ಕನ್ನಡದ ಖ್ಯಾತ ಸಾಹಿತಿ, ಪತ್ರಕರ್ತ ಮತ್ತು ಆಮೀರ್ ಪತ್ನಿ, ಏನಿದು ಸಂಬಂಧದ ಕೊಂಡಿ?

First Published | Nov 29, 2019, 1:53 PM IST

ಬಾಲಿವುಡ್ ಪರ್ಫೆಕ್ಟ್ ಸ್ಟಾರ್ ಆಮೀರ್ ಖಾನ್ ಪತ್ನಿ ಕಿರಣ್ ರಾವ್, ಖ್ಯಾತ ಸೇನಾ ಪತ್ರಕರ್ತ ಶಿವು ಅರೋರಾ ಹಾಗೂ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಎಲ್ಲರೂ ಕಸಿನ್ಸ್. ಅದೂ 'ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?...' ಎಂದು ಹುತ್ತರಿ ಹಾಡು ರಚಿಸಿದ ಕನ್ನಡದ ಖ್ಯಾತ ಸಾಹಿತಿಯ ಮರಿ ಮೊಮ್ಮಕ್ಕಳು. ಕಿರಣ್ ಕರ್ನಾಟಕ ಮೂಲದವರು ಅಂತ ಎಲ್ಲರಿಗೂ ಗೊತ್ತು. ಆದರೆ, ಕನ್ನಡ ನಾಡಿನ ಹೆಮ್ಮೆ, ಪ್ರಖ್ಯಾತ ಸಾಹಿತಿಯ ವಂಶಸ್ಥೆ ಎಂಬುವುದು ಗೊತ್ತಿತ್ತಾ?   ನಾವ್ ಹೇಳ್ತೀವಿ ಕೇಳಿ...

ಕಿರಣ್ ರಾವ್, ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಪತ್ನಿ. ತಮ್ಮ ಸೃಜನಶೀಲತೆಯಿಂದ ಖ್ಯಾತರಾದ ಕಿರಣ್ ಬಾಲಿವುಡ್ ಹಲವು ಚಿತ್ರಗಳಲ್ಲಿ ತಮ್ಮ ಕೌಶಲ್ಯ ತೋರಿದ್ದಾರೆ.
ಖ್ಯಾತ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಅವರನ್ನು ವರಿಸಿರುವ ಕಿರಣ್‌ಗೆ ಒಬ್ಬ ಮಗನಿದ್ದಾನೆ.
Tap to resize

ಮಹಾರಾಷ್ಟ್ರದ ಭೀಕರ ಬರ ಸಮಸ್ಯೆಗಾಗಿ ಹೋರಾಡುತ್ತಿರುವ ಪಾನಿ ಫೌಂಡೇಷನ್ ಸಹ ಸಂಸ್ಥಾಪಕಿಯಾಗಿರುವ ಕಿರಣ್ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಖ್ಯಾತ ಪತ್ರಕರ್ತರಲ್ಲಿ ಶಿವ್ ಅರೋರಾ ಒಬ್ಬರು.
ಸೇನಾ ಪತ್ರಕರ್ತರಾಗಿ ಶಿವ್ ಸಾಕಷ್ಟು ಸೇವೆ ಸಲ್ಲಿಸಿದ್ದು, ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇಂಡಿಯಾ ಟುಡೇಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿವ್ ಅರೂರ್ ತಮ್ಮದೇ ಆದ ವಿಶಿಷ್ಟ ಶೈಲಿಯ ಪತ್ರಿಕೋದ್ಯಮದಿಂದ ಹೆಸರು ಮಾಡಿದವರು.
ಪದ್ಮಾವತಿಯಲ್ಲಿ ಮೆಹರ್ ಉನ್ನೀಸಾ ಳಾಗಿ ನಟಿಸಿದ ಅದಿತಿ ರಾವ್ ಹೈದರಿ ಅಭಿನಯಕ್ಕೆ ಚಿತ್ರಾಭಿಮಾನಿಗಳು ಬೌಲ್ಡ್ ಆಗಿದ್ದರು.
ಅದಿತಿ ರಾವ್. ಬಾಲಿವುಡ್, ತಮಿಳು, ತೆಲಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಅದಿತಿ.
ಬಾಲಿವುಡ್‌‌ನಲ್ಲಿ ಅದಿತಿ, ಕಿರಣ್ ಕಸಿನ್ಸ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಆಮೀರ್ ಖಾನ್ ಪತ್ನಿಯಾದ ಮೇಲಂತೂ ಕಿರಣ್ ಸದಾ ಸದ್ದು ಮಾಡುತ್ತಿರುತ್ತಾರೆ.
ಕಿರಣ್, ಶಿವ್ ಹಾಗೂ ಅದಿತಿ ದಕ್ಷಿಣ ಕನ್ನಡ ಮೂಲದ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಮರಿ ಮೊಮ್ಮಕ್ಕಳು. ಮಾಸ್ತಿ, ಕಾರಂತರು ಹಾಗೂ ಕುವೆಂಪು ಅವರ ಸಮ ಕಾಲೀನರಾದ ಪಂಜೆ ಮಂಗೇಶರಾಯರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರ.
ಕೊಂಕಣಿ ಹಾಗೂ ಕನ್ನಡದಲ್ಲಿ ಸಾಹಿತ್ಯ ಸೇವೆ ಸಲ್ಲಿಸಿದ ಮಂಗೇಶರಾಯರು ನವೋದಯ ಕನ್ನಡ ಸಾಹಿತಿಗಳಲ್ಲಿ ಪ್ರಮುಖರು. ನಾಟಕ, ಕವನ, ಅನುವಾದ ಹಾಗೂ ಸಾಹಿತ್ಯದ ಇತರೆ ಪ್ರಾಕಾರಗಳಲ್ಲಿ ಇವರ ಸಾಧನೆ ಅಮೋಘ.
ತಮ್ಮ ಕೊನೆ ಕಾಲವನ್ನು ಮಕ್ಕಳೊಡನೆ ಕಳೆದ ಮಂಗೇಶರಾಯರು ಹೈದರಾಬಾದಿನಲ್ಲಿದ್ದ ತಮ್ಮ ಮಗನ ಮನೆಯಲ್ಲಿ ಕೊನೆ ಉಸಿರೆಳೆದರು. ಆಗಲೇ ಇವರ ಮಕ್ಕಳು ಪಂಜೆಯನ್ನು ತೊರೆದಿದ್ದು, ದೇಶದ ವಿವಿಧೆಡೆ ನೆಲೆಸಿದ್ದಾರೆ. ಇದೀಗ ಇವರ ಕುಟುಂಬಸ್ಥರು ಯಾರೂ ಪಂಜೆಯಲ್ಲಿ ಇಲ್ಲ.

Latest Videos

click me!