ಬೆಂಗಳೂರಲ್ಲಿ ಆಡಿ SQ8 ಲಾಂಚ್, ಇದು ಆಲ್ ವ್ಹೀಲ್ ಸ್ಟೀರಿಂಗ್ ಫೀಚರ್ ಕಾರು, ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಸೇರಿದಂತೆ ಹಲವು ಹೊಸತನ ಈ ಕಾರಿನಲ್ಲಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಲಕ್ಷುರಿ ಕಾರಾದ ಆಡಿ ಇದೀಗ ಬೆಂಗಳೂರಲ್ಲಿ ಆಡಿ SQ8 ಕಾರು ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಪವರ್ ಪರ್ಫಾಮೆನ್ಸ್ ಕಾರು ಇದಾಗಿದೆ. ಈ ಕಾರಿನಲ್ಲಿ ಕೆಲ ವಿಶೇಷ ತಂತ್ರಜ್ಞಾನ ಬಳಸಲಾಗಿದೆ. ಸಾಮಾನ್ಯವಾಗಿ ಸ್ಟೀರಿಂಗ್ ತಿರುಗಿಸಿದರೆ ಮುಂಭಾಗದ ಎರಡು ಚಕ್ರಗಳಿಗೆ ಮಾತ್ರ ತಿರುಗುತ್ತದೆ. ಆದರೆ ಈ ಕಾರಿನಲ್ಲಿ ಡ್ರೈವ್ ಮತ್ತಷ್ಟು ಸುಲಭ ಮಾಡಲು ನಾಲ್ಕು ಚಕ್ರಕ್ಕೂ ಸ್ಟೀರಿಂಗ್ ಫೀಚರ್ ನೀಡಲಾಗಿದೆ. ಇದರಿಂದ ಸುರಕ್ಷತೆ ಹಾಗೂ ಡ್ರೈವಿಂಗ್ ಮತ್ತಷ್ಟು ಸುಲಭವಾಗಿದೆ.
25
ಹೊಸ SQ8 ಕಾರಿನ ಬೆಲೆ
ಬೆಂಗಳೂರಲ್ಲಿ ಬಿಡುಗಡೆಯಾದ SQ8 ಆಡಿ ಕಾರಿನ ಆರಂಭಿಕ ಬೆಲೆ 1,77,72,000 ರೂಪಾಯಿ (ಎಕ್ಸ್ ಶೋ ರೂಂ). ಇದರ ಜೊತೆಗೆ 10 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್, ನಿರ್ವಹಣಾ ಪ್ಯಾಕೇಜ್ ಸೇರಿದಂತೆ ಹಲವು ಹೆಚ್ಚುವರಿ ಸೌಲಭ್ಯಗಳು ಲಭ್ಯವಿದೆ.
35
ಎಂಜಿನ್ ವಿಶೇಷತೆ
ಆಡಿ SQ8 ಕಾರು 4.0-ಲೀಟರ್ V8 TFSI ಇಂಜಿನ್ ಹೊಂದಿದೆ. ಅತ್ಯಂತ ಬಲಿಷ್ಠ ಎಂಜಿನ್ ಇದಾಗಿದೆ. 373 kW ಪವರ್ ಮತ್ತು 770 Nm ಟಾರ್ಕ್ ಉತ್ಪಾದಿಸುತ್ತದೆ. ಕೇವಲ 4.1 ಸೆಕೆಂಡುಗಳಲ್ಲಿ 0-100 ಕಿಮೀ ವೇಗ ತಲುಪಲಿದೆ. ಗಂಟೆಗೆ ಗರಿಷ್ಠ 250 ಕಿಮೀ ವೇಗದಲ್ಲಿ ಚಲಿಸಬಲ್ಲದು.
ಪರ್ಮನೆಂಟ್ ಆಲ್-ವೀಲ್ ಡ್ರೈವ್ , ಅಡಾಪ್ಟಿವ್ ಏರ್ ಸಸ್ಪೆನ್ಷನ್ ಮತ್ತು ಆಲ್-ವೀಲ್ ಸ್ಟೀರಿಂಗ್ ಸೌಲಭ್ಯಗಳನ್ನು ಇದು ಹೊಂದಿದೆ. ಎಚ್‌ಡಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು , ಪನೋರಮಿಕ್ ಸನ್‌ರೂಫ್ ಮತ್ತು ಫ್ರೇಮ್‌ಲೆಸ್ ಬಾಗಿಲುಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಇವುಗಳ ಜೊತೆಗೆ 22-ಇಂಚಿನ ಅಲಾಯ್ ವೀಲ್ ಆಯ್ಕೆಗಳೂ ಇವೆ.
55
ಗರಿಷ್ಠ ಸುರಕ್ಷತೆ
ಸುರಕ್ಷತೆ ವಿಚಾರದಲ್ಲೂ ಆಡಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಕಾರಿನಲ್ಲಿ 8 ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಸುಧಾರಿತ ಫೀಚರ್ ಲಭ್ಯವಿದೆ. 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜಿಂಗ್, 4-ಝೋನ್ ಆಟೋಮ್ಯಾಟಿಕ್ ಏರ್ ಕಂಡೀಷನಿಂಗ್ ಕೂಡ ಸೇರಿದೆ. 8 ಆಕರ್ಷಕ ಬಣ್ಣಗಳಲ್ಲಿ ಕಾರು ಲಭ್ಯವಿದೆ.