Coolie Movie Review: ರಜನಿಕಾಂತ್‌ 'ಕೂಲಿ' ಸಿನಿಮಾ ನೋಡಿದವ್ರು ಏನಂದ್ರು? ಹೇಗಿದೆ 'ತಲೈವಾ' ಅಬ್ಬರ?

Published : Aug 13, 2025, 04:32 PM IST

‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ರಿಲೀಸ್‌ ಆಗಲು ಸಕಲ ಸಿದ್ಧತೆ ಆಗಿದೆ. ಆಗಸ್ಟ್ 14 ರಂದು ಬಹು ಭಾಷೆಗಳಲ್ಲಿ ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಹಾಗಾದರೆ ಈ ಸಿನಿಮಾ ಹೇಗಿದೆ? 

PREV
15
ಸಿನಿಮಾ ನೋಡಿರುವ ಸ್ಟಾಲಿನ್‌ ಉದಯನಿಧಿ

ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಈ ಸಿನಿಮಾ ವಿಶೇಷ ಪ್ರದರ್ಶನವನ್ನು ವೀಕ್ಷಿಸಿ, ಸಿನಿಮಾವನ್ನು ಹೊಗಳಿದ್ದಾರೆ. ರಜನಿಕಾಂತ್‌ಗೆ ತಮಿಳು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಉದಯನಿಧಿ ಅವರು ನಿರ್ದೇಶಕ ಲೋಕೇಶ್ ಕನಗರಾಜ್, ‘ಕೂಲಿ’ ಸಿನಿಮಾದ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

25
ಈ ಸಿನಿಮಾ ಕಥೆ ಏನು?

ಕೆಲಸಗಾರರ ಮೇಲೆ ದೌರ್ಜನ್ಯ ಮಾಡುತ್ತಿರುವ ರಹಸ್ಯ ವ್ಯಕ್ತಿಯ ವಿರುದ್ಧ ನಿಲ್ಲುವ ಕಥೆ ಇದಾಗಿದೆ. ಈಗಾಗಲೇ ಹಿಟ್‌ ಸಿನಿಮಾ ಕೊಟ್ಟಿರುವ ಲೋಕೇಶ್‌ ಕನಗರಾಜ್‌ ಅವರು ಮೊದಲ ಬಾರಿಗೆ ರಜನಿಗೆ ಆಕ್ಷನ್‌ ಕಟ್‌ ಹೇಳಿದ್ದು, ಚಿತ್ರ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

35
ಸ್ಟಾಲಿನ್‌ ಏನಂದ್ರು?

ಸ್ಟಾಲಿನ್ ಅವರು, “ಚಿತ್ರರಂಗದಲ್ಲಿ ನಮ್ಮ ಸೂಪರ್‌ಸ್ಟಾರ್ ರಜನಿಕಾಂತ್ ಸರ್ 50 ರೋಮಾಂಚಕ ವರ್ಷಗಳನ್ನು ಪೂರೈಸಿರುವುದನ್ನು ಅಭಿನಂದಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ” ಎಂದಿದ್ದಾರೆ.

45
ಕೂಲಿ ಸಿನಿಮಾ ಹೇಗಿದೆ?

ಆ ಬಳಿಕ ‘ಕೂಲಿ’ ಸಿನಿಮಾವನ್ನು ( Rajinikanth Coolie Movie ) ಶ್ಲಾಘಿಸಿ, ಈ ಸಿನಿಮಾವು ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ. “ನಾಳೆ ಬಿಡುಗಡೆಯಾಗುತ್ತಿರುವ ಅವರ ಬಹುನಿರೀಕ್ಷಿತ ಕೂಲಿ ಸಿನಿಮಾವನ್ನು ಮೊದಲೇ ನೋಡುವ ಅವಕಾಶ ಸಿಕ್ಕಿತು. ಈ ಶಕ್ತಿಯುತ ಮಾಸ್ ಎಂಟರ್‌ಟೈನರ್ ಸಿನಿಮಾವನ್ನು ಸಂಪೂರ್ಣವಾಗಿ ನೋಡಿ ಖುಷಿಪಟ್ಟೆ, ಈ ಸಿನಿಮಾ ಎಲ್ಲೆಡೆ ಪ್ರೇಕ್ಷಕರ ಮನಸ್ಸು ಗೆಲ್ಲುವುದು ಪಕ್ಕಾ” ಎಂದಿದ್ದಾರೆ.

55
ಕೂಲಿ ಸಿನಿಮಾದಲ್ಲಿ ಉಪೇಂದ್ರ ನಟನೆ

ಈ ಆಕ್ಷನ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟ ಉಪೇಂದ್ರ, ನಾಗಾರ್ಜುನ, ಆಮಿರ್‌ ಖಾನ್‌, ಶ್ರುತಿ ಹಾಸನ್‌, ಪೂಜಾ ಹೆಗಡೆ ಕೂಡ ನಟಿಸಿದ್ದಾರೆ. ಒಂದು ವಿಶೇಷವಾದ ಹಾಡಿಗೆ ಪೂಜಾ ಹೆಗಡೆ ಡ್ಯಾನ್ಸ್‌ ಮಾಡಿದ್ದಾರೆ. 2023ರಲ್ಲಿ ಈ ಸಿನಿಮಾ ಮಾಡೋದಾಗಿ ಘೋಷಿಸಲಾಗಿತ್ತು. ಅನಿರುದ್ಧ್‌ ರವಿಚಂದರ್‌ ಸಂಗೀತ ಈ ಸಿನಿಮಾಕ್ಕಿದೆ. ದೇಶ-ವಿದೇಶಗಳಲ್ಲಿ ಈ ಸಿನಿಮಾ ಶೂಟಿಂಗ್‌ ಆಗಿದೆ.

Read more Photos on
click me!

Recommended Stories