ಶಿವಣ್ಣ ನನ್ನ ಅಣ್ಣ.. ಅವರ ಸಿನಿಮಾದಲ್ಲಿ ಸಣ್ಣ ಪಾತ್ರಕ್ಕೂ ನಾನು ಸಿದ್ಧ: ನಟ ಜಯಂ ರವಿ

Published : Aug 29, 2025, 05:53 PM IST

ಈಗ ನನ್ನ ನಿರ್ದೇಶನದ ಚಿತ್ರದ ಪ್ರೋಮೋ ಶಿವಣ್ಣ ಬಿಡುಗಡೆ ಮಾಡುತ್ತಿರುವುದು ನನ್ನ ಅದೃಷ್ಟ. ಶಿವಣ್ಣ ಚಿತ್ರಗಳಲ್ಲಿ ಒಂದು ಸೀನ್‌ ಇರೋ ಪಾತ್ರ ಇದ್ದರೂ ಮಾಡುವುದಕ್ಕೆ ನಾನು ರೆಡಿ’ ಎಂದರು ನಟ ಜಯಂ ರವಿ.

PREV
16

ತಮಿಳು ನಟ ಜಯಂ ರವಿ ಈಗ ನಿರ್ದೇಶಕ ಹಾಗೂ ನಿರ್ಮಾಪಕರಾಗುತ್ತಿದ್ದಾರೆ. ಇತ್ತೀಚೆಗೆ ಅವರು ರವಿ ಮೋಹನ್‌ ಸ್ಟುಡಿಯೋ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಲಾಂಚ್‌ ಮಾಡುವ ಜತೆಗೆ ತಮ್ಮ ನಿರ್ಮಾಣದ ಮೂರು ಚಿತ್ರಗಳ ಪ್ರೋಮೋ ಬಿಡುಗಡೆ ಮಾಡಿದರು.

26

ಚೆನ್ನೈನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮಕ್ಕೆ ನಟ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿಯಾಗಿ ಹಾಜರಿದ್ದು, ಜಯಂ ರವಿ ಅವರೇ ಮೊದಲ ಬಾರಿಗೆ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಆನ್ ಆರ್ಡಿನರಿ ಮ್ಯಾನ್‌’ ಚಿತ್ರದ ಟೈಟಲ್‌ ಪ್ರೋಮೋ ಬಿಡುಗಡೆ ಮಾಡಿದರು.

36

‘ಬ್ರೋ ಕೋಡ್‌’ ಚಿತ್ರದಲ್ಲಿ ಕನ್ನಡ ನಟಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎಸ್‌ ಜೆ ಸೂರ್ಯ ಅವರು ಶ್ರದ್ಧಾ ಶ್ರೀನಾಥ್‌ ಅವರಿಗೆ ನಾಯಕ. ಜಯಂ ರವಿ ಹಾಗೂ ಅರ್ಜುನ್‌ ಅಶೋಕನ್‌ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕಾರ್ತಿಕ್‌ ಯೋಗಿ ನಿರ್ದೇಶನ ಮಾಡುತ್ತಿದ್ದಾರೆ.

46

ಸಸ್ಪೆನ್ಸ್‌, ಕ್ರೈಮ್‌ ಥ್ರಿಲ್ಲರ್‌ ಕತೆಯನ್ನು ಒಳಗೊಂಡ ‘ಖಾಕಿ ಸ್ಕ್ವಾಡ್‌’ ಚಿತ್ರವನ್ನು ಎಸ್‌ ಪಿ ಶಕ್ತಿವೇಲ್‌ ನಿರ್ದೇಶನ ಮಾಡುತ್ತಿದ್ದು, ಬಹುತೇಕ ಹೊಸಬರೇ ನಟಿಸುತ್ತಿದ್ದಾರೆ. ಈ ಕುರಿತು ಜಯಂ ರವಿ, ‘ನನ್ನ ಇಷ್ಟು ವರ್ಷಗಳ ಸಿನಿಮಾ ಪಯಣದ ಅನುಭವದೊಂದಿಗೆ ನಿರ್ದೇಶನ, ನಿರ್ಮಾಣಕ್ಕೆ ಬಂದಿದ್ದೇನೆ.

56

ನನ್ನ ಈ ಹೊಸ ಸಾಹಸಕ್ಕೆ ಬೆನ್ನೆಲುಬಾಗಿ ತುಂಬಾ ನಟರು ಇದ್ದಾರೆ. ಬೆಂಗಳೂರಿನಿಂದ ಶಿವರಾಜ್‌ಕುಮಾರ್‌ ಬಂದಿದ್ದಾರೆ. ಅವರು ನನಗೆ ಅಣ್ಣನಂತೆ. ಶಿವಣ್ಣ ಅವರ ಡಬ್ಬಿಂಗ್‌ ಚಿತ್ರಗಳನ್ನು ನೋಡಿಕೊಂಡು ಬೆಳೆದವನು ನಾನು.

66

ಈಗ ನನ್ನ ನಿರ್ದೇಶನದ ಚಿತ್ರದ ಪ್ರೋಮೋ ಶಿವಣ್ಣ ಬಿಡುಗಡೆ ಮಾಡುತ್ತಿರುವುದು ನನ್ನ ಅದೃಷ್ಟ. ಶಿವಣ್ಣ ಚಿತ್ರಗಳಲ್ಲಿ ಒಂದು ಸೀನ್‌ ಇರೋ ಪಾತ್ರ ಇದ್ದರೂ ಮಾಡುವುದಕ್ಕೆ ನಾನು ರೆಡಿ’ ಎಂದರು. ಈ ಮೂರು ಚಿತ್ರಗಳು ತಮಿಳಿನ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ಬರಲಿವೆ.

Read more Photos on
click me!

Recommended Stories