ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿ, ಆದರೆ ಫಾರ್ಚುರ್ ಕಾರಿಗಿಂತ ಭಾರಿ ಕಡಿಮೆ ಬೆಲೆಯಲ್ಲಿ ಕಿಯಾ ಸೊರೆಂಟೋ ಕಾರು ಭಾರತದಲ್ಲಿ ಲಾಂಚ್ ಆಗಿದೆ. ಹೈಬ್ರಿಡ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಕಿಯಾ ಬಹುನಿರೀಕ್ಷಿತ ಸೊರೆಂಟೋ ಕಾರು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಫಾರ್ಚುನರ್ ಕಾರಿಗಿಂತ ಕಡಿಮೆ ಬೆಲೆಗೆ ಸೊರೆಂಟೋ ಕಾರು ಬಿಡುಗಡೆಯಾಗಿದೆ. ಆಕರ್ಷಕ ಡಿಸೈನ್, ಹೆಚ್ಚು ಸ್ಥಳವಕಾಶ, ಅತ್ಯಾಧುನಿಕ ತಂತ್ರಜ್ಞಾನ ಅಡಾಸ್ ಲೆವೆಲ್ 2, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಅಸಿಸ್ಟೆನ್ಸ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳ ಸೊರೆಂಟೋ ಕಾರು ಲಾಂಚ್ ಆಗಿದೆ.
25
ಹೊಸ ಕಾರಿನ ಬೆಲೆ
ಹೊಸ ಕಿಯಾ ಸೊರೆಂಟೋ ಕಾರಿನ ಬೆಲೆ ಕೇವಲ 27.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಟೋಯೋಟಾ ಫಾರ್ಚುನರ್, ಸ್ಕೋಡಾ ಕೋಡಿಯಾಕ್ ಸೇರಿದಂತೆ ಈ ಸೆಗ್ಮೆಂಟ್‌ನಲ್ಲಿನ ಇತರ ಕಾರುಗಳಿಗೆ ಹೋಲಿಸಿದೆರೆ ಅತೀ ಕಡಿಮೆಯಾಗಿದೆ. ಸೊರೆಂಟ್ ಕಾರಿನಲ್ಲಿ ಡೀಸೆಲ್ ಎಂಜಿನ್ ಹಾಗೂ ಹೈಬ್ರಿಡ್ ಆಯ್ಕೆ ಲಭ್ಯವಿದೆ. ಇದರಲ್ಲಿ 9 ಟ್ರಿಮ್ ವೇರಿಯೆಂಟ್ ಲಭ್ಯವಿದೆ. ಡೀಸೆಲ್ ಬೇಸ್ ಮಾಡೆಲ್ ಬೆಲೆ 27.99 ಲಕ್ಷ ರೂಪಾಯಿ. ಇನ್ನು ಟಾಪ್ ಹೈಬ್ರಿಡ್ ಬ್ಲಾಕ್ ಲೈನ್ AWD ವೇರಿಯೆಂಟ್ ಬೆಲೆ 40.39 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
35
ಕಾರಿನ ಎಂಜಿನ್
ಸೊರೆಂಟೋ ಪವರ್‌ಫುಲ್ ಎಂಜಿನ್ ಹೊಂದಿದೆ. 1.6 ಲೀಟರ್ ಟರ್ಬೋ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. 180hp ಪವರ್ ಹಾಗೂ 65hp ಎಲೆಕ್ಟ್ರಿಕ್ ಮೋಟಾರ್‌ನಿಂದ ಒಟ್ಟು 245hp ಪವರ್ ಸಾಮರ್ಥ್ಯ ಹೊಂದಿದೆ. ಆಲ್ ವ್ಹೀಲ್ ಡ್ರೈವ್ ಈ ಕಾರಿನಲ್ಲಿದೆ. ಇನ್ನು 2.2 ಲೀಟರ್ ಡೀಸೆಲ್ ಎಂಜಿನ್ ಕಾರು 193hp ಪವರ್ ಹಾಗೂ 442Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.
ಕಿಯಾದ ಅತ್ಯಾಧುನಿಕ ಎಐ ಫೀಚರ್ ಇದರಲ್ಲಿದೆ. ವಾಯ್ಸ್ ಮೂಲಕ ಕಾರು ನಿಯಂತ್ರಿಸಲು ಸಾಧ್ಯವಿದೆ. ಹೇ ಕಿಯಾ ಎಂದು ಸೂಚನೆ ನೀಡಿದರೆ ಕಾರು ಅದರಂತೆ ಕಾರ್ಯನಿರ್ವಹಿಸುತ್ತದೆ. ಇದೇ ವೇಳೆ ಮ್ಯಾನ್ಯುಯೆಲ್ ಇಂಟಿಗ್ರೇಶನ್ ಕೂಡ ಸಪೋರ್ಟ್ ಮಾಡಲಿದೆ. ಅಡಾಸ್ ಲೆವೆಲ್ 2 ತಂತ್ರಜ್ಞಾನ ಇದರಲ್ಲಿದೆ.
55
10 ಏರ್‌ಬ್ಯಾಗ್ ಸೇರಿ ಗರಿಷ್ಠ ಸುರಕ್ಷತೆ
ಕಿಯಾ ಸೊರೆಂಟೋ ಕಾರಿನಲ್ಲಿ ಸುರಕ್ಷತಾ ಫೀಚರ್ಸ್ ಲಭ್ಯವಿದೆ. 10 ಏರ್‌ಬ್ಯಾಗ್ ನೀಡಲಾಗಿದೆ. ಸಾಮಾನ್ಯವಾಗಿ 7 ಏರ್‌ಬ್ಯಾಗ್ ನೀಡಲಾಗುತ್ತದೆ. ಆದರೆ ಹೆಚ್ಚಿನ ಸುರಕ್ಷತೆಗಾಗಿ 10 ನೀಡಲಾಗಿದೆ. ಡ್ರೈವಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೊಲಿಶನ್ ಅವಾಯ್ಡೆನ್ಸ್ ಸೇರಿದಂತೆ 30ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿದೆ. N3 ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರು ನಿರ್ಮಾಣಗೊಂಡಿದೆ.