಿಮಾ ಹಾಗೂ ನಿರ್ಮಾಣದ ಆಸಕ್ತಿಯಿಂದ ಹೂಡಿಕೆ

ಸಿನಿಮಾ ಹಾಗೂ ಸಿನಿಮಾ ನಿರ್ಮಾಣ ಆಸಕ್ತಿ ಹೊಂದಿದ್ದ ಹಿತೇಶ್ ಕಾಂತಿಲಾಲ್ ಹೂಡಿಕೆ ರೂಪದಲ್ಲಿ 11.50 ಕೋಟಿ ರೂಪಾಯಿ ನೀಡಿದ್ದಾರೆ. ವಿವಿಧ ಬ್ಯಾಂಕ್‌ಗಳಿಗೆ ಹಣ ವರ್ಗಾಯಿಸಿದ್ದಾರೆ. ಕೆಲವೇ ದಿನಗಳಲ್ಲಿ ನಿಮ್ಮ ಹಣ ವಾಪಸ್ ಕೊಡುವುದಾಗಿ ಹೇಳಿದ್ದ ನಟಿ ಅಕಾಂಕ್ಷ ಹಾಗೂ ಆಕೆಯ ಪತಿ ಬಳಿಕ ನಾಪತ್ತೆಯಾಗಿದ್ದಾರೆ

66
ನಟಿಗಾಗಿ ಹುಡುಕಾಟ

ಹಿತೇಶ್ ಕಾಂತಿಲಾಲ್ ದೂರು ನೀಡುವ ಮೊದಲೇ ನಟಿ ಅಕಾಂಕ್ಷ ಹಾಗೂ ಪತಿ ನಾಪತ್ತೆಯಾಗಿದ್ದಾರೆ. ದೂರಿನಲ್ಲೂ ಈ ಕುರಿತು ಉಲ್ಲೇಖಿಸಿದ್ದಾರೆ. ಹಣ ವರ್ಗಾವಣೆ ದಾಖಲೆಗಳನ್ನು ಪೊಲೀಸಲಿಗೆ ಹಿತೇಶ್ ನೀಡಿದ್ದಾರೆ. ಇದೀಗ ಪೊಲೀಸರು ನಟಿ ಅಕಾಂಕ್ಷ ಹಾಗೂ ಆಕೆಯ ಪತಿಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.

vv

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories