ಹೊಸ ಅವತಾರ, ದಾಖಲೆ ಮೈಲೇಜ್, 4.99 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಬರುತ್ತಿದೆ ವ್ಯಾಗನರ್

Published : Sep 13, 2026, 04:35 PM IST

ಮಾರುತಿ ಸುಜುಕಿ ಇದೀಗ ಹೊಸ ಅವತಾರ, ಹೊಸ ಲುಕ್‌ನಲ್ಲಿ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶೇಷ ಅಂದರೆ ದಾಖಲೆಯ ಮೈಲೇಜ್ ಜೊತೆಗೆ ಇದರ ಬೆಲೆ ಸದ್ಯದ ವ್ಯಾಗನಆರ್ ಕಾರಿಗಿಂತಲೂ ಅಗ್ಗದಲ್ಲಿ ಲಭ್ಯವಾಗಲಿದೆ.

PREV
16
ಹೊಸತನದ ವ್ಯಾಗನ್ಆರ್ ಕಾರು

ಮಾರುತಿ ಸುಜುಕಿ ಇತ್ತೀಚೆಗೆ ಬ್ರೆಜಾ ಫೇಸ್‌ಲಿಫ್ಟ್, ಬಲೆನೋ ಫೇಸ್‌ಲಿಫ್ಟ್ ಸೇರಿದಂತೆ ಹಲವು ಕಾರುಗಳ ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆ ಮಾಡಿದೆ. ಈ ಮೂಲಕ ಅಪ್‌ಗ್ರೇಡೆಡ್ ಕಾರು ನೀಡಿದೆ. ಇದೀಗ ಮಾರಾಟದಲ್ಲಿ ದಾಖಲೆ ಬರೆದಿರುವ ವ್ಯಾಗನ್ಆರ್ ಕಾರನ್ನು ಹೊಸ ಅವತಾರ, ಹೊಸ ಫೀಚರ್ಸ್ ಜೊತೆ ಬಿಡುಗಡೆ ಮಾಡಲು ಸಜ್ಜಾಗಿದೆ. ವಿನ್ಯಾಸದಲ್ಲೂ ಕೆಲ ಬದಲಾವಣೆ ಇರಲಿದೆ. ಜೊತೆಗೆ ಬೆಲೆಯೂ ಆಕರ್ಷಕವಾಗಿದೆ.

26
ಟೆಸ್ಟಿಂಗ್ ಪೂರ್ಣಗೊಳಿಸಿದ ವ್ಯಾಗನ್‌ಆರ್

ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಕಾರು ಮೂರನೇ ಜನರೇಶನ್ ಕಾರಾಗಿದೆ. 2019ರಲ್ಲಿ ಬಿಡುಗಡೆಯಾಗಿದೆ. 2022 ಹಾಗೂ 2025ರಲ್ಲಿ ಸಣ್ಣ ಅಪ್‌ಡೇಟ್ ಪಡೆದುಕೊಂಡರೂ ಮೇಜರ್ ಬದಲಾವಣೆ ಇರಲಿಲ್ಲ. ಇದೀಗ ಮತ್ತಷ್ಟು ಆಕರ್ಷಕ ಲುಕ್ ಹಾಗೂ ಕೆಲ ಬದಲಾವಣೆಯೊಂದಿಗೆ ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಟೆಸ್ಟಿಂಗ್ ಪೂರ್ಣಗೊಳಿಸಿದೆ.

36
ಗ್ರಿಲ್ ಸೇರಿದಂತೆ ಹಲವು ಬದಲಾವಣೆ

ಬಲೆನೋ ಹಾಗೂ ಬ್ರೆಜಾದಲ್ಲಿ ಮಾಡಿದಂತೆ ಇದೀಗ ವ್ಯಾಗನ್ಆರ್ ಕಾರಿನ ಮುಂಭಾಗದ ಗ್ರಿಲ್ ಬದಲಾವಣೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಹೆಡ್‌ಲ್ಯಾಂಪ್ಸ್, ಡಿಆರ್‌ಎಲ್ ಬದಲಾಗಲಿದೆ. ಇನ್ನು ಹೊಸ ಶೈಲಿಯ ಅಲೋಯ್ ವ್ಹೀಲ್, ಹೊಸ ಇನ್ಫೊಟೈನ್ಮೆಂಟ್ ಸಿಸ್ಟಮ್, ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್ ಸೇರಿದಂತೆ ಹಲವು ಅಪ್‌ಡೇಟ್ ಹೊಸ ಕಾರಿನಲ್ಲಿ ಇರಲಿದೆ.

46
ಎಂಜಿನ್ ಅಪ್‌ಡೇಟ್

ಹೊಸ ವ್ಯಾಗನ್ಆರ್ ಕಾರಿನಲ್ಲಿ ಹೊಸ ಎಂಜಿನ್ ಬಳಸುವ ಸಾಧ್ಯತೆ ಇದೆ. ಕೆ12ಎನ್ 4 ಸಿಲಿಂಡರ್ ಎಂಜಿನ್ ಬದಲು 1.2 ಲೀಟರ್ Z ಸೀರಿಸ್, 3 ಸಿಲಿಂಡರ್ ಎಂಜಿನ್ ಬಳಸುವ ಸಾಧ್ಯತೆ ಇದೆ. ಈ ಹೊಸ ಎಂಜಿನ್ ಬಲೆನೋ, ಸ್ವಿಫ್ಟ್ ಹಾಗೂ ಡಿಸೈರ್ ಕಾರಿನಲ್ಲಿ ಬಲಸಲಾಗಿದೆ. ಇದೇ ಎಂಜಿನ್ ವ್ಯಾಗನ್ಆರ್ ಕಾರಿನಲ್ಲಿ ನೀಡುವ ಸಾಧ್ಯತೆ ಇದೆ. ಹೊಸ ಎಂಜಿನ್ ಉತ್ತಮ ಮೈಲೇಜ್ ಕೂಡ ನೀಡಲಿದೆ.

56
ವ್ಯಾಗನ್ಆರ್ ಕಾರಿನ ಮೈಲೇಜ್

ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಕಾರು ಪೆಟ್ರೋಲ್‌ಗೆ 23.56 ರಿಂದ 25.19 ಕಿಲೋಮೀಟರ್ ನೀಡಲಿದೆ. ಇನ್ನು ಸಿಎನ್‌ಜಿ ವರ್ಶನ್ ಕಾರು 34.05 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೊಸ ಎಂಜಿನ್‌ನಿಂದ ವ್ಯಾಗನ್ಆರ್ ಕಾರಿನ ಮೈಲೇಜ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ.

66
ಹೊಸ ಕಾರಿನ ಬೆಲೆ

ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಕಾರಿನ ಬೆಲೆ 4.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದರ ಅಸುಪಾಸಿನಲ್ಲಿ ಹೊಸ ಬೆಲೆ ಇರಲಿದೆ. ಕೈಗೆಟುಕುವ ದರದಲ್ಲಿ ಮಾರುತಿ ವ್ಯಾಗನ್ಆರ್ ಕಾರು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಕೆಲವೇ ತಿಂಗಳಲ್ಲಿ ಹೊಸ ಕಾರು ಮಾರುಕಟ್ಟೆ ಪ್ರವೇಶಸಲಿದೆ.

Read more Photos on
click me!

Recommended Stories