ಫೋಟೋಶೂಟ್ ಮಾಡಿಸಿಕೊಂಡಿದ್ದೀರಿ, ಏನ್ ವಿಶೇಷ?: ಸುಮ್ನೆ, ಕ್ಯಾಶುವಲ್ ಶೂಟ್ ಅಷ್ಟೇ. ಕಾಂಸೆಪ್ಟ್ ಇಟ್ಕೊಂಡು ಮಾಡಿರೋದಲ್ಲ. ಲಾಕ್ಡೌನ್‌ಗೂ ಮೊದಲೇ ಒಂದು ರೆಸಾರ್ಟ್‌ನಲ್ಲಿ ಈ ಶೂಟ್ ನಡೆದಿತ್ತು. ಆ ಜಾಗವೂ ಸಕತ್ತಾಗಿತ್ತು.
ವಾರಗಳ ಹಿಂದೆ ಬ್ಯುಸಿ ಶೆಡ್ಯೂಲ್, ಈಗ ಕಂಪ್ಲೀಟ್ ಫ್ರೀ. ಹೇಗಿದೆ ಈ ಅನುಭವ? :ಫ್ರೀ ಏನೋ ಇದೆ, ಆದರೆ ಮನೇಲೇ ಇರಬೇಕು. ಸನ್ನಿವೇಶವೇ ಹಾಗಿದೆ. ಒಪ್ಪಿಕೊಳ್ಳೋದು ಅನಿವಾರ್ಯ. ಸಿನಿಮಾ, ವೆಬ್ ಸೀರೀಸ್, ಅಡುಗೆ, ವರ್ಕೌಟ್ ಅಂತೆಲ್ಲ ದಿನ ಸಾಗ್ತಿದೆ.
ಏನೆಲ್ಲ ವರ್ಕೌಟ್ ಈ ಟೈಮಲ್ಲಿ? : ಯೋಗ ಹೆಚ್ಚು ಹೆಚ್ಚು ಮಾಡ್ತೀನಿ. ವೈಟ್ ಟ್ರೈನಿಂಗ್, ವರ್ಕೌಟ್‌ಸ್ ಎಲ್ಲ ಇರುತ್ತೆ. ಹಿಂದೆಯೂ ಜಿಮ್‌ಗೆಹೋಗ್ತಿರಲಿಲ್ಲ. ಮನೆಯಲ್ಲೇ ಮೆಶಿನ್ ಇಟ್ಕೊಂಡು ವರ್ಕೌಟ್ ಮಾಡೋ ರೂಢಿ.
ನಿಮಗೆ ನಟಿಸೋದಕ್ಕೆ ಎಂಥಾ ಸಿನಿಮಾ, ಎಂಥಾ ಪಾತ್ರ ಇಷ್ಟ?: ಪರ್ಫಾರ್ಮೆನ್ಸ್ ಓರಿಯೆಂಟೆಡ್ ಸಿನಿಮಾ ಬಹಳ ಇಷ್ಟ. ಜೊತೆಗೆ ನನ್ನ ಪಾತ್ರ ಕ್ಯೂಟ್, ಬಬ್ಲಿ ಆಗಿರ ಬೇಕು ಅನ್ನೋದೂ ಇದೆ. ಈಗ ಜೊತೆ ಜೊತೆಯಲಿ ಸೀರಿಯಲ್‌ನ ಪಾತ್ರ ಅಂಥದ್ದು. ತ್ರಿಬ್ಬಲ್ ರೈಡಿಂಗ್ ಚಿತ್ರದಲ್ಲಿ ಮುಗ್ಧ ಯುವತಿ ಪಾತ್ರ.
ತ್ರಿಬ್ಬಲ್ ರೈಡಿಂಗ್ ಸಿನಿಮಾದ ಒಂದು ಫನ್ನಿ ಮೊಮೆಂಟ್ ಹೇಳಬಹುದಾ? : ತ್ರಿಬ್ಬಲ್ ರೈಡಿಂಗ್ ಟೀಮ್ ಸಕತ್ ಸಪೋರ್ಟಿವ್. ನಿರ್ದೇಶಕರೂ ಫ್ರೆಂಡ್ಲಿ ಆಗಿದ್ರು. ಕೊರೋನಾ ಅಲೆ ತಗ್ಗಿದ್ರೂ, ಅದರ ಹವಾ ಇನ್ನೂ ಇದ್ದ ಟೈಮು. ನನಗೆ ಕೆಮ್ಮು, ನೆಗಡಿ ಇತ್ತು. ಗಣೇಶ್ ಅವರನ್ನು ಹಗ್ ಮಾಡೋ ಸೀನ್ ಇತ್ತು. ಆ ಅನಾರೋಗ್ಯದಲ್ಲೇ ಆಕ್ಟ್ ಮಾಡಿದ್ದೆ. ಮರುದಿನ ನೋಡಿದ್ರೆ ಅವರಿಗೂ ನೆಗಡಿ, ಕೆಮ್ಮು. ಅದನ್ನು ಇಡೀ ಸೆಟ್‌ನಲ್ಲಿ ಹೇಳ್ಕೊಂಡು ಓಡಾಡ್ತಾ ನಗಿಸ್ತಿದ್ರು ಗಣೇಶ್.
ನಿಮ್ಮ ಜೊತೆ ಜೊತೆಯಲಿ ಧಾರಾವಾಹಿ ಕತೆ ಏನಾಗ್ತಿದೆ?: ಈ ಲಾಕ್‌ಡೌನ್ ಮುಗಿಯೋವರೆಗೆ ಬ್ಯಾಂಕಿಂಗ್ ಇದೆ. ಆಮೇಲೂ ಮುಂದುವರಿದರೆ ರಿಪೀಟ್ ಟೆಲಿಕಾಸ್ಟ್ ಅನಿವಾರ್ಯ. ಇನ್ನು ನಮ್ಮ ಈ ಸೀರಿಯಲ್ ಅಭಿಮಾನಿಗಳ ವಿಚಾರಕ್ಕೆ ಬಂದ್ರೆ ಅವರಿಗೆ ಅನು, ಆರ್ಯ ದೂರ ಆಗೋದು ಇಷ್ಟಾನೇ ಆಗಲ್ಲ.ಅವ್ರಿಬ್ರನ್ನು ಒಂದು ಮಾಡಿಸಿ ಅಂತ ಡಿಮ್ಯಾಂಡ್ ಮಾಡ್ತಾರೆ. ಅದು ಅವರ ಪ್ರೀತಿ ತೋರಿಸುತ್ತೆ.
ಮತ್ತೆ ಸೀರಿಯಲ್ ಕತೆ? : ನನಗೆ ಎರಡೂ ಬಹಳ ಮುಖ್ಯ. ಸೀರಿಯಲ್, ಸಿನಿಮಾ ಜೊತೆ ಜೊತೆಯಲ್ಲೇ ಹೋಗುತ್ತಿರುತ್ತೆ
ಯಾವ ಸಿನಿಮಾ ನೋಡಿದ್ರಿ? : ಇವತ್ತು ನೋಡಿದ್ದು ಸಿನಿಮಾ ಬಂಡಿ ಅಂತ. ತೆಲುಗು ಭಾಷೆಯದ್ದು. ಪರ್ಫಾಮೆನ್ಸ್ ಜೊತೆಗೆ ಕತೆಯನ್ನು ಟ್ರೀಟ್ಮಾಡಿದ ರೀತಿ ಇಷ್ಟ ಆಯ್ತು.
ಹೊಸ ಸಿನಿಮಾ ಒಪ್ಕೊಂಡಿದ್ದೀರಾ?: ಇಲ್ಲ, ತುಂಬ ಆಫರ್‌ಗಳು ಬಂದಿವೆ. ಇನ್ನೂ ಯಾವುದನ್ನೂ ಓಕೆ ಮಾಡಿಲ್ಲ. ತ್ರಿಬ್ಬಲ್ ರೈಡಿಂಗ್ ಸಿನಿಮಾದ ಒಂದು ಹಾಡಿನ ಶೂಟಿಂಗ್ ವಿದೇಶದಲ್ಲಿ ಆಗ್ಬೇಕಿತ್ತು. ಅದು ಬಾಕಿ ಇದೆ. ಡಬ್ಬಿಂಗ್ ಮುಗಿಯಬೇಕಿದೆ. ಆಮೇಲೆ ಒಳ್ಳೆ ಸಿನಿಮಾ ಸಿಕ್ಕರೆ ನಟಿಸಲು ರೆಡಿ