Movies Release List: 2025ರ ಡಿಸೆಂಬರ್ ಬಂದಿದೆ. ಈ ಬಾರಿ ವರ್ಷದ ಅಂತ್ಯ ಧಮಾಕಾದಿಂದ ಕೂಡಿರಲಿದೆ. ಹೌದು, ಒಂದಕ್ಕಿಂತ ಒಂದು ಸೂಪರ್ ಸಿನಿಮಾಗಳು ರಿಲೀಸ್ ಆಗಲಿವೆ. ಡಿಸೆಂಬರ್‌ನಲ್ಲಿ ಮೊದಲು ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಜೊತೆಗೆ ಕೆಲವು ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳು ಕೂಡಾ ಬರ್ತಿವೆ.
'ಧುರಂಧರ್' ಸಿನಿಮಾವು ಆದಿತ್ಯ ಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್. ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಮಾಧವನ್, ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.
26
'ತೂ ಮೇರಿ ಮೈ ತೇರಾ...ʼ ಸಿನಿಮಾ
'ತೂ ಮೇರಿ ಮೈ ತೇರಾ...' ಒಂದು ರೊಮ್ಯಾಂಟಿಕ್ ಕಾಮಿಡಿ. ಸಮೀರ್ ವಿದ್ವಾಂಸ್ ನಿರ್ದೇಶನದ ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ, ನೀನಾ ಗುಪ್ತಾ, ಜಾಕಿ ಶ್ರಾಫ್ ಇದ್ದಾರೆ. ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.
36
'ಮೇರೆ ರಹೋ' ಸಿನಿಮಾ
ಸುನೀಲ್ ಪಾಂಡೆ ನಿರ್ದೇಶನದ 'ಮೇರೆ ರಹೋ' ಸಿನಿಮಾ ಡಿಸೆಂಬರ್ 12ಕ್ಕೆ ರಿಲೀಸ್ ಆಗಲಿದೆ. ಇದರಲ್ಲಿ ಜುನೈದ್ ಖಾನ್, ಸಾಯಿ ಪಲ್ಲವಿ ಲೀಡ್ ರೋಲ್‌ನಲ್ಲಿದ್ದಾರೆ. ಇದನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿದೆ.
'ಇಕ್ಕೀಸ್' ಒಂದು ವಾರ್ ಡ್ರಾಮಾ ಚಿತ್ರ. ಇದು 1971ರ ಭಾರತ-ಪಾಕ್ ಯುದ್ಧದ ಹೀರೋ ಅರುಣ್ ಖೇತ್ರಪಾಲ್ ಜೀವನ ಆಧರಿಸಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಅಗಸ್ತ್ಯ ನಂದ, ಧರ್ಮೇಂದ್ರ ಇದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್.
56
ಕಿಸ್ ಕಿಸ್ಕೋ ಪ್ಯಾರ್ ಕರೂ 2'
ಕಪಿಲ್ ಶರ್ಮಾ ಅವರ 'ಕಿಸ್ ಕಿಸ್ಕೋ ಪ್ಯಾರ್ ಕರೂ 2' ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಅನುಕಲ್ಪ್ ಗೋಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ಕಪಿಲ್ ಜೊತೆ ವರೀನಾ ಹುಸೇನ್, ತ್ರಿಧಾ ಚೌಧರಿ ಇದ್ದಾರೆ. ಸಿನಿಮಾ ಡಿಸೆಂಬರ್ 12ಕ್ಕೆ ರಿಲೀಸ್ ಆಗಲಿದೆ.
66
'ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ'
ಸಿದ್ಧಾಂತ್ ರಾಜ್ ಸಿಂಗ್ ನಿರ್ದೇಶನದ 'ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ' ಡಿಸೆಂಬರ್ 19ಕ್ಕೆ ರಿಲೀಸ್ ಆಗಲಿದೆ. ಈ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಸಂಜಯ್ ಮಿಶ್ರಾ ಮತ್ತು ಮಹಿಮಾ ಚೌಧರಿ ಲೀಡ್ ರೋಲ್‌ನಲ್ಲಿದ್ದಾರೆ.