ಇಡೀ ನಾಡಿಗೆ ನಾಡೇ ಎಲ್ಲರೂ ಮೆಚ್ಚುವಂಥ ಕೆಲಸ ಮಾಡಿದ Actor Suriya! ಏನದು?

Published : Aug 13, 2025, 11:27 AM IST

ನಟ ಸೂರ್ಯ ಅವರು ಹದಿನೈದು ವರ್ಷಗಳ ಹಿಂದೆ ಅಗರಂ ಫೌಂಡೇಶನ್‌ ಸ್ಥಾಪಿಸಿದ್ದರು. ಸೂರ್ಯ ಅವರು ಈ ಮೂಲಕ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. 

PREV
15

ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಸಮಾಜ ಸೇವೆಯಲ್ಲಿಯೂ ಕೂಡ ನಟ ಸೂರ್ಯ ಹೀರೋ. 2006 ರಲ್ಲಿ ಅಗರಂ ಫೌಂಡೇಶನ್ ಶುರು ಮಾಡಿ ಬಡ ಮಕ್ಕಳಿಗೆ ಶಿಕ್ಷಣ ಕೊಡ್ತಿದ್ದಾರೆ. ಅನೇಕ ಕಾರ್ಪೊರೇಟ್ ಕಂಪನಿಗಳು ಇದಕ್ಕೆ ಸಹಾಯ ಮಾಡ್ತಿವೆ. 15 ವರ್ಷಗಳಲ್ಲಿ 6000 ಕ್ಕೂ ಹೆಚ್ಚು ಪದವೀಧರರನ್ನು ಸೃಷ್ಟಿಸಿದ್ದಾರೆ. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಾಕ್ಟರ್ ಆಗಿದ್ದಾರೆ.

25

ಅಗರಂ ಫೌಂಡೇಶನ್ ನಿಂದ ಅನೇಕರ ಬದುಕು ಬದಲಾಗಿದೆ. 15 ವರ್ಷಗಳ ಹಿಂದೆ ಗೋಪಿನಾಥ್ ಒಂದು ಕಾರ್ಯಕ್ರಮ ಮಾಡಿದ್ರು. ಆಗ ನಂದಕುಮಾರ್ ಡಾಕ್ಟರ್ ಆಗಬೇಕು ಅಂತ ಆಸೆ ಪಟ್ಟಿದ್ರು. ಅಗರಂ ಅವರ ಕನಸನ್ನು ನನಸು ಮಾಡಿದೆ. ಈಗ ನಂದಕುಮಾರ್ ಡಾಕ್ಟರ್ ಆಗಿದ್ದಾರೆ.

35

ಅಗರಂ ನೋಡಿದಂತೆ 20,000 ಜನರಲ್ಲಿ ತಂದೆ ಇಲ್ಲದವರಿಗಿಂತ ತಾಯಿ ಇಲ್ಲದ ಮಕ್ಕಳೇ ಜಾಸ್ತಿ. ತಂದೆ ಇಲ್ಲದಿದ್ರೂ ತಾಯಿ ಮಕ್ಕಳನ್ನು ಓದಿಸುತ್ತಾರೆ. 700 ಕುಟುಂಬಗಳಲ್ಲಿ ತಂದೆಯ ಕುಡಿತದಿಂದ ಮಕ್ಕಳ ಭವಿಷ್ಯ ಹಾಳಾಗಿದೆ ಅಂತ ಸೂರ್ಯ ಹೇಳಿದ್ದಾರೆ. ಅವರೆಲ್ಲರನ್ನೂ ಸೂರ್ಯ ಓದಿಸುತ್ತಿದ್ದಾರೆ.

45

ನಟ ಸೂರ್ಯ ಅವರ ಈ ಸಹಾಯಕ್ಕೆ ಇಡೀ ಕುಟುಂಬವೇ ಸಾಥ್‌ ನೀಡಿದೆ. ಇವರು ಮಕ್ಕಳು ಕೂಡ ತಮ್ಮ ಪಾಕೆಟ್‌ ಮನಿಯ ಹಣವನ್ನು ನೀಡುತ್ತಿದ್ದಾರಂತೆ. 

55

ಈ ಸಂಸ್ಥೆಯಿಂದ ಸಾಕಷ್ಟು ಜನರು ಇಂಜಿನಿಯರ್‌ ಆಗಿದ್ದಾರೆ, ಡಾಕ್ಟರ್‌ ಆಗಿದ್ದಾರೆ. ಇದು ನಮಗೆ ತುಂಬ ಖುಷಿಯಾದ ವಿಷಯ ಎಂದು ಸೂರ್ಯ ಹೇಳಿದ್ದಾರೆ. 

Read more Photos on
click me!

Recommended Stories