ಮೂವರು ಮಕ್ಕಳಿದ್ದರೂ ಮಾಲ್ಡೀವ್ಸ್‌ನಲ್ಲಿ ಮರು ಮದುವೆಯಾದ ಸನ್ನಿ ಲಿಯೋನ್‌!

Published : Nov 06, 2024, 12:00 PM IST

13 ವರ್ಷಗಳ ಹಿಂದೆ ಡೇನಿಯನ್‌ ವೆಬರ್‌ ಜೊತೆ ವಿವಾಹವಾಗಿದ್ದ ಸನ್ನಿ ಲಿಯೋನ್ ಈಗ ಮತ್ತೊಮ್ಮೆ ಮಾಲ್ಡೀವ್ಸ್‌ನಲ್ಲಿ ಡೇನಿಯಲ್‌ ವೆಬರ್‌ರನ್ನು ಮದುವೆಯಾಗಿದ್ದಾರೆ. 

PREV
16
ಮೂವರು ಮಕ್ಕಳಿದ್ದರೂ ಮಾಲ್ಡೀವ್ಸ್‌ನಲ್ಲಿ ಮರು ಮದುವೆಯಾದ ಸನ್ನಿ ಲಿಯೋನ್‌!

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ತನ್ನ ಪತಿ ಡೇನಿಯಲ್‌ ವೆಬರ್ ಜೊತೆಗೆ ಮರು ಮದುವೆಯಾಗಿದ್ದಾರೆ. 13 ವರ್ಷಗಳ ಹಿಂದೆ ಡೇನಿಯನ್‌ ವೆಬರ್‌ ಜೊತೆ ವಿವಾಹವಾಗಿದ್ದ ಸನ್ನಿ ಲಿಯೋನ್ ಈಗ ಮತ್ತೊಮ್ಮೆ ಮಾಲ್ಡೀವ್ಸ್‌ನಲ್ಲಿ ಅವರನ್ನು ಮದುವೆಯಾಗಿದ್ದಾರೆ. 
 

26

ಮಕ್ಕಳಾದ ನಿಶಾ, ನೋಹ್ ಮತ್ತು ಆಶರ್ ಈ ವಿವಾಹಕ್ಕೆ ಸಾಕ್ಷಿಯಾದರು. ಈ ವಿವಾಹ ತಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿ ದಂಪತಿ ಹೇಳಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಸಿನಿಮಾದಲ್ಲಿ ಸನ್ನಿ ನಟಿಸಿದ್ದಾರೆ. ಡಿ.20ಕ್ಕೆ ಈ ಚಿತ್ರ ರಿಲೀಸ್‌ ಆಗಲಿದೆ.

36

ನಟಿ ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಬಡತನ ಕಂಡವರು. ಕೆನಡಾದಲ್ಲಿ ಜನಿಸಿ ಅಲ್ಲಿಯೇ ಬಾಲ್ಯವನ್ನು ಕಳೆದಿರುವ ಸನ್ನಿ ಲಿಯೋನ್ ಭಾರತದ ಅಮ್ಮ ಹಾಗು ಕೆನಡಾದ ಅಪ್ಪ ಜೋಡಿಗೆ ಹುಟ್ಟಿದ ಮಗು. ಹೀಗಾಗಿ ಸನ್ನಿಗೆ ಭಾರತದ ಬೇರು ಸಹ ಇದೆ ಎನ್ನಬಹುದು. 

46

ಇಡೀ ಪ್ರಪಂಚದ ಗಮನ ಸೆಳೆದಿರುವ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ ಎಂಬುದು ಬಹತೇಕರಿಗೆ ಗೊತ್ತು. ಕೆಲವು ವರ್ಷಗಳ ಹಿಂದೆ ಸನ್ನಿ ಲಿಯೋನ್ ಎಂದರೆ ಸೆಕ್ಸ್ ಬಾಂಬ್, ಸೆಕ್ಸ್ ತಾರೆ ಎಂದೇ ಗುರುತಿಸಿಕೊಂಡಿದ್ದರು. 

56

ಸನ್ನಿ ಲಿಯೋನ್ ಮೊದಲಿಗೆ ಹೋಲಿಸಿಕೊಂಡರೆ ಬಹಳಷ್ಟು ಗೌರವ ಗಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸನ್ನಿಯ ಬಹುಮುಖ ವ್ಯಕ್ತಿತ್ವ ಹಾಗೂ ಸಮಾಜ ಸೇವೆ ಎನ್ನಬಹುದು. ಕೆನಡಾದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಸನ್ನಿ ಲಿಯೋನ್ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲೇ ಕುಟುಂಬದ ಜೀವನ ನಿರ್ವಹಣೆಗೆ ಬೇಕರಿಗೆ ಕೆಲಸಕ್ಕೆ ಹೋಗುತ್ತಿದ್ದರು. 

66

ಶ್ರೀಮಂತಿಕೆಯ ಕನಸು ಕಂಡಿದ್ದ ಸನ್ನಿಗೆ ಆ ಕೆಲಸದಲ್ಲಿ ಸಂಬಳ ಕಮ್ಮಿ ಎನಿಸಿದಾಗ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದರು. ಹೀಗೆ, ಎಲ್ಲಿ ಸಂಬಳ ಹೆಚ್ಚು ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತ ಹಣ ಸಂಪಾದನೆಗೆ ಹೆಚ್ಚು ಆಸಕ್ತಿ ತೋರಿಸಿದ್ದರು ಸನ್ನಿ ಲಿಯೋನ್. ಬಳಿಕ ಮ್ಯಾಗಝಿನ್ ಒಂದಕ್ಕೆ ಕವರ್ ಪೇಜ್‌ ಫೋಟೋಗೆ ಫೋಸ್‌ ಕೊಟ್ಟು ಫೇಮಸ್ ಆಗಿಬಿಟ್ಟರು ಸನ್ನಿ ಲಿಯೋನ್.
 

Read more Photos on
click me!

Recommended Stories