ಚಿರಂಜೀವಿಗೆ ಯುಕೆ ಸಂಸತ್ತಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ! ಬ್ರಿಟೀಷ್ ಗೌರವ ಪಡೆದ ಮೊದಲ ಭಾರತೀಯ ನಟ!
ದಕ್ಷಿಣದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಯುಕೆ ಸಂಸತ್ತಿನಲ್ಲಿ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬ್ರಿಟಿಷ್ ಸರ್ಕಾರದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಈ ಗೌರವವು ತಮ್ಮ ಕೆಲಸವನ್ನು ಹುರುಪಿನಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಚಿರಂಜೀವಿ ಹೇಳಿದ್ದಾರೆ.