ಅಚ್ಚರಿಗೊಳಿಸಿದ ನಶಾ ಸಾಂಗ್‌ಗೆ ತಮನ್ನಾ ಚಾರ್ಜ್, ಒಂದೊಂದು ನಿಮಿಷಕ್ಕೆ ಒಂದೊಂದು ಕೋಟಿ ರೂ

Published : Apr 25, 2025, 09:44 AM ISTUpdated : Apr 25, 2025, 09:54 AM IST

ಅಜಯ್ ದೇವಗನ್ ಅವರ 'ರೈಡ್ 2' ಚಿತ್ರದ 'ನಶಾ' ಹಾಡಿನ ಡ್ಯಾನ್ಸ್‌ಗೆ ತಮನ್ನಾ ಪಡೆದ ಸಂಭಾವನೆಯ ಬಗ್ಗೆ ಮಾಹಿತಿ ಈಗ ಬಹಿರಂಗವಾಗಿದೆ.  

PREV
14
ಅಚ್ಚರಿಗೊಳಿಸಿದ ನಶಾ ಸಾಂಗ್‌ಗೆ ತಮನ್ನಾ ಚಾರ್ಜ್, ಒಂದೊಂದು ನಿಮಿಷಕ್ಕೆ ಒಂದೊಂದು ಕೋಟಿ ರೂ

ಐಟಂ ಡ್ಯಾನ್ಸ್:

ತಮನ್ನಾ ಒಂದೆಡೆ ನಟನೆಯಲ್ಲಿ ಮಿಂಚುತ್ತಿದ್ದರೂ, ಅವರನ್ನು ಐಟಂ ಡ್ಯಾನ್ಸ್ ಮೂಲಕ ಪ್ರತಿ ಸಿನಿಮಾದಲ್ಲಿ ಅಪೀಯರೆನ್ಸ್ ಮಾಡಿಸಲು ಹಲವು ನಿರ್ದೇಶಕರು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಅವರ ಅದೃಷ್ಟ ಕೂಡ ಕಾರಣ ಎನ್ನಬಹುದು. ಇದಕ್ಕೂ ಮೊದಲು ಅವರು ಐಟಂ ಡ್ಯಾನ್ಸ್ ಮಾಡಿದ ಜೈಲರ್, ಸ್ತ್ರೀ 2 ಚಿತ್ರಗಳ ಐಟಂ ನಂಬರ್ ಸಹ ಸೂಪರ್ ಹಿಟ್ ಆಗಿದ್ದವು.

24
'ರೈಡ್ 2' ಚಿತ್ರ

'ರೈಡ್ 2'

ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ನಟಿಸಿರುವ 'ರೈಡ್ 2' ಚಿತ್ರದ 'ನಶಾ' ಹಾಡು ಬಿಡುಗಡೆಯಾಗಿದೆ. 'ಆಜ್ ಕಿ ರಾತ್' ಶೈಲಿಯಲ್ಲಿ ಸಿದ್ಧವಾಗಿರುವ ಈ ಹಾಡಿನಲ್ಲಿ ತಮನ್ನಾ ತಮ್ಮ ನೃತ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. 

34
ನಶಾ ಹಾಡು:

ತಮನ್ನಾ ನೃತ್ಯ:

ವಿಶೇಷವಾಗಿ ತಮನ್ನಾ ಅವರ ನೃತ್ಯ ಚಲನೆಗಳು ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಿವೆ.  ಹಾಗಾಗಿ ಈ ಹಾಡನ್ನು ರೀಲ್ಸ್ ಮಾಡಿ ವೈರಲ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. 'ಜೈಲರ್' ಚಿತ್ರದ ಕಾವಲಯ್ಯ ಹಾಡಿನಂತೆ ಈ ಹಾಡು ಕೂಡ ಈಗ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದೆ. ಈ ಹಾಡಿಗೆ ಡ್ಯಾನ್ಸ್‌ಗೆ ತಮನ್ನಾ ಪಡೆದ ಸಂಭಾವನೆ ಬಗ್ಗೆ ಮಾಹಿತಿ ವೈರಲ್ ಆಗುತ್ತಿದೆ.

 

44
ತಮನ್ನಾ ಸಂಭಾವನೆ:

5 ನಿಮಿಷಗಳ ಹಾಡಿಗೆ 5 ಕೋಟಿ:

ಅದರಂತೆ, ಈ 5 ನಿಮಿಷಗಳ ಹಾಡಿಗೆ 5 ಕೋಟಿ ಸಂಭಾವನೆ ಪಡೆದಿದ್ದಾರಂತೆ ತಮನ್ನಾ. ಜೈಲರ್ ಚಿತ್ರದಲ್ಲಿ ನರ್ತಿಸಲು 3 ಕೋಟಿ ಸಂಭಾವನೆ ಪಡೆದಿದ್ದ ತಮನ್ನಾ, ಈಗ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದು ಹಲವರನ್ನು ಅಚ್ಚರಿಗೊಳಿಸಿದ್ದಾರೆ.  ತಮನ್ನಾ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿಂತೆ ಚಾರ್ಜ್ ಮಾಡಿದ್ದಾರೆ. 

 

Read more Photos on
click me!

Recommended Stories