ಎಲ್ಲೆಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್‌ ಕೂಲಿ ಮೇನಿಯಾ: ಪೈರಸಿಗೆ ಕೋರ್ಟ್‌ ತಡೆ

Published : Aug 13, 2025, 04:29 PM IST

ವಿಪರೀತ ಕ್ರೇಜ್‌ ಹೆಚ್ಚಿಸಿಕೊಂಡಿರುವ ‘ಕೂಲಿ’ ಸಿನಿಮಾಕ್ಕೆ ಪೈರಸಿ ಭೀತಿಯೂ ಎದುರಾಗಿದೆ. ಇದಕ್ಕೆ ಕೋರ್ಟ್‌ ತಡೆಯೊಡ್ಡಿದ್ದು, ಆನ್‌ಲೈನ್‌ನಲ್ಲಿ ಪೈರಸಿ ವರ್ಶನ್‌ ಬ್ಲಾಕ್‌ ಮಾಡಲು ಆದೇಶ ನೀಡಿದೆ.

PREV
16

ರಜನಿಕಾಂತ್‌ ನಾಯಕನಾಗಿ ನಟಿಸಿರುವ ಬಹು ತಾರಾಗಣದ ಪವರ್‌ ಪ್ಯಾಕ್‌ ಸಿನಿಮಾ ‘ಕೂಲಿ’ ನಾಳೆ (ಆ.14) ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಎಲ್ಲೆಡೆ ‘ಕೂಲಿ’ ಮೇನಿಯಾ ಕಂಡಿಬಂದಿದ್ದು, ಒಂದೆರಡು ಕಡೆ ಹೊರತುಪಡಿಸಿ, ಚೆನ್ನೈಯಲ್ಲಿ ಫಸ್ಟ್‌ ಡೇ ಶೋಗಳು ಕಂಪ್ಲೀಟ್‌ ಸೋಲ್ಡೌಟ್‌ ಆಗಿವೆ.

26

ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲ ದಿನ ಒಟ್ಟು 56 ಶೋಗಳನ್ನು ಇಡಲಾಗಿದ್ದು ಅಷ್ಟೂ ಶೋಗಳ ಟಿಕೆಟ್‌ ಸೋಲ್ಡೌಟ್‌ ಆಗಿದೆ. ತಮಿಳ್ನಾಡು ಸರ್ಕಾರ ಥೇಟರ್‌ಗಳಲ್ಲಿ ಗರಿಷ್ಠ 150 ರು., ಮಲ್ಟಿಪ್ಲೆಕ್ಸ್‌ಗಳಲ್ಲಿ 160 ರು. ಹಾಗೂ ಐಮ್ಯಾಕ್ಸ್‌ಗಳಲ್ಲಿ 480 ರು. ಗರಿಷ್ಠ ಟಿಕೆಟ್‌ ನಿಗದಿ ಪಡಿಸಿದೆ. ಈ ನಿಯಮ ಉಲ್ಲಂಘಿಸಿ ಹಲವೆಡೆ ಬ್ಲ್ಯಾಕ್‌ನಲ್ಲಿ ಬರೋಬ್ಬರಿ 4500 ರು.ಗೆ ಟಿಕೆಟ್‌ ಮಾರಾಟ ವರದಿಯಾಗಿದೆ.

36

ಕೆಲವೆಡೆ ಥೇಟರ್‌ನವರೇ 1000, 2000 ರು.ಗಳಿಗೆ ಟಿಕೆಟ್‌ ಮಾರಿದ್ದಾರೆ ಎನ್ನಲಾಗಿದೆ. ಜೊತೆಗೆ ರಜನಿಕಾಂತ್‌ ಕಟೌಟ್‌ಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಠಿ ಮಾಡುವ ನೆವದಲ್ಲಿ ಪ್ರೇಕ್ಷಕರಿಂದ ಸಾವಿರಾರು ರುಪಾಯಿ ವಸೂಲಿ ನಡೆದಿದೆಯಂತೆ.

46

ಸಂಕಷ್ಟದಲ್ಲಿ ವಾರ್‌ 2 ಸಿನಿಮಾ: ಆಗಸ್ಟ್‌ 14ರಂದೇ ಬಿಡುಗಡೆಯಾಗುತ್ತಿರುವ ಹೃತಿಕ್‌ ರೋಷನ್‌, ಜೂ. ಎನ್‌ಟಿಆರ್‌ ನಟನೆಯ ಬಿಗ್‌ ಬಜೆಟ್‌ ಆ್ಯಕ್ಷನ್‌ ಸಿನಿಮಾ ‘ವಾರ್‌ 2’ಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ವಾರ್‌ 2’ ಸಿನಿಮಾ ತೆಗೆದು ‘ಕೂಲಿ’ಗೆ ಶೋ ನೀಡಿರುವುದು ಚರ್ಚೆಯಾಗುತ್ತಿದೆ.

56

ಪೈರಸಿಗೆ ಕೋರ್ಟ್‌ ತಡೆ: ವಿಪರೀತ ಕ್ರೇಜ್‌ ಹೆಚ್ಚಿಸಿಕೊಂಡಿರುವ ‘ಕೂಲಿ’ ಸಿನಿಮಾಕ್ಕೆ ಪೈರಸಿ ಭೀತಿಯೂ ಎದುರಾಗಿದೆ. ಇದಕ್ಕೆ ಕೋರ್ಟ್‌ ತಡೆಯೊಡ್ಡಿದ್ದು, ಆನ್‌ಲೈನ್‌ನಲ್ಲಿ ಪೈರಸಿ ವರ್ಶನ್‌ ಬ್ಲಾಕ್‌ ಮಾಡಲು ಆದೇಶ ನೀಡಿದೆ.

66

ಅಮೆರಿಕಾದಲ್ಲಿ ಪ್ರೀ ಬುಕಿಂಗ್‌ ದಾಖಲೆ: ತಮಿಳು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾದಲ್ಲಿ ‘ಕೂಲಿ’ ಸಿನಿಮಾ ಪ್ರಿ ಬುಕಿಂಗ್‌ನಿಂದಲೇ 2 ಮಿಲಿಯನ್‌ ಡಾಲರ್‌ ಅಂದರೆ 17.55 ಕೋಟಿಗೂ ಅಧಿಕ ಗಳಿಕೆ ದಾಖಲಿಸಿದೆ. ಇದನ್ನು ನಿರ್ಮಾಣ ಸಂಸ್ಥೆ ಸನ್‌ ಪಿಕ್ಚರ್ಸ್‌ ಅಧಿಕೃತವಾಗಿ ಘೋಷಿಸಿದೆ.

Read more Photos on
click me!

Recommended Stories