ಈ ನಟನಿಂದ ಹತ್ತಿರವಾದ Abhishek Bachchan ಮತ್ತು Aishwarya Rai!
First Published | Apr 6, 2022, 3:25 PM ISTಅಭಿಷೇಕ್ ಬಚ್ಚನ್ (Abhishek Bachchan) ಅವರ ಚಿತ್ರ ದಸ್ವಿ ಏಪ್ರಿಲ್ 7 ರಂದು OTT ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ದಿನಗಳಲ್ಲಿ ಅವರು ತಮ್ಮ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ, ಅವರು ಕೆಲವು ಸಂದರ್ಶನಗಳನ್ನು ಸಹ ನೀಡಿದರು. ಅದರಲ್ಲಿ ಅವರು ತಮ್ಮ ಜೀವನ, ಕುಟುಂಬ ಮತ್ತು ಪತ್ನಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಬಗ್ಗೆ ಸಾಕಷ್ಟು ಮಾತನಾಡಿದರು ಮತ್ತು ಕೆಲವು ರಹಸ್ಯಗಳನ್ನು ಸಹ ಬಹಿರಂಗಪಡಿಸಿದರು. ಅಂದಹಾಗೆ, ಅಭಿಷೇಕ್-ಐಶ್ವರ್ಯಾ ಜೋಡಿಯು ಬಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಅಡರೋಬಲ್ ಜೋಡಿಯಾಗಿದೆ. ಅಷ್ಟಕ್ಕೂ ಅಭಿಷೇಕ್-ಐಶ್ವರ್ಯ ಹೇಗೆ ಹತ್ತಿರವಾದರು ಮತ್ತು ಇಬ್ಬರ ನಡುವೆ ಆತ್ಮೀಯತೆ ಹೇಗೆ ಬೆಳೆಯಿತು? ಇದಕ್ಕೆ ಕಾರಣ ಯಾರು ಗೊತ್ತಾ.