ದೇವರ್ ಮಗನ್
ಕಮಲ್ ಹಾಸನ್ ನಟಿಸಿ, ನಿರ್ಮಿಸಿ, ಕಥೆ-ಸಂಭಾಷಣೆ ಬರೆದ ಚಿತ್ರ 'ದೇವರ್ ಮಗನ್'. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಕಾಲಾತೀತವಾಗಿ ಆಚರಿಸಲ್ಪಡುವ ತಮಿಳು ಚಿತ್ರಗಳಲ್ಲಿ ಇದೂ ಒಂದು. 1992 ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಗೌತಮಿ, ಶಿವಾಜಿ ಗಣೇಶನ್ ಮುಂತಾದವರು ನಟಿಸಿದ್ದಾರೆ. ಭರತನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.