ಸೆಲೆಬ್ರೆಟಿ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರು ಕರಣ್ ಜೋಹರ್ ಮನೆಯ ಪ್ರತಿಯೊಂದು ಮೂಲೆಯನ್ನು ಅದ್ಭುತವಾಗಿ ರಿನೋವೇಟ್ ಮಾಡಿದ್ದಾರೆ.
ತಮ್ಮ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಸುಮಾರು 5,500 ಚದರ ಅಡಿ ಅಪಾರ್ಟ್‌ಮೆಂಟ್ ಅನ್ನು ಪೆಂಟ್‌ಹೌಸ್ ಆಗಿ ವಿಸ್ತರಿಸಲು ನಿರ್ಧರಿಸಿದಾಗ ಕರಣ್ ಜೋಹರ್ ಅವರು ಸ್ನೇಹಿತೆ ಗೌರಿ ಖಾನ್ ಅವರಿಗೆ ಕೆಲಸ ಒಪ್ಪಿಸಿದ್ದರು.
ಗೌರಿ ಖಾನ್ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳ ಒಳಾಂಗಣವನ್ನು ವಿನ್ಯಾಸಗೊಳಿಸಿದ್ದಾರೆ. ಗೌರಿ ಮತ್ತು ಕರಣ್ ಜೋಹರ್ ಉತ್ತಮ ಬಾಂಡಿಗ್ ಹೊಂದಿದ್ದಾರೆ.
ಈ ಮೊದಲು ಕೂಡ ನಿರ್ಮಾಪಕ ಹಾಗೂ ಫ್ರೆಂಡ್ ಕರಣ್ ಜೋಹರ್ ಅವರ ಮನೆಯನ್ನು ಗೌರಿ ಖಾನ್ ನವೀಕರಿಸಿದ್ದರು ಎಂದು ತಿಳಿದು ಬಂದಿದೆ.
ಕರಣ್ ಜೋಹರ್ ಮನೆಗೆ ಬೆಸ್ಟ್ ಲುಕ್ ನೀಡಲು ಈಗ ಮತ್ತೊಮ್ಮೆ ಗೌರಿ ಖಾನ್ ಇಂಟೀರಿಯರ್ ಡಿಸೈನಿಂಗ್ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ.
ನವೀಕರಿಸಿದ ಮನೆಯ ಕೆಲವು ಫೋಟೋಗಳನ್ನು ದೀರ್ಘ ಟಿಪ್ಪಣಿಯೊಂದಿಗೆ ಕರಣ್ ಜೋಹರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಆಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ
ಮನೆಯ ಇಂಟೀರಿಯರ್ ಡಿಸೈನ್ ಮಾಡುವ ಸಮಯದಲ್ಲಿ ಗೌರಿ ಖಾನ್ ಮನೆಯ ಒಳಭಾಗದಲ್ಲಿ ಸಹ ಹಸಿರು ಇರುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.
ಕರಣ್ ಜೋಹರ್ ಅವರ ಮನೆಯ ಡೈನಿಂಗ್ ಪ್ರದೇಶವು ಸಹ ವಿಶೇಷವಾಗಿ ಮರಗಳು ಮತ್ತು ಗಿಡಗಳು ಮತ್ತು ಲೈಟ್‌ಗಳಿಂದ ಅಲಂಕರಿಸಲಾಗಿದೆ.
ಕರಣ್ ಅವರ ಅಭಿರುಚಿ ಮತ್ತು ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಗೌರಿ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ.
ಮನೆಯ ಪ್ರತಿ ಕೋಣೆಯಲ್ಲೂ ಅಧುನಿಕ ಹಾಗೂ ವಿಭಿನ್ನ ಸೋಫಾ ಮತ್ತು ಕೌಚ್‌ಗಳು ಇರುವಂತೆ ವಿನ್ಯಾಸ ಗೊಳಿಸಿರುವುದನ್ನು ಗಮನಿಸಬಹುದು