ತಾನು ಮತ್ತು ಐಶ್ವರ್ಯ ದಿನವಿಡೀ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದವು. ಸಂಜೆ ಮನೆಯ ಮಹಿಳೆಯರು ಪೂಜೆ ಮಾಡಿದರು. ನಂತರ, ರಾತ್ರಿ ಚಂದ್ರನಿಗಾಗಿ ನಾವೆಲ್ಲರೂ ಕಾದು ನಮ್ಮ ಉಪವಾಸವನ್ನು ಕೊನೆಗೊಳೆಸಿದ್ದೇವು ಎಂದು ಅಭಿಷೇಕ್ ಬಚ್ಚನ್ ಫ್ಯಾಮಿಲಿಯ ಕಾರ್ವಾ ಚೌತ್ ಸೆಲೆಬ್ರೆಷನ್ ಬಗ್ಗೆ ಹೇಳಿದ್ದಾರೆ
ವರದಿಯ ಪ್ರಕಾರ, ಅಭಿಷೇಕ್ ಬಚ್ಚನ್ ಅವರ ಲುಡೋ ಚಿತ್ರದ ಸಹನಟ ಇನಾಯತ್ ವರ್ಮಾ ಸಂದರ್ಶನದಲ್ಲಿ ಜೂನಿಯರ್ ಬಚ್ಚನ್‌ಗೆ ಸಂಬಂಧಿಸಿದ ಒಂದು ದೊಡ್ಡ ರಹಸ್ಯವನ್ನು ತೆರೆದಿಟ್ಟಿದ್ದಾರೆ
ಅಭಿಷೇಕ್ ಭಯ್ಯಾ ಆ ದಿನ ಸರ್ಗಿ ಆಚರಣೆಯನ್ನು ಮಾಡಲು ಬೆಳಿಗ್ಗೆ ಎದ್ದೇಳಲು ಮರೆತಿದ್ದಾರೆ. ಈ ಕಾರಣಕ್ಕಾಗಿ, ಅವರು ಇಡೀ ದಿನ ಹಸಿವಿನಿಂದ ಎಂದು ಸಂದರ್ಶನವೊಂದರಲ್ಲಿ, ಇನಾಯತ್ ವರ್ಮಾ ಹೇಳಿದರು.
ಅಭಿಷೇಕ್ ಭಯ್ಯಾ ಉಪವಾಸದ ವ್ರತ ಇಟ್ಟುಕೊಂಡಿದ್ದರು. ಆದರೆ ಅವರು ಬೆಳಿಗ್ಗೆ ಎದ್ದ ನಂತರ ಸರ್ಗಿ ಮಾಡಲು ಮರೆತಿದ್ದಾರೆ. ಹಾಗಾಗಿ ಇಡೀ ದಿನ ಅವರು ಏನನ್ನೂ ತಿನ್ನಲಿಲ್ಲ ಎಂದು ಇನಾಯತ್ ಹೇಳಿದರು.
ಇತ್ತೀಚೆಗೆ ಅಭಿಷೇಕ್ ಪತ್ನಿ ಐಶ್ವರ್ಯಾರ ಜನ್ಮದಿನದಂದು ವಿಶೇಷ ರೀತಿಯಲ್ಲಿವಿಶ್ ಮಾಡಿದ್ದರು. ಅಭಿಷೇಕ್ ಐಶ್ವರ್ಯಾ ಜೊತೆಯ ಸುಂದರವಾದ ಫೋಟೋ ಜೊತೆ ರೋಮ್ಯಾಂಟಿಕ್ ಮೆಸೇಜ್‌ನ್ನು ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
'ಹ್ಯಾಪಿ ಬರ್ಥ್‌ಡೇ ವೈಫಿ. ಎಲ್ಲದಕ್ಕಾಗಿ ಧನ್ಯವಾದಗಳು. ನೀವು ನಮ್ಮೆಲ್ಲರಿಗಾಗಿ ಮಾಡಿರುವುದು ನಮಗೆ ತುಂಬಾ ಮುಖ್ಯವಾಗಿದೆ. ನೀನು ಯಾವಾಗಲೂ ನಗುತ್ತೀರು ಮತ್ತು ಸಂತೋಷವಾಗಿರಿ. ನಾವು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ಐ ಲವ್ ಯೂ' ಎಂದು ಫೋಸ್ಟ್ ಮಾಡಿದ್ದಾರೆ ಅಭಿಷೇಕ್ ಬಚ್ಚನ್.
ಆ ಫೋಟೋದಲ್ಲಿ, ಐಶ್ವರ್ಯಾ ತಿಳಿ ಹಳದಿ ಬಣ್ಣದ ಎಂಬ್ರಾಡರಿಯ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಟ್ರೆಡಿಷನಲ್ ಲುಕ್‌ನಲ್ಲಿದ್ದಾರೆ.
'ಗುರು ಸಿನಿಮಾದ ಶೂಟಿಂಗ್ ಸಮಯದಲ್ಲಿ ಅಭಿಷೇಕ್ ಬಚ್ಚನ್ ಮದುವೆಗೆ ಪ್ರಪೋಸ್ ಮಾಡಿದ್ದರು.2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಆರಾಧ್ಯಾ ಎಂಬ ಮಗಳಿದ್ದಾಳೆ.
ಐಶ್ವರ್ಯಾ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಮಾಡೆಲಿಂಗ್ ಜಗತ್ತಿನಲ್ಲಿಯೂ ಯಶಸ್ಸನ್ನು ಸಾಧಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಬಾಲಿವುಡ್‌ನಲ್ಲಿ ನೆಪೋಟಿಜಂ ವಿಷಯ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಿ-ಟೌನ್‌ನಲ್ಲಿ ಇದರ ಚರ್ಚೆ ತೀವ್ರಗೊಂಡಿದೆ. ಅನೇಕ ಟಾಪ್ ಸ್ಟಾರ್ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಈ ವಿಷಯದ ಬಗ್ಗೆ ಮೌನ ಮುರಿದ್ದಾರೆ. ಜೂನಿಯರ್ ಬಚ್ಚನ್‌ರನ್ನು ಯಾವಾಗಲೂ ತಂದೆ ಅಮಿತಾಬ್ ಬಚ್ಚನ್ ಜೊತೆ ಹೋಲಿಸಿ ಟ್ರೋಲ್ ಮಾಡಲಾಗುತ್ತದೆ. 2000 ರಲ್ಲಿ 'ರೆಫ್ಯೂಜಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಪ್ರೇಕ್ಷಕರ ಒಪ್ಪಿಕೊಂಡರೆ ಮಾತ್ರ ನಮ್ಮ ವೃತ್ತಿಜೀವನವನ್ನು ದೀರ್ಘಗೊಳಿಸಬಹುದು ಎಂದು ಹೇಳಿದ್ದಾರೆ.
ಸ್ವಜನಪಕ್ಷಪಾತದ ಬಗ್ಗೆ ಅಭಿಷೇಕ್, ' ನನಗಾಗಿ ತಂದೆ ಎಂದಿಗೂ ಯಾರೊಂದಿಗೂ ಮಾತನಾಡಲಿಲ್ಲ ಅವರು ಯಾರಿಗೂ ಕಾಲ್ ಮಾಡಲಿಲ್ಲ ಎಂಬುದು ಸತ್ಯ. ನನಗಾಗಿ ಚಿತ್ರ ಮಾಡಲಿಲ್ಲ, ಬದಲಿಗೆ ನಾನೇ ತಂದೆಗೆ 'ಪಾ' ಚಿತ್ರ ನಿರ್ಮಿಸಿದ್ದೇನೆ. ಇದು ವ್ಯವಹಾರ ಎಂದು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅಭಿಷೇಕ್ ಹೇಳಿದರು.
ಮೊದಲ ಚಿತ್ರದ ನಂತರ, ಜನರು ನಿಮ್ಮಲ್ಲಿ ಏನನ್ನೂ ನೋಡದಿದ್ದರೆ ಅಥವಾ ಚಿತ್ರ ಕೆಲಸ ಮಾಡದಿದ್ದರೆ ನಿಮಗೆ ಮುಂದಿನ ಕೆಲಸ ಸಿಗುವುದಿಲ್ಲ. ಇದು ಜೀವನದ ಕಹಿ ಸತ್ಯ ಎಂದಿದ್ದಾರೆ.
ಅಭಿಷೇಕ್ ಅನುರಾಗ್ ಬಸು ಅವರ 'ಲುಡೋ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು , ಅದರಲ್ಲಿ ಕ್ರಿಮಿನಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಐಶ್ ಪ್ರಸ್ತುತ ಯಾವುದೇ ಬಾಲಿವುಡ್ ಸಿನಿಮಾದ ಆಫರ್ ಹೊಂದಿಲ್ಲ.