ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು

Published : Dec 17, 2025, 12:02 AM IST

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು, 22 ವರ್ಷದ ವಿದ್ಯಾರ್ಥಿನಿ ಎದೆ ನೋವಿನಿಂದ ಕುಸಿದು ಬಿದ್ದಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಇತ್ತ ಹಾಸ್ಟೆಲ್ ಇತರ ವಿದ್ಯಾರ್ಥನಿಯರು ಆಘಾತಕ್ಕೊಳಗಾಗಿದ್ದಾರೆ.

PREV
15
22 ವರ್ಷಧ ವಿದ್ಯಾರ್ಥಿನಿಗೆ ಹೃದಯಾಘಾತ

ಆರೋಗ್ಯ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಆತಂಕ ಸೃಷ್ಟಿಸುತ್ತಿದೆ. ಪ್ರಮುಖವಾಗಿ ಕೋರೋನಾ ಬಳಿಕ ಹೆಚ್ಚುತ್ತಿರುವ ಹೃದಯಾಘಾತ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ಇದೀಗ 22 ವರ್ಷದ ಬಿಕಾಂ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.

25
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಘಟನೆ

ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದ ದಿಶಾ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಇಂದು (ಡಿ.16) ಹಾಸ್ಟೆಲ್ ನಲ್ಲಿ ತೀವ್ರ ಎದೆ ನೋವಿನಿಂದ ವಿದ್ಯಾರ್ಥಿನಿ ದಿಶಾ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಕುಸಿದು ಬಿದ್ದ ಬೆನ್ನಲ್ಲೇ ದಿಶಾ ಮೃತಪಟ್ಟಿದ್ದಾಳೆ.

35
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ದಿಶಾ

ಶೃಂಗೇರಿಯ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದ ದಿಶಾ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಯಾಗಿದ್ದರು. ಬಿಕಾಂ ವಿದ್ಯಾಭ್ಯಾಸಕ್ಕಾಗಿ ಶೃಂಗೇರಿಯ ಜಿಸಿಬಿಎಂ ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಸಂಜೆ ಎದೆನೋವಿನಿಂದ ಬಳಲಿದ ದಿಶಾ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ.

45
ಮುಗಿಲು ಮುಟ್ಟಿದ ಆಕ್ರಂದನ

ಓದಿನಲ್ಲು ಚುರುಕಾಗಿದ್ದ ದಿಶಾ, ಆರೋಗ್ಯವಾಗಿದ್ದಳು. ಗಂಭೀರ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ದಿಶಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರು ತೀವ್ರ ಆತಂಕಗೊಂಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ

55
ಆತಂಕ ಹೆಚ್ಚಿಸಿದ ಹೃದಯಾಘಾತ

ಯುವ ಸಮೂಹದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೊಡಗಿನ ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟ ಗ್ರಾಮದ 20 ವರ್ಷದ ಗಣೇಶ್ ಹೃದಯಾಘಾತಕ್ಕೆ ಬಲಿಯಾಗಿದ್ದರು. ಮನೆಯಲ್ಲಿ ಇರುವಾಗಲೇ ಕುಸಿದು ಬಿದ್ದು ಗಣೇಶ್ ಮೃತಪಟ್ಟಿದ್ದರು.

ಹೃದಯಾಘಾತದಿಂದ ಯುವಕ ಸಾವು

Read more Photos on
click me!

Recommended Stories