ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ, ಡೇಟಿಂಗ್‌ ಮಾಡ್ತಿದೀರಾ? ರಶ್ಮಿಕಾ ಉತ್ತರಗಳಿವು..!

First Published | Apr 28, 2021, 9:57 AM IST

ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜತೆ ಪ್ರಶ್ನೋತ್ತರದಲ್ಲಿ ಭಾಗಿಯಾಗಿದ್ದಾರೆ. ಮದುವೆ, ಡೇಟಿಂಗ್‌, ವಿಜಯ್‌ ದೇವರಕೊಂಡ ಜತೆ ಮತ್ತೆ ಸಿನಿಮಾ, ಬಾಲಿವುಡ್‌ನಲ್ಲಿ ಮೂರನೇ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವುದು ಸೇರಿದಂತೆ ರಶ್ಮಿಕಾ ಹೇಳಿದ ಸಂಗತಿಗಳು ಇಲ್ಲಿವೆ.

1. ವಿಜಯ್‌ ದೇವರಕೊಂಡ ಜತೆ ಮತ್ತೆ ಸಿನಿಮಾ ಯಾವಾಗ ಮಾಡುತ್ತೀರಿ?ಈ ಪ್ರಶ್ನೆಯನ್ನು ವಿಜಯ್‌ ದೇವರಕೊಂಡ ಅವರನ್ನೇ ಕೇಳಬೇಕು. ಒಳ್ಳೆಯ ಕತೆ, ಪಾತ್ರ ಮತ್ತು ನಿರ್ದೇಶಕರು ಬಂದರೆ ನಾನಂತೂ ರೆಡಿ.
2. ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ, ಡೇಟಿಂಗ್‌ ಮಾಡುತ್ತಿದ್ದೀರಾ?ಬಾಯ್‌ಫ್ರೆಂಡೂ ಇಲ್ಲ, ಡೇಟಿಂಗೂ ಮಾಡ್ತಿಲ್ಲ. ಸಿನಿಮಾ ಮಾಡಕ್ಕೇ ಪುರುಸೊತ್ತಿಲ್ಲ, ಇನ್ನು ಡೇಟಿಂಗಿಗೆ ಎಲ್ಲಿಂದ ಟೈಮ್‌ ಕೊಡೋಣ?
Tap to resize

3. ಆದರೆ, ಬೆರಳಲ್ಲಿ ರಿಂಗ್‌ ಇದೆಯಲ್ಲ!?ಇದು ಅಭಿಮಾನಿ ಕೊಟ್ಟಿರೋ ಗಿಫ್ಟ್‌. ಅದಕ್ಕೇ ಸದಾ ಹಾಕ್ಕಂಡಿರ್ತೀನಿ. ನೀವು ಅಂದ್ಕೊಂಡಿರೋ ಹಂಗೇನಿಲ್ಲ.
4. ಈಗ ಯಾವ ಸಿನಿಮಾ ಶೂಟಿಂಗ್‌ ಮಾಡುತ್ತಿದ್ದೀರಿ?ಹೈದರಾಬಾದಲ್ಲಿ ಅಲ್ಲೂ ಅರ್ಜುನ್‌ ಜತೆಗೆ ‘ಪುಷ್ಪ’ ಸಿನಿಮಾ ಶೂಟಿಂಗ್‌ನಲ್ಲಿದ್ದೀನಿ . ಅಲ್ಲೂ ಅರ್ಜುನ್‌ ಸೂಪರ್‌ ಹಾಗೂ ಸ್ವೀಟ್‌ ನಟ. ಅಷ್ಟೇ ಸಿಂಪಲ್‌ ಜನ.
5. ನಿಮ್ಮ ನೆಚ್ಚಿನ ಊರು ಯಾವುದು ಮತ್ತು ಯಾಕೆ?- ನನ್ನೂರು, ಕೊಡಗು. ನನ್ನ ಮನೆ ಅಚ್ಚುಮೆಚ್ಚು. ಮನೇಲಿದ್ರೇ ನಾನು ನೆಮ್ಮದಿಯಾಗಿರ್ತೀನಿ.
6. ಹಾಡ್ತೀರಾ?ಎಷ್‌್ಟಬೇಕಾದ್ರೂ ಕುಣೀತೀನಿ, ಹಾಡೋದು ಮಾತ್ರ ಉಹೂಂ!
7. ನೀವು ನಿಮ್ಮಲ್ಲಿ ಕಂಡುಕೊಂಡಿರುವ ಗುಣಗಳೇನು?ಎಷ್ಟುಬೇಕೋ ಅಷ್ಟೇ ಮಾತು. ಹೇಳಿದ್ದನ್ನೇ ಹೇಳೋದು ಕೇಳೋದು ಬೋರು!
8. ಬೇರೆ ಭಾಷೆಯಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದೀರಾ?ಮತ್ತೊಂದು ಹಿಂದಿ ಸಿನಿಮಾ ಸೈನ್‌ ಮಾಡಿದ್ದೀನಿ. ಇನ್ನೇನು ಶೂಟಿಂಗು ಶುರು ಆಗತ್ತೆ. ಸದ್ಯಕ್ಕೆ ಸಿದ್ದಾಥ್‌ರ್‍ ಮೆಲ್ಹೋತ್ರಾ ಜತೆ ‘ಮಿಷನ್‌ ಮಜ್ನು’ ಹಾಗೂ ಅಮಿತಾಭ್‌ ಬಚ್ಚನ್‌ ಜತೆ ‘ಗುಡ್‌ ಬೈ’ ಸಿನಿಮಾ ನಡೀತಿದೆ. ಒಪ್ಕೊಂಡಿರೋದು ಮೂರನೇದು.
9. ಎಷ್ಟುಚಿತ್ರಗಳು ನಿಮ್ಮ ಕೈಯಲ್ಲಿವೆ?ಎರಡು ತೆಲುಗು, ಒಂದು ತಮಿಳು, ಮೂರು ಹಿಂದಿ. ನೀವೇ ಲೆಕ್ಕ ಮಾಡ್ಕಳಿ!

Latest Videos

click me!