ಇನ್‌ಸ್ಟಾಗ್ರಾಮ್‌ನಿಂದ ಹಣ ಮಾಡೋ ಈ ಕಾಲದಲ್ಲಿ 100 ಕೋಟಿ ಕೊಟ್ರೂ ಅಕೌಂಟ್‌ ಒಪನ್‌ ಮಾಡಲ್ಲ: Aishwarya Lekshmi:

Published : Jul 21, 2026, 03:20 PM IST

Aishwarya Lekshmi Instagram: ಸೋಶಿಯಲ್‌ ಮೀಡಿಯಾದಲ್ಲಿ‌ ಒಂದು ಪೋಸ್ಟ್ ಹಾಕಿ, ಲಕ್ಷಾಂತರ ರೂಪಾಯಿ ದುಡಿಯುವ ನಟ, ನಟಿಯರಿದ್ದಾರೆ. ಆದರೆ 100 ಕೋಟಿ ರೂಪಾಯಿ ಕೊಟ್ಟರೂ ಕೂಡ, ನಾನು ಸೋಶಿಯಲ್‌ ಮೀಡಿಯಾ ಅಕೌಂಟ್‌ ಮಾಡೋದಿಲ್ಲ ಎಂದು ನಟಿ ಐಶ್ವರ್ಯಾ ಲಕ್ಷ್ಮೀ ಹೇಳಿದ್ದಾರೆ.

PREV
15
ಗಟ್ಟ ಕುಸ್ತಿ 2 ಸಿನಿಮಾದಲ್ಲಿ ನಟನೆ

ಗಟ್ಟ ಕುಸ್ತಿ 2 ಸಿನಿಮಾದಲ್ಲಿ ಐಶ್ವರ್ಯಾ ಲಕ್ಷ್ಮೀ ಅವರು ಕೀರ್ತಿಯಾಗಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸೋಶಿಯಲ್ ಮೀಡಿಯಾದಲ್ಲಿನ ನಕಾರಾತ್ಮಕತೆ ತಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

25
ಅಕೌಂಟ್‌ ಡಿಲಿಟ್‌ ಮಾಡಿದ್ದಾರೆ!

'ಗಟ್ಟ ಕುಸ್ತಿ 2' ಸಿನಿಮಾ ಸಖತ್‌ ಹಿಟ್‌ ಆಗಿದೆ. ಈಗಾಗಲೇ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಸೋ ನಂತರ ಸೋಶಿಯಲ್ ಮೀಡಿಯಾದಿಂದ (ಸಾಮಾಜಿಕ ಜಾಲತಾಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌, ನೆಗೆಟಿವ್‌ ಕಾಮೆಂಟ್‌ ಮಾಡಿದ್ದಕ್ಕೆ ಅವರು ಅಕೌಂಟ್‌ ಡಿಲಿಟ್‌ ಮಾಡಿದ್ದಾರಂತೆ. ಈಗ ಅವರು ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.

35
ನೆಗೆಟಿವ್‌ ಮಾತು

“ಸೋಶಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಕಾಮೆಂಟ್‌ ಬರುತ್ತಿತ್ತು. ಇದರಿಂದ ಹೊರಗಡೆ ಜನರು ಸಿಕ್ಕಾಗ ಮಾತನಾಡೋದು ಕೂಡ ಬದಲಾಯ್ತು. ಈಗ ಸೋಶಿಯಲ್‌ ಮೀಡಿಯಾ ಇಲ್ಲದೆ ಆರಾಮಾಗಿದ್ದೇನೆ. ನೆಮ್ಮದಿಯಿಂದ ಇದ್ದೇನೆ ಎಂದು ಹೇಳಿದ್ದಾರೆ.

45
ಜನರು ನನ್ನ ದ್ವೇಷ ಮಾಡ್ತಾರೆ

“ಸೋಶಿಯಲ್‌ ಮೀಡಿಯಾದಲ್ಲಿ ನನಗೆ ಸೇಫ್ ಎನಿಸಲಿಲ್ಲ.‌ ನನ್ನ ಬಾಡಿ ಬಗ್ಗೆ ಮಾತಾಡ್ತಿದ್ರು, ಮಾರ್ಫ್‌ ಮಾಡ್ತಿದ್ರು, ಜಡ್ಜ್‌ ಮಾಡ್ತಿದ್ರು, ಒಂದು ನೆಗೆಟಿವ್‌ ಕಾಮೆಂಟ್‌ ಬಂದ್ರೂ ಕೂಡ ಜನರು ನನ್ನ ದ್ವೇಷ ಮಾಡ್ತಾರೆ ಎಂದು ಅನಿಸ್ತಿತ್ತು. ಇದರಿಂದ ನಾಚಿಕೆ ಆಗುತ್ತಿತ್ತು, ಹಿಂಜರಿಕೆ ಆಗ್ತಿತ್ತು. ಯಾರೂ ಭೇಟಿ ಆದರೂ ಕೂಡ ಸಿಕ್ಕಾಪಟ್ಟೆ ಬೇಗ ಮಾತಾಡಿಕೊಂಡು ಹೋಗ್ತಿದ್ದೆ” ಎಂದು ಐಶ್ವರ್ಯ ಲಕ್ಷ್ಮೀ ಹೇಳಿದ್ದಾರೆ.

55
ಇನ್‌ಸ್ಟಾಗ್ರಾಮ್‌ನಿಂದ ದೂರ!

“ಇನ್‌ಸ್ಟಾಗ್ರಾಮ್‌ನಿಂದ ದೂರವಿದ್ದರೆ ಜನರ ಮನಸ್ಸಿನಿಂದಲೂ ದೂರ ಎಂದೇ ಅರ್ಥ. ಹೀಗಾಗಿ ನನ್ನೊಳಗಿನ ಕಲಾವಿದೆ, ಸಣ್ಣ ಹುಡುಗಿಗಾಗಿ ಇದೆಲ್ಲ ಮಾಡ್ತಿರೋದು” ಎಂದು ಹೇಳಿದ್ದಾರೆ.

ಬಾಲಾಜಿ ಮೋಹನ್ ನಿರ್ದೇಶನದ ನೆಟ್‌ಫ್ಲಿಕ್ಸ್‌ನ 'ಲವ್' ಸಿರೀಸ್‌ನಲ್ಲಿ ಅರ್ಜುನ್ ದಾಸ್ ಜೊತೆ ನಟಿಸುತ್ತಿದ್ದಾರೆ. ಐಶ್ವರ್ಯ ಆನಂದ್ ನಿರ್ದೇಶನದ ತಮಿಳಿನ ಪಿರಿಯಡ್ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕೂಡ ನಟಿಸ್ತಿದ್ದಾರೆ. ಸತೀಶ್ ರಾಜಾ ಧರ್ಮರ್ ನಿರ್ದೇಶನದ 'ತೀವಿನೈ ಪೊಟ್ರು', 'ಆಶಾ' ಎಂಬ ಮಲಯಾಳಂ ಸಿನಿಮಾದಲ್ಲೂ ನಟಿಸುತ್ತಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories