ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಮಸುಕಾಗದಂತೆ ಕಾಪಾಡುವುದು ಹೇಗೆ?, ಈ ಬಾರಿಯ ಬಿಸಿಲು ವಿಪರೀತವಾಗಿದೆ. ಹಲವರು ಅಸ್ವಸ್ಥರಾಗುತ್ತಿದ್ದಾರೆ. ಈ ಪರಿ ಬಿಸಿಲಿಗೆ ನಿಮ್ಮ ನೆಚ್ಚಿನ ಕಾರಿನ ಬಣ್ಣ ಫೇಡ್ ಆಗದಂತೆ ತಡೆಯಲು ಇಲ್ಲಿದೆ ಸೂತ್ರ
ಇತ್ತೀಚಿನ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ವಾತಾವರಣ ಗಂಭೀರವಾಗುತ್ತಿದೆ. ಉರಿ ಬಿಸಿಲು ಹಲವರನ್ನು ಅಸ್ವಸ್ಥರನ್ನಾಗಿ ಮಾಡಿದೆ. ಬಿಸಿನಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಲು ವೈದ್ಯರು ಸೂಚಿಸುತ್ತಲೇ ಇದ್ದಾರೆ. ಈ ಬಿಸಿಲಿಗೆ ನೆಚ್ಚಿನ ಕಾರಿನ ಬಣ್ಣ ಮಾಸುವುದು ಸಹಜ. ಆದರೆ ಸಣ್ಣ ಉಪಾಯ ಮಾಡಿದರೆ ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಫೇಡ್ ಆಗದಂತೆ ಕಾಪಾಡಿಕೊಳ್ಳಬಹುದು.
26
ಡಾರ್ಕ್ ಬಣ್ಣದ ಕಾರು
ಪ್ರಮುಖವಾಗಿ ಡಾರ್ಕ್ ಬಣ್ಣದ ಕಾರಿನ ಪೈಂಟ್ ಬೇಗನ ಮಾಸುತ್ತದೆ. ಮುಖ್ಯ ಕಾರಣ ಕಪ್ಪು, ಕಡು ನೀಲಿ, ಕೆಂಪು, ಗ್ರೇ ಸೇರಿದಂತೆ ಕಡು ಬಣ್ಣದ ಕಾರುಗಳು ಸೂರ್ಯನ ಬೆಳಕಿನ ಯುವಿಗಳನ್ನು ಬೇಗನೆ ಹೀರಿಕೊಳ್ಳುತ್ತದೆ. ಇದರಿಂದ ಕಡು ಬಣ್ಣದ ಕಾರುಗಳ ಪೈಂಟ್ ಬೇಗನೆ ಫೇಡ್ ಆಗುತ್ತದೆ. ಇದನ್ನು ತಪ್ಪಿಸಲು ಕೆಲ ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು.
36
ಕಾರಿನ ಪಾರ್ಕಿಂಗ್
ಸೂರ್ಯನ ಬಿಸಿನಲ್ಲಿ ಕಾರು ಪಾರ್ಕ್ ಮಾಡಿದರೆ ಎಪ್ರಿಲ್ ಹಾಗೂ ಮೇ ತಿಂಗಳ ಬಿಸಿಲು ಸಾಕು. ಎರಡೇ ತಿಂಗಳಲ್ಲಿ ಕಾರು ಫೇಡ್ ಆಗಲಿದೆ. ಹೀಗಾಗಿ ನೆರಳಿನಲ್ಲಿ ಪಾರ್ಕಿಂಗ್ ಉತ್ತಮ. ಅಂದರೆ ಮರದ ಕೆಳಗೆ ಪಾರ್ಕಿಂಗ್ ಹೆಚ್ಚು ಉತ್ತಮವಲ್ಲ. ಹಕ್ಕಿಗಳ ಹಿಕ್ಕೆ, ಮರದ ರೆಂಬೆ ಕೊಂಬೆಗಳೂ ಬಿದ್ದರೂ ಕಾರಿನ ಪೈಂಟ್ ಹಾಗೂ ಬಾಡಿ ಡ್ಯಾಮೇಜ್ ಆಗಲಿದೆ. ಹೀಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಮೇಲ್ಚಾವಣಿ ಇರುವ ಕಡೆ ಪಾರ್ಕಿಂಗ್ ಉತ್ತಮ
ಬೆಂಗಳೂರು ಸೇರಿದಂತೆ ಹಲವೆಡೆ ಕಾರು ಪಾರ್ಕ್ ಮಾಡಲು ಜಾಗವೇ ಇರುವುದಿಲ್ಲ. ಈ ವೇಳೆ ಬಿಸಿನಲ್ಲೇ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಇಂತಹ ಸಂದರ್ಭಗಳಲ್ಲಿ ಉತ್ತಮ ಕಾರು ಕವರ್ ಖರೀದಿಸಿ. ಸೂರ್ಯನ ಕಿರಣಗಳ ಯುವಿಗಳನ್ನು ತಡೆಯುವ ಹಾಗೂ ಕಾರಿನ ಉತ್ತಮ ರಕ್ಷಣೆ ನೀಡುವ ಕವರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕವರ್‌ಗಳು ಒಂದು ಹಂತದವರಗೆ ಕಾರಿಗೆ ರಕ್ಷಣೆ ನೀಡಲಿದೆ.
56
ಕಾರು ವಾಶಿಂಗ್
ಬೇಸಿಗೆಯಲ್ಲಿ ಸೂರ್ಯನ ಕಿರಣಗಳನ್ನು ಕಾರು ಹೀರಿಕೊಳ್ಳುತ್ತದೆ. ಇತ್ತ ಧೂಳು ಕಾರಿನ ಮೇಲಿದ್ದಾಗ ಸಹಜವಾಗಿ ಕಾರಿನ ಬಣ್ಣ ಮಸುಕಾಗುತ್ತದೆ. ಹೀಗಾಗಿ ನಿಯಮಿತವಾಗಿ ಕಾರು ವಾಶ್ ಮಾಡುವುದು ಉತ್ತಮ. ಕಾರು ವಾಶ್ ಮಾಡುವಾಗ ಮೊದಲು ಕಾರಿನ ಮೇಲೆ ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಿ ತೊಳೆಯಬೇಕು.
66
ವ್ಯಾಕ್ಸಿಂಗ್ ಬಳಕೆ
ಕಾರಿಗೆ ವ್ಯಾಕ್ಸಿಂಗ್ ಅಥವಾ ಸಿಲಾಂಟ್ ಬಳಕೆಯಿಂದ ಸೂರ್ಯನ ಪ್ರಖರಣ ಕಿರಣಗಳಿಂದ ರಕ್ಷಣೆ ಸಿಗಲಿದೆ. ವ್ಯಾಕ್ಸ್ ರಕ್ಷಣಾತ್ಮಕ ಪದರದ ರೀತಿ ಕೆಲಸ ಮಾಡುತ್ತದೆ. ಇದರಿಂದ ಬೇಗನ ಫೇಡ್ ಆಗುವುದನ್ನು ತಪ್ಪಿಸುತ್ತದೆ. ಬೇಸಿಗೆ ಕಾಲ ಆರಂಭಗೊಳ್ಳುವ ಮುನ್ನವೇ ವ್ಯಾಕ್ಸಿಂಗ್ ಮಾಡಿಸುವುದು ಉತ್ತಮ.ಇನ್ನು ಸೆರಾಮಿಕ್ ಕೋಟಿಂಗ್, ಪೈಂಟ್ ಪ್ರೊಟೆಕ್ಷನ್ ಫಿಲ್ಮ್ ಸೇರಿದಂತೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ.