ಶೃಂಗೇರಿ ಶಾರದಾ ಪೀಠಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಭೇಟಿ !

First Published | Jan 14, 2021, 3:14 PM IST

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ದಿಢೀರ್ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಇಡೀ ದೇಶದ ಕುತೂಹಲ ಕೆರಳಿದ್ದ ಕೃಷಿ ಕಾಯ್ದೆ ಹಾಗೂ ಪ್ರತಿಭಟನೆ ಕುರಿತು ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ, ಇದೀಗ ದಿಢೀರ್ ಶೃಂಗೇರಿಗೆ ಭೇಟಿ ನೀಡಿದ್ದಾರೆ.
ಶೃಂಂಗೇರಿಯ ಶಾರದಾಂಬೆ ದರ್ಶನ ಪಡೆದ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ , ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜಗದ್ಗುರುಗಳನ್ನು ಭೇಟಿ ಮಾಡಿದರು.
Tap to resize

ಉಭಯ ಶ್ರೀಗಳ ಭೇಟಿ ಮಾಡಿದ ಶರದ್ ಅರವಿಂದ್ ಬೊಬ್ಡೆ ಆಶೀರ್ವಾದ ಪಡೆದರು. ಬಳಿಕ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಕೆಲ ಹೊತ್ತು ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.
ಬೊಬ್ಡೆ ಆಗಮನದಿಂದ ಜಿಲ್ಲಾಡಳಿತ ಭದ್ರತೆ ಕ್ರಮ ಕೈಗೊಂಡಿತ್ತು. ಇನ್ನು ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಎಸ್.ಎ.ಬೊಬ್ಡೆಗೆ ಪೂರ್ಣಕುಂಭ ಸ್ವಾಗತ ನೀಡಿದರು.
ಚಿಕ್ಕಮಗಳೂರಿನಲ್ಲಿರುವ ಶೃಂಗೇರಿ ಶಾರದಾಂಬೆಗೆ ನ್ಯಾಯಮೂರ್ತಿ ಬೊಬ್ಡೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2019ರಲ್ಲಿ ಬೊಬ್ಡೆ ಶಾರದಾಂಬೆಗೆ ಭೇಟಿ ನೀಡಿದ್ದರು.
ಕಳೆದ ಬಾರಿಯ ದೇವಸ್ಥಾನ ಭೇಟಿಯಲ್ಲಿ ನ್ಯಾಯಮೂರ್ತಿ ಶೃಂಗೇರಿ ಮಠದ ಆವರಣದಲ್ಲಿರುವ ಇತರ ದೇವಸ್ಥಾನಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು
ಶಕ್ತಿ ಗಣಪತಿ, ಶಂಕರಾಚಾರ್ಯ ದೇವಸ್ಥಾನ, ತೋರಣ ಗಣಪತಿ, ವಿದ್ಯಾಶಂಕರ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನಗಳಿಗೂ ಕಳೆದ ಬಾರಿ ನ್ಯಾಯಮೂರ್ತಿ ಬೊಬ್ಡೆ ಭೇಟಿ ನೀಡಿದ್ದರು.

Latest Videos

click me!